ಸಿಬಿಲ್ ಸಂಗ್ರಹಕ್ಕೆ ಒಂದೇ ರೀತಿಯ ದತ್ತಾಂಶ- ಸಾಲ ಮಾಹಿತಿ ಕಂಪನಿಗಳಿಗೆ RBI ನಿಯಮ ಸಾಧ್ಯತೆ
Team Udayavani, Jan 27, 2024, 9:50 PM IST
ನವದೆಹಲಿ: ಇನ್ನು ಮುಂದೆ ಸಾಲ ಮಾಹಿತಿ ಕಂಪನಿಗಳು (ಕ್ರೆಡಿಟ್ ಇನಾ#ರ್ಮೇಷನ್ ಕಂಪನೀಸ್) ದತ್ತಾಂಶಗಳನ್ನು ಒಂದೇ ನಮೂನೆಯಲ್ಲಿ ಸಲ್ಲಿಸಬೇಕು ಎಂಬ ನಿಯಮವನ್ನು ಸದ್ಯದಲ್ಲೇ ಆರ್‌ಬಿಐ ಜಾರಿಗೆ ತರುವ ಸಾಧ್ಯತೆಯಿದೆ.
ದತ್ತಾಂಶಗಳಲ್ಲಿ ಲೋಪ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕುಗಳಿಗೆ ಆರ್‌ಬಿಐ ಷೋಕಾಸ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಇಂಥದ್ದೊಂದು ಅನುಮಾನ ಮೂಡಿದೆ.
ಹೊಸ ನಿಯಮ ಜಾರಿಯಾದರೆ, ಟ್ರಾನ್ಸ್ ಯೂನಿಯನ್, ಸಿಬಿಲ್, ಈಕ್ವಿಫ್ಯಾಕ್ಸ್, ಸಿಆರ್‌ಐಎಫ್ ಹೈ ಮಾರ್ಕ್, ಎಕ್ಸ್‌ಪೀರಿಯನ್ ಮುಂತಾದ ಎಲ್ಲ ಸಾಲ ಮಾಹಿತಿ ಕಂಪನಿಗಳು ಗ್ರಾಹಕರ ಸಾಲದ ದತ್ತಾಂಶಗಳನ್ನು ಒಂದೇ ನಮೂನೆಯಲ್ಲಿ ಸಲ್ಲಿಸಬೇಕಾಗುತ್ತದೆ. ಇದರಿಂದ, ಗ್ರಾಹಕರ ಕ್ರೆಡಿಟ್ ಸ್ಕೋರ್‌ನಲ್ಲಿ ವಿವರಿಸಲಾಗದಂಥ ವ್ಯತ್ಯಾಸ, ಸಾಲ ಪಾವತಿ ಪೂರ್ಣಗೊಂಡ ಬಗ್ಗೆ ಮಾಹಿತಿ ಅಪ್‌ಡೇಟ್ ಮಾಡುವಲ್ಲಿ ವಿಳಂಬ, ತಿದ್ದುಪಡಿ ಕೋರಿಕೆಗೆ ಸ್ಪಂದಿಸದೇ ಇರುವುದು, ಗ್ರಾಹಕರ ಮಾಹಿತಿ ಕಳವು ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಈಗಿರುವ ನಿಯಮವೇನು?
ಪ್ರಸ್ತುತ ಪ್ರತಿ ಕ್ರೆಡಿಟ್ ಇನಾ#ರ್ಮೇಷನ್ ಕಂಪನಿಯೂ ತನ್ನದೇ ಆದ ನಮೂನೆಯಲ್ಲಿ ಗ್ರಾಹಕರ ದತ್ತಾಂಶ ಸಂಗ್ರಹಿಸಿ, ಸಲ್ಲಿಸುತ್ತದೆ. ಹಲವು ಬಾರಿ ದತ್ತಾಂಶಗಳಲ್ಲಿ ವ್ಯತ್ಯಾಸ, ಲೋಪ ಕಂಡುಬರುವ ಕಾರಣ, ನಮಗೆ ಸಾಲ ಸಿಗುತ್ತಿಲ್ಲ ಮತ್ತು ಸಾಲದ ಮಿತಿಯೂ ಇಳಿಕೆಯಾಗುತ್ತಿದೆ ಎಂದು ಅನೇಕ ಗ್ರಾಹಕರು ದೂರು ನೀಡುತ್ತಿದ್ದಾರೆ.
ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ?
– ಕ್ರೆಡಿಟ್ ಸ್ಕೋರ್‌ನಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ
– ಸಾಲ ಪಾವತಿ ಪೂರ್ಣಗೊಂಡ ಮಾಹಿತಿ ಅಪ್‌ಡೇಟ್ ಮಾಡುವಲ್ಲಿ ವಿಳಂಬ
– ತಿದ್ದುಪಡಿ ಕೋರಿಕೆಗೆ ಸ್ಪಂದಿಸದೇ ಇರುವುದು
– ಗ್ರಾಹಕರ ಮಾಹಿತಿ ಕಳವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.