Smoking: ಧೂಮಪಾನ ವರ್ಜಿಸಿ ಹುಳಿ ತೇಗಿಗೆ ಪರಿಹಾರ ಪಡೆಯಿರಿ


Team Udayavani, Jan 28, 2024, 3:07 PM IST

2-health

ಹೊಟ್ಟೆಯಲ್ಲಿ ಇರುವ ಆಮ್ಲೀಯ ಅಂಶವು ಪದೇಪದೆ ಅನ್ನನಾಳಕ್ಕೆ ಬರುವುದು ಮತ್ತು ಇದರಿಂದಾಗಿ ಉರಿಯೂತ ಉಂಟಾಗುವ ಅನಾರೋಗ್ಯ ಸ್ಥಿತಿಗೆ ಗ್ಯಾಸ್ಟ್ರೊಫೇಜಿಯಲ್‌ ರಿಫ್ಲಕ್ಸ್‌ ಡಿಸೀಸ್‌ (ಗೆರ್ಡ್‌) ಅಥವಾ ಹುಳಿ ತೇಗು ಬರುವ ಕಾಯಿಲೆ ಎಂದು ಹೆಸರು. ಪ್ರೌಢ ವಯಸ್ಕರಲ್ಲಿ ಕನಿಷ್ಠ ಶೇ. 20 ಮಂದಿ ಈ ತೊಂದರೆಗೆ ಈಡಾಗುತ್ತಾರೆ ಎನ್ನಲಾಗಿದೆ. ಎದೆಯುರಿ, ಬಾಯಿಯ ಹಿಂಭಾಗದಲ್ಲಿ ಕಹಿ/ ಹುಳಿ ರುಚಿ, ಆಹಾರದ ಅಂಶಗಳು/ ದ್ರವಾಂಶ ಹೊಟ್ಟೆಯಿಂದ ಬಾಯಿಗೆ ಮರಳುವುದು, ದೀರ್ಘ‌ಕಾಲೀನ ಕೆಮ್ಮು, ಧ್ವನಿ ಒಡಕಾಗುವುದು ಇತ್ಯಾದಿಗಳು ಇದರ ಲಕ್ಷಣಗಳಾಗಿವೆ. ಧೂಮಪಾನ ಮತ್ತು ಗೆರ್ಡ್‌ ಕಾಯಿಲೆಗಳು ಪರಸ್ಪರ ಸಂಬಂಧ ಹೊಂದಿರುವುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.

ಜಠರ ಮತ್ತು ಅನ್ನನಾಳ (ಈಸೊಫೇಗಸ್‌) ಪರಸ್ಪರ ಸಂಧಿಸುವಲ್ಲಿ ಲೋವರ್‌ ಈಸೊಫೇಜಿಯಲ್‌ ಸ್ಪಿಂಕ್ಟರ್‌ (ಎಲ್‌ಇಎಸ್‌) ಎಂಬ ಸ್ನಾಯುಭಿತ್ತಿ ಇದೆ. ಅನ್ನನಾಳದಿಂದ ಆಹಾರವಸ್ತುಗಳು ಜಠರವನ್ನು ಪ್ರವೇಶಿಸುವಂತೆ ಆದರೆ ಜಠರದಿಂದ ಆಮ್ಲ ಮತ್ತು ಇತರ ಅಂಶಗಳು ಅನ್ನನಾಳವನ್ನು ಪ್ರವೇಶಿಸದಂತೆ ತಡೆಯುವ ಏಕಮುಖ ಪ್ರವೇಶದ್ವಾರವಾಗಿ ಈ ಎಲ್‌ಇಎಸ್‌ ಕೆಲಸ ಮಾಡುತ್ತದೆ. ಈ ಏಕಮುಖ ಪ್ರವೇಶದ್ವಾರ ವ್ಯವಸ್ಥೆಯಲ್ಲಿ ವೈಫ‌ಲ್ಯ ಗೆರ್ಡ್‌ ಉಂಟಾಗಲು ಪ್ರಧಾನ ಕಾರಣವಾಗಿರುತ್ತದೆ. ಜಠರದ ಆಮ್ಲವು ಇತರ ಅಂಶಗಳ ಜತೆಗೆ ಅನ್ನನಾಳಕ್ಕೆ ನುಗ್ಗುವುದರಿಂದ ಗೆರ್ಡ್‌ ಅಥವಾ ಹುಳಿತೇಗು ಕಾಣಿಸಿಕೊಳ್ಳುತ್ತದೆ.

ತಂಬಾಕಿನಲ್ಲಿ ಇರುವ ನಿಕೋಟಿನ್‌ ಮತ್ತು ಇತರ ಕೆಲವು ರಾಸಾಯನಿಕ ಅಂಶಗಳು ಅನ್ನನಾಳದ ಈ ಎಲ್‌ಇಎಸ್‌ ಪ್ರವೇಶದ್ವಾರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಇದರಿಂದಾಗಿ ಎಲ್‌ಇಎಸ್‌ ದುರ್ಬಲವಾಗುತ್ತದೆ. ಇದರಿಂದಾಗಿ ಜಠರದ ಆಮ್ಲ ಮತ್ತು ಇತರ ಅಂಶಗಳು ಮರಳಿ ಅನ್ನನಾಳದೊಳಕ್ಕೆ ನುಗ್ಗುವುದರಿಂದ ಹುಳಿತೇಗು ಅಥವಾ ಎದೆಯುರಿ ಉಂಟಾಗುತ್ತದೆ. ಇದರ ಜತೆಗೆ ದೂಮಪಾನವು ಜಠರದಲ್ಲಿ ಆಮ್ಲೀಯತೆ ಹೆಚ್ಚುವುದಕ್ಕೂ ಕಾರಣವಾಗುತ್ತದೆ, ಇದು ಹುಳಿತೇಗು ಉಂಟಾಗುವುದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಅಲ್ಲದೆ ಧೂಮಪಾನವು ಜೊಲ್ಲು ಉತ್ಪಾದನೆ ಕಡಿಮೆಯಾಗಲು ಕಾರಣವಾಗಬಹುದಾಗಿದ್ದು, ಇದು ಅನ್ನನಾಳದ ಭಿತ್ತಿಗೆ ಹಾನಿ ಉಂಟು ಮಾಡುತ್ತದೆ. ಇವೆಲ್ಲವೂ ಒಟ್ಟಾಗಿ ಗೆರ್ಡ್‌ ಉಲ್ಬಣಗೊಳ್ಳುವುದಕ್ಕೆ ಪೂರಕ ಸನ್ನಿವೇಶವನ್ನು ನಿರ್ಮಿಸಿಕೊಡುತ್ತವೆ. ಧೂಮಪಾನವು ಕಾಫಿ/ಚಹಾ/ ಮದ್ಯಪಾನದ ಜತೆಗೂ ಸಂಬಂಧ ಹೊಂದಿದ್ದು, ಇದು ಕೂಡ ಗೆರ್ಡ್‌ ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತವೆ.

ಹುಳಿತೇಗಿನಿಂದಾಗಿ ಅನ್ನನಾಳವು ಪದೇಪದೆ ಜಠರದ ಆಮ್ಲಕ್ಕೆ ಒಡ್ಡಿಕೊಂಡಾಗ ಉರಿಯೂತ ಮತ್ತು ಕಾಲಕ್ರಮೇಣ ಅನ್ನನಾಳದ ಒಳಪದರಕ್ಕೆ ಹಾನಿಯನ್ನು ಉಂಟು ಮಾಡಬಹುದು.

ಇದರಿಂದಾಗಿ ಅನ್ನನಾಳದಲ್ಲಿ ಹುಣ್ಣುಗಳು, ಅನ್ನನಾಳ ಸಂಕುಚನಗೊಳ್ಳುವುದು ಹಾಗೂ ಬೆರೆಟ್ಸ್‌ ಈಸೊಫೇಗಸ್‌ಗೆ ಕಾರಣವಾಗಬಹುದು.

ಧೂಮಪಾನವನ್ನು ತ್ಯಜಿಸಿ

ಧೂಮಪಾನವನ್ನು ತ್ಯಜಿಸುವುದರಿಂದ ಹುಳಿತೇಗು ಉಂಟಾಗುವುದು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ಲಕ್ಷಣಗಳು ಸಾಕಷ್ಟು ಕಡಿಮೆಯಾಗುತ್ತವೆ. ಅಲ್ಲದೆ ಧೂಮಪಾನವನ್ನು ತ್ಯಜಿಸುವುದರಿಂದ ಶ್ವಾಸಕೋಶ ಕ್ಯಾನ್ಸರ್‌, ಸಿಒಪಿಡಿ ಮತ್ತು ಹೃದ್ರೋಗಗಳಂತಹ ಇತರ ಅಪಾಯಗಳು ಕೂಡ ದೂರವಾಗುತ್ತವೆ. ಧೂಮಪಾನವನ್ನು ತ್ಯಜಿಸುವುದರ ಜತೆಗೆ ಮದ್ಯಪಾನ ವರ್ಜನೆ, ಕಾμ, ಚಾಕೊಲೇಟ್‌ ಮತ್ತಿತರ ಅನಾರೋಗ್ಯಕರ ಆಹಾರಾಭ್ಯಾಸಗಳನ್ನು ತ್ಯಜಿಸುವುದರ ಜತೆಗೆ ತೂಕ ಇಳಿಕೆಯಂತಹ ಆರೋಗ್ಯಯುತ ಜೀವನಶೈಲಿಗಳನ್ನು ರೂಢಿಸಿಕೊಳ್ಳುವುದರಿಂದ ಹುಳಿತೇಗಿನಿಂದ ಉಪಶಮನವನ್ನು ಪಡೆಯಬಹುದು.

-ಡಾ| ಅನುರಾಗ್‌ ಶೆಟ್ಟಿ,

ಮೆಡಿಕಲ್‌ ಗ್ಯಾಸ್ಟ್ರೊಎಂಟರಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

 

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.