Dr n d souza: ಒಳ್ಳೆಯ ಓದುಗ ಮಾತ್ರ ಒಂದೊಳ್ಳೆ ಕಾದಂಬರಿ ಬರೆಯಬಲ್ಲ 


Team Udayavani, Jan 28, 2024, 12:39 PM IST

Dr n d souza: ಒಳ್ಳೆಯ ಓದುಗ ಮಾತ್ರ ಒಂದೊಳ್ಳೆ ಕಾದಂಬರಿ ಬರೆಯಬಲ್ಲ 

ಮೆಲು ಮಾತಿನ ಸೌಜನ್ಯವಂತ ಎಂದೇ ಹೆಸರಾಗಿರುವ ನಾ. ಡಿಸೋಜ, ಹಲವು ಅನುಪಮ ಕೃತಿಗಳಿಂದ ಕನ್ನಡಿಗರ  ಮನ ಗೆದ್ದವರು. ಅವರು ದೇಶ-ವಿದೇಶ ಸುತ್ತಿದವರಲ್ಲ. ಸಾಗರದಲ್ಲಿ ಇದ್ದುಕೊಂಡೇ ಪ್ರಪಂಚವನ್ನು ಗ್ರಹಿಸಿದವರು, ತಮ್ಮ ಸುತ್ತಲಿನ ಬದುಕಿನ ಬಗ್ಗೆ ಆಪ್ತವಾಗಿ ಬರೆದವರು. ಮುಳುಗಡೆ ಆದವರ ಬದುಕಿನ ಕುರಿತು ಡಿಸೋಜ ಅವರಷ್ಟು ಕಳಕಳಿಯಿಂದ, ಆರ್ದ್ರತೆಯಿಂದ ಬರೆದವರು ಮತ್ತೂಬ್ಬರಿಲ್ಲ. ಈ ಬಾರಿಯ ಪ್ರತಿಷ್ಠಿತ “ಪಂಪ ಪ್ರಶಸ್ತಿ’ ಪುರಸ್ಕೃತರಾಗಿರುವ ನಾ. ಡಿಸೋಜ ಅವರೊಂದಿಗಿನ ಆಪ್ತ ಮಾತುಕತೆ ಈ ಸಂಚಿಕೆಯ ವಿಶೇಷ…

ಕೆಲ ವರ್ಷಗಳ ಹಿಂದೆ ದೃಶ್ಯ ಮಾಧ್ಯಮ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ಆಗ ಓದು ಎಲ್ಲರ ಅಭ್ಯಾಸವಾಗಿತ್ತು. ಈಗ ಓದಿನ ಹವ್ಯಾಸ ಕಡಿಮೆ ಆಗಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನಿಜ. ಅದು ನನ್ನ ಅನುಭವಕ್ಕೂ ಬಂದಿದೆ. ನನ್ನ ಕಾದಂಬರಿಗಳನ್ನು ಓದಿ ಬರುತ್ತಿದ್ದ ಅಭಿಪ್ರಾಯಗಳ ಸಂಖ್ಯೆ ಕಡಿಮೆಯಾಗಿದೆ. ಪ್ರಕಾಶಕರೂ ಸಹಾ ಅದನ್ನೇ ಹೇಳುತ್ತಿದ್ದಾರೆ. ಟಿವಿ, ಮೊಬೈಲುಗಳಲ್ಲೇ ಈಗ ಬಹಳ ಸುಲಭವಾಗಿ ಮಾಹಿತಿ ಸಿಗ್ತಿರೋದ್ರಿಂದ ಪುಸ್ತಕಗಳ ಬಗ್ಗೆ ನಾವು ಗಮನ ಹರಿಸ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಟೇಪ್‌ ರೆಕಾರ್ಡರ್‌ ಮೊದಲಿಗೆ ಬಂದಾಗಲೂ ಹೀಗೇ ಆಯ್ತು. ಆದರೆ ನಂತರದಲ್ಲಿ ಓದುಗರು ಪುಸ್ತಕದ ಕಡೆಗೆ ಮರಳಿದರು. ಕಾರಣ, ಓದುಗ ಯಾವತ್ತಿದ್ದರೂ ಓದುಗನೇ. ಅವನಿಗೆ ಓದಿನಲ್ಲಿ ಸಿಗುವ ಸಂತೋಷ ಇನ್ನೆಲ್ಲೂ ಸಿಗುವುದಿಲ್ಲ. ಓದುಗರ ಸಂಖ್ಯೆ ಜಾಸ್ತಿಯಾಗೋ ದಿನಗಳು ಮತ್ತೆ ಬರಲಿವೆ. ಅದು ನನ್ನ ಹಾರೈಕೆಯೂ ಹೌದು, ನಂಬಿಕೆಯೂ ಹೌದು.

ಅಭಿವೃದ್ಧಿ ಹಾಗೂ ವಿನಾಶ – ಇವುಗಳ ಬಗ್ಗೆ ನಿಮ್ಮ ಬರಹಗಳಲ್ಲಿ ಬಹಳ ಆಳವಾಗಿ ಹೇಳಿದ್ದೀರಿ. ಇವತ್ತಿನ ದಿನಗಳಲ್ಲಿ ಅದು ಬೇರೆಯ ಸ್ವರೂಪದಲ್ಲೇ ನಡೆಯುತ್ತಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮೊದಲನೆಯದಾಗಿ ಈಗ ನಡೀತಿರೋದು ಅಭಿವೃದ್ಧಿಯೇ ಅಲ್ಲ. ಅದು ಅಭಿವೃದ್ಧಿಯ ನೆರಳು ಅಥವಾ ವಿಕಾರ ರೂಪ ಮಾತ್ರ. ಆಣೆಕಟ್ಟುಗಳನ್ನ ಕಟ್ಟಿ ವಿದ್ಯುತ್‌ ಉತ್ಪಾದನೆ ಮಾಡೋದು ಈಗಿನ ಕ್ರಮ. ಆದರೆ ಅದೇ ಅಂತಿಮ ಅಥವಾ ಅನಿವಾರ್ಯ ಅಲ್ಲ. ಅಣುಶಕ್ತಿಯ ಮೂಲಕ ಸಹಾ ವಿದ್ಯುತ್‌ ಉತ್ಪಾದಿಸಲಾಗುತ್ತೆ. ಮತ್ತೆ ನೀರಿಗೇ ಹೋಗುವ ಅಗತ್ಯ ಇಲ್ಲ. ಆಸ್ಟ್ರೇಲಿಯಾ ತಾನು ಕಟ್ಟಿದ ಕೆಲವೊಂದು ಆಣೆಕಟ್ಟುಗಳನ್ನ ತಾನೇ ಒಡೆದಿದೆ. ನಾವೂ ಅಂಥಾ ಕ್ರಮಗಳತ್ತ ನೋಡಬೇಕು. ಆ ಕಾಲ ಬರಬಹುದು.

ಬಹಳಷ್ಟು ಕಾದಂಬರಿಗಳನ್ನು ಬರೆದು ಓದು ಗರನ್ನು ತಲುಪಿದವರು ನೀವು. ಇಂದಿನ ಬರಹಗಾರರಿಗೆ ಏನು ಹೇಳ್ಳೋದಕ್ಕೆ ಇಷ್ಟ ಪಡ್ತೀರಾ?

ದಯವಿಟ್ಟು ಹೆಚ್ಚು ಓದಿ. ಲೇಖಕ ಯಾವ ವಿಷಯದ ಬಗ್ಗೆ ಹೇಳುವುದಕ್ಕೆ ಹೊರಟಿ¨ªಾರೆ ಅನ್ನುವುದನ್ನ ಅರ್ಥ ಮಾಡಿಕೊಳ್ಳಿ. ಒಂದು ಕೃತಿ ಕೇವಲ ಕೃತಿ ಮಾತ್ರ ಅಲ್ಲ, ಅದೊಂದು ಅನುಭವವೂ ಆಗುವ ರೀತಿಯಲ್ಲಿ ಓದುವುದನ್ನು ಬೆಳೆಸಿಕೊಳ್ಳಬೇಕು. ಒಬ್ಬ ಒಳ್ಳೆಯ ಓದುಗ ಮಾತ್ರ ಒಂದೊಳ್ಳೆ ಕಾದಂಬರಿ ಬರೆಯಲಿಕ್ಕೆ ಸಾಧ್ಯ.

ಹಲವಾರು ಕೃತಿಗಳು ಬಿಡುಗಡೆಯಾಗುತ್ತಿರುವ ಕಾಲವಿದು. ಓದು ಅಥವಾ ವಿಷಯದ ಆಯ್ಕೆಯ ಪ್ರಶ್ನೆ ಬಂದಾಗ ಯಾವುದನ್ನು ಓದಬೇಕು, ಯಾವುದನ್ನ ಬಿಡಬಾರದು ಅಂತ ಹೇಗೆ ಆಯ್ಕೆ ಮಾಡಿಕೊಳ್ಳಬಹುದು?

ಆಯ್ಕೆ ಅನ್ನೋದು ಯಾವಾಗಲೂ ಕಷ್ಟದ ಕೆಲಸ. ಒಬ್ಬ ಲೇಖಕನ ಅಷ್ಟೂ ಕೃತಿಗಳನ್ನ ಓದಿದಾಗ ಮಾತ್ರ ನಮಗೆ ಆ ಲೇಖಕ ಅರ್ಥವಾಗ್ತಾನೆ ಅಥವಾ ಅರಿವಿಗೆ ದಕ್ಕುತ್ತಾನೆ. ಓದುತ್ತಾ ಓದುತ್ತ ನಾವು ಬೆಳೆಸಿಕೊಳ್ಳುವ ಅನುಭವ, ದೃಷ್ಟಿಕೋನಗಳೇ ನಮಗೆ ಮುಂದಿನ ದಾರಿಯನ್ನ ತೋರಿಸುತ್ತಾ ಹೋಗುತ್ತವೆ.

ನೀವು ಮಕ್ಕಳ ಸಾಹಿತ್ಯ ಸೇರಿದಂತೆ ಹಲವಾರು ಸಾಹಿತ್ಯ ಕೃತಿಗಳನ್ನ ರಚಿಸಿದ್ದೀರ. ಅವುಗಳಲ್ಲಿ ನಿಮಗೆ ಅತ್ಯಂತ ಸಂತೋಷ, ಸಮಾಧಾನ ನೀಡಿದ ಕೃತಿ ಯಾವುದು ಹಾಗೂ ಯಾವ ಕಾರಣಕ್ಕೆ?

“ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’ ಎನ್ನುವ ನನ್ನ ಕಥೆ ಈ ಬಾರಿಯ ಏಳನೇ ತರಗತಿಯ ಪಠ್ಯದಲ್ಲಿದೆ. ಅದನ್ನ ಬಹಳಷ್ಟು ಮಕ್ಕಳು ಓದಿಕೊಂಡಿದ್ದಾರೆ ಹಾಗೂ ಮೆಚ್ಚಿಕೊಂಡಿದ್ದಾರೆ. ಎಲ್ಲಿ ಹೋದರೂ ಬಂದು ಮಾತಾಡಿಸುತ್ತಾರೆ. ಅದು ನಾಟಕವಾಗಿಯೂ ಬಂದಿದೆ. ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿರೋ ಹಲವಾರು ಕೃತಿಗಳನ್ನ ಬರೆಯೋದು ಸಾಧ್ಯವಾಗಿದೆ. ಇದು ಯಾವತ್ತಿಗೂ ನನಗೆ ಸಮಾಧಾನ, ಸಂತೋಷ ನೀಡುವಂತಹಾ ಒಂದು ಸಂಗತಿ. ಹಾಗಾಗಿ ಮಕ್ಕಳ ಸಾಹಿತ್ಯ ರಚನೆ ವೈಯಕ್ತಿಕವಾಗಿ ನನಗೆ ಇಷ್ಟ. ಅದನ್ನೇ ಹೆಚ್ಚು ಹೆಚ್ಚು ಮಾಡಲು ಪ್ರಯತ್ನಿಸುತ್ತೇನೆ.

ಲೇಖಕನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕೆಂಬು­ದನ್ನು ಗಮನದಲ್ಲಿ­ಟ್ಟುಕೊಂಡು ಬರೆದವರು ನೀವು. ಈ ಹೊತ್ತಿನ ತರುಣ ಪೀಳಿಗೆಯ ಜನರಿಗೆ ನೀವು ಏನನ್ನ ಹೇಳ್ಳೋದಕ್ಕೆ ಬಯಸುತ್ತೀರಿ?

ಸಾಹಿತ್ಯದಿಂದ ನಮಗೆ ಒಳ್ಳೆಯದಾಗುತ್ತೆ, ಸಾಹಿತ್ಯದಿಂದ ನಾವು ಪ್ರೌಢರಾಗ್ತೀವೆ ಅನ್ನೋ ಐಡಿಯಾಲಜಿ­ಯನ್ನಿ­ಟ್ಕೊಂಡು ಸಾಹಿತ್ಯ ರಚಿಸುವವರಿಗೆ ಹೆಚ್ಚು ಬೆಲೆ ಕೊಡುವವನು ನಾನು. ಸಾಹಿತ್ಯ ಕೇವಲ ಕಾಲ ಕಳೆಯೋದಕ್ಕೋ ಅಥವಾ ಮನೋ­­ರಂಜನೆಗೋ ಅಲ್ಲ ಅನ್ನುವುದು ನನ್ನ ನಂಬಿಕೆ. ಸಂಗೀತ ಅಥವಾ ಇನ್ಯಾವುದೇ ಕಲೆಯ ಹಾಗೆ ಸಾಹಿತ್ಯ ಸಹಾ ನಮ್ಮ ವ್ಯಕ್ತಿತ್ವವನ್ನ ಬದಲಾಯಿ­ಸಬೇಕು. ಇದೊಂದು ಆದರ್ಶವೂ ಹೌದು, ಉದ್ದೇಶವೂ ಹೌದು. ಓದು ಅಂದರೆ ಬರಿದೆ ಓದಲ್ಲ. ಹಾಗಾಗಿ ಏನನ್ನೇ ಬರೆಯು­ವಾಗಲೂ ನಾನು ‘ಇದು ಎಲ್ಲಿಗೆ ಮುಟ್ಟುತ್ತದೆ?’ ಎಂದು ಯೋಚಿಸುತ್ತೇನೆ. ಈ ನಿಟ್ಟಿನಲ್ಲೇ ನಮ್ಮ ಲೇಖಕರು ಸಾಗಬೇಕು ಅನ್ನೋದು ನನ್ನ ಸಲಹೆ.

ನಿಮ್ಮ ಕಾದಂಬರಿಗಳು ಸಿನಿಮಾಗಳಾಗಿ ಸಹ ಪ್ರದರ್ಶನ­ಗೊಂಡಿವೆ. ಕಾದಂಬರಿಗಳಲ್ಲಿ ನೀವು ಹೇಳಿರುವ ಅಂಶ ಹಾಗೂ ಸಂಗತಿಗಳನ್ನು ಅಷ್ಟೇ ಸೂಕ್ಷ್ಮವಾಗಿ, ಪರಿಣಾಮ­ಕಾರಿಯಾಗಿ ಅಭಿವ್ಯಕ್ತಪಡಿಸಲು ಸಿನಿಮಾಕ್ಕೆ ಸಾಧ್ಯವಾಗಿದೆಯಾ?

ಇಲ್ಲ. ಸಿನಿಮಾಗಳು ನನಗೆ ಸಂಪೂರ್ಣ ತೃಪ್ತಿಯನ್ನು ಕೊಟ್ಟಿಲ್ಲ. ಏಕೆಂದರೆ ಒಂದು ಸಿನಿಮಾ ಹಲವಾರು ನಿಟ್ಟಿನಲ್ಲಿ ಯೋಚನೆ ಮಾಡುತ್ತದೆ. ಅದು ನೃತ್ಯ, ಹಾಸ್ಯ, ಬಡಿದಾಟ ಮುಂತಾದ ಹಲವಾರು ಅಂಶಗಳನ್ನ ಒಳಗೊಂಡಿರುತ್ತದೆ. ಹೀಗಾಗಿ ಒಂದು ಕಾದಂಬರಿ ಓದುಗನ ಮೇಲೆ ಉಂಟುಮಾಡುವ ಪರಿಣಾಮವು ಚಲನಚಿತ್ರ ಉಂಟುಮಾಡುವ ಪರಿಣಾಮಕ್ಕಿಂತ ಬೇರೆಯೇ ಆಗುತ್ತದೆ. ಇದು ನನ್ನ ಕಾದಂಬರಿಗಳ ವಿಷಯದಲ್ಲೂ ಆಗಿದೆ. ಕಾದಂಬರಿ ಓದುಗನನ್ನು ಸಂಪೂರ್ಣವಾಗಿ ಒಳಗೊಳ್ಳುತ್ತಾ ಹೋಗುತ್ತದೆ. ಆದರೆ ಸಿನಿಮಾ ಹಲವಾರು ಅಂಶಗಳಲ್ಲಿ ಹಂಚಿ ಹೋಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಈ ವಿಷಯದಲ್ಲಿ ಹಲವಾರು ಅಭಿಪ್ರಾಯಗಳಿರಬಹುದು. ಇದು ಒಬ್ಬ ಲೇಖಕನಾಗಿ ನನ್ನ ಅಭಿಪ್ರಾಯ ಅಷ್ಟೇ.

ಕಾದಂಬರಿ ಮತ್ತು ಸಿನಿಮಾ- ಇವರೆಡರ ಪೈಕಿ ಓದುಗನ ಅಥವಾ ವೀಕ್ಷಕನ ಕಲ್ಪನಾ ಶಕ್ತಿಯನ್ನು, ಹರವನ್ನು ಹಿಗ್ಗಿಸುವುದು ಯಾವುದು?

ಓದುತ್ತಾ ಓದುತ್ತಾ ಓದುಗ ಕಾದಂಬರಿಯಲ್ಲಿ ಲೀನವಾಗುತ್ತಾನೆ. ಇಲ್ಲಿ ‘ಲೀನ’ ಎನ್ನುವುದು ಅತ್ಯಂತ ಪರಿಣಾಮಕಾರಿ ಪದ. ಕಥೆಯ ಸನ್ನಿವೇಶ, ಭಾವಗಳು ಅವನ ಮನದಲ್ಲೇ ಸೃಷ್ಟಿಯಾಗುತ್ತವೆ. ಇದು ಸಿನಿಮಾದ ವಿಷಯದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಸಾಧ್ಯವಾಗುವುದಿಲ್ಲ.

ಸಮಾಜದ ಸಾಮರಸ್ಯ ಹಾಗೂ ಸಹಿಷ್ಣುತೆಯನ್ನು ಕಾಪಾಡುವುದರಲ್ಲಿ ಸಾಹಿತ್ಯದ ಪಾತ್ರ ಏನು?

ಈ ವಿಷಯದಲ್ಲಿ ಸಾಹಿತ್ಯದ ಜವಾಬ್ದಾರಿ ದೊಡ್ಡದಿದೆ. ಸುಮ್ಮನೆ ಬರೆಯುವುದು ಸರಿಯಲ್ಲ. ತಾನು ಬರೆದ ಕೃತಿ ಸಮಾಜದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನೂ ಲೇಖಕರು ಚಿಂತಿಸಬೇಕು. ಇಂದು ಸಾಮಾಜಿಕ ವೈಪರೀತ್ಯಗಳು ವಿಪರೀತವಾಗಿವೆ. ಧರ್ಮಗಳ ವಿಷಯದಲ್ಲಿ ಜನ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೃಷ್ಟಿಯಾಗಬೇಕಾದ ಗುರುತರ ಜವಾಬ್ದಾರಿ ಸಾಹಿತ್ಯದ ಮೇಲಿದೆ.

ಅನುಭವವನ್ನು ವ್ಯಕ್ತಪಡಿಸುವಾಗ ಭಾಷೆ ಸೋಲುತ್ತಿದೆ ಅಂತ ನಿಮಗೆಂದಾದರೂ ಅನ್ನಿಸಿದ್ದಿದೆಯಾ?:

ಖಂಡಿತ ಇಲ್ಲ. ಭಾಷೆ ಯಾವತ್ತಿಗೂ ಸೋಲುವುದಿಲ್ಲ. ಭಾಷೆಯನ್ನು ಬಳಸುವ ವ್ಯಕ್ತಿ ಸಾಕಷ್ಟು ಪ್ರಬುದ್ಧನಾಗಿದ್ದರೆ, ಪದಗಳನ್ನು ಸರಿಯಾಗಿ ದುಡಿಸಿಕೊಂಡರೆ ಅದು ತನ್ನ ಗುರಿ ಮುಟ್ಟಿಯೇ

ಮುಟ್ಟುತ್ತದೆ. ಆ ಶಕ್ತಿ ಭಾಷೆಗಿದೆ. ಶಿವರಾಮ ಕಾರಂತರಂಥವರು ಭಾಷೆಯನ್ನು ಬಹಳ ಸಶಕ್ತವಾಗಿ ಬಳಸಿದಾರೆ. ಸಡಿಲವಾಗಿ ಅಥವಾ ಜಾಳುಜಾಳಾಗಿ ಹೇಳಿದಾಗ ಕೃತಿ ಕಾಡುವುದಿಲ್ಲ. ಅದು ಲೇಖಕನ ಸೋಲೇ ಹೊರತು ಭಾಷೆಯ ಸೋಲು ಖಂಡಿತ ಅಲ್ಲ. ಗಾಢವಾಗಿ ಬಳಸಿದ ಭಾಷೆಯ ಮೂಲಕ ಸೃಷ್ಟಿಯಾದ ಕೃತಿ ಖಂಡಿತ ಗುರಿ ಮುಟ್ಟುತ್ತದೆ.

ಪ್ರತಿಷ್ಠಿತ ಪಂಪ ಪ್ರಶಸ್ತಿ ನಿಮಗೆ ಬಂದಿದೆ. ಇದು ನಮಗೆಲ್ಲ ಸಂತೋಷದ ವಿಷಯ. ಈ ಸಮಯದಲ್ಲಿ ನಿಮಗೇನನ್ನಿಸುತ್ತದೆ?

ಪಂಪ ಕನ್ನಡದ ಆದಿಕವಿ. ಕನ್ನಡದ ಮೇಲೆ ಅತ್ಯಂತ ಪ್ರೀತಿಯನ್ನಿಟ್ಟು­ಕೊಂಡು ಬರೆದವನು. ಆ ಪ್ರಶಸ್ತಿ ನನಗೆ ಬಂದಿರುವುದು ಅತ್ಯಂತ ಸಂತಸವನ್ನುಂಟುಮಾಡಿದೆ.

ಸಂದರ್ಶನ:

ವಿನಾಯಕ ಅರಳಸುರಳಿ

ಕ್ಯಾರಿಕೇಚರ್‌:  ಸಂಕೇತ್‌ ಗುರುದತ್ತ

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.