I.N.D.I.A: ಟೇಕಾಫ್‌ಗೆ ಮೊದಲೇ ವಿಪಕ್ಷಗಳ “ಇಂಡಿಯಾ” ಒಕ್ಕೂಟ ಲ್ಯಾಂಡಿಂಗ್?
ಬಂಗಾಲ, ಪಂಜಾಬ್ ಹಿನ್ನಡೆ ಬಳಿಕ ಈಗ ನಿತೀಶ್ ಕೂಡ ಔಟ್ | ಬಿಜೆಪಿ ಸೋಲಿಸಲು ಹೊರಟಿದ್ದ ಒಕ್ಕೂಟ ಪತನದ ಹಾದಿಯಲ್ಲಿ
Team Udayavani, Jan 28, 2024, 11:17 PM IST
ಪಟ್ನಾ: “ವಿಪಕ್ಷಗಳ ಇಂಡಿಯಾ ಒಕ್ಕೂಟವು ಒಂದಾದ ಮೇಲೆ ಒಂದರಂತೆ ನೋ ಬಾಲ್ ಹಾಕುತ್ತಿದೆ’ ಎಂದು ಕೆಲವು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳು ಹಾಗೂ ಈಗ ಬಿಹಾರದಲ್ಲಿ ನಡೆದ ಹೈಡ್ರಾಮ ಮೋದಿಯವರ ಈ ಹೇಳಿಕೆಗೆ ಪುಷ್ಟಿ ನೀಡಿದೆ. ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗಲೇ, ವಿಪಕ್ಷಗಳ ಒಕ್ಕೂಟಕ್ಕೆ ಸಿಡಿಲು ಬಡಿದಿದ್ದು, ಟೇಕಾಫ್ಗೆ ಮುನ್ನವೇ ಲ್ಯಾಂಡ್ ಆಗಿದೆ. ಹೀಗೇ ಮುಂದುವರಿದರೆ ಚುನಾವಣೆ ವೇಳೆಗೆ ಒಕ್ಕೂಟ ಹೇಳಹೆಸರಿಲ್ಲದಂತೆ ಚದುರಿಹೋಗುವ ಸಾಧ್ಯತೆ ಇದೆ.
ಬಿಜೆಪಿಯನ್ನು ಸೋಲಿಸಬೇಕೆಂದರೆ ವಿಪಕ್ಷಗಳೆಲ್ಲ ಒಂದಾಗಬೇಕು ಎಂಬ ಧ್ಯೇಯದೊಂದಿಗೆ “ಇಂಡಿಯಾ ಒಕ್ಕೂಟ’ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿ ಇದ್ದಿದ್ದೇ ನಿತೀಶ್ ಕುಮಾರ್. ವಿವಿಧ ಪಕ್ಷಗಳ ನಾಯಕರ ಸರಣಿ ಸಭೆಗಳನ್ನೂ ಅವರು ನಡೆಸಿದ್ದರು. ಅದರಂತೆ, ಒಕ್ಕೂಟ ಸ್ಥಾಪನೆಯೂ ಆಯಿತು. ಆದರೆ, ಒಬ್ಬೊಬ್ಬರು ಒಂದೊಂದು ದಿಕ್ಕಿನ ಕಡೆಗೆ ಮುಖ ಮಾಡಿದ್ದರಿಂದ ದಿನೇ ದಿನೆ ಬಿರುಕುಗಳೇ ಹೆಚ್ಚಾಗತೊಡಗಿತು.
ಎಲ್ಲೆಲ್ಲೂ ಅಪಸ್ವರ: ಲೋಕಸಭೆ ಸೀಟು ಹಂಚಿಕೆ ವಿಚಾರದಲ್ಲಿ ಈಗಾಗಲೇ ಪಶ್ಚಿಮ ಬಂಗಾಲದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಜತೆ ಮುನಿಸಿಕೊಂಡಿದ್ದು, ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಮಹಾರಾಷ್ಟ್ರದಲ್ಲೂ ಶಿವಸೇನೆಯ ಉದ್ಧವ್ ಬಣವು, ತಾವು ಕೇಳಿದಷ್ಟು ಕ್ಷೇತ್ರ ಬಿಟ್ಟುಕೊಡದಿದ್ದರೆ ಏಕಾಂಗಿ ಸ್ಪರ್ಧೆ ಖಚಿತ ಎಂಬ ಸುಳಿವು ನೀಡಿದೆ. ಉ.ಪ್ರದೇಶದಲ್ಲಿ ಎಸ್ಪಿ ನಾಯಕ ಅಖೀಲೇಶ್ ಇಂತಿಷ್ಟು ಕ್ಷೇತ್ರಗಳಲ್ಲಿ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿ ರಾಜ್ಯದಲ್ಲೂ “ಅಪಸ್ವರ’ಗಳೇ ಕಂಡುಬರುತ್ತಿರುವುದು ವಿಪಕ್ಷಗಳ ಒಕ್ಕೂಟದ ಪ್ರಮುಖ ಉದ್ದೇಶವನ್ನೇ ಮರೆಮಾಚಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಈಗ ಬಿಹಾರದಲ್ಲಿ ನಿತೀಶ್ ಅವರು ಇಂಡಿಯಾ ಒಕ್ಕೂಟದಿಂದ ನಿರ್ಗಮಿಸಿ, ಎನ್‌ಡಿಎ ತೆಕ್ಕೆಗೆ ಜಾರಿದ್ದಾರೆ. ಇದು ಒಕ್ಕೂಟಕ್ಕೆ ಅತಿದೊಡ್ಡ ಹೊಡೆತವೇ ಸರಿ. ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳಿದ್ದು, ನಿತೀಶ್ ಘರ್ ವಾಪ್ಸಿಯು ಬಿಜೆಪಿಗೆ ಭಾರೀ ಲಾಭವಾಗಿ ಪರಿಣಮಿಸಲಿದೆ.
ಮತ್ತೂಂದೆಡೆ, ಬಿಹಾರದ ಬೆಳವಣಿಗೆಯನ್ನೇ ಅಸ್ತ್ರವಾಗಿಸಿಕೊಂಡು ಉಳಿದ ಪ್ರಾದೇಶಿಕ ಪಕ್ಷಗಳು ಕೂಡ ಹೆಚ್ಚಿನ ಸೀಟುಗಳಿಗೆ ಪಟ್ಟು ಹಿಡಿಯುವ ಸಾಧ್ಯತೆಯಿದ್ದು, ಇಂದು ಕಾಂಗ್ರೆಸ್‌ಗೆ “ಉಗುಳಲೂ ಆಗದ, ನುಂಗಲೂ ಆಗದ ಸ್ಥಿತಿ’ಯನ್ನು ತಂದಿಡಲಿದೆ. ಕಾಂಗ್ರೆಸ್ ಪಟ್ಟು ಸಡಿಲಿಸದಿದ್ದರೆ, ಒಕ್ಕೂಟವು ಪತನಗೊಳ್ಳುವ ಸಾಧ್ಯತೆಯೇ ಹೆಚ್ಚು.
“ಇಂಡಿಯಾ’ ಸ್ಥಿತಿ ಸರಿಯಿಲ್ಲ: ನಿತೀಶ್
ಸಿಎಂ ಹುದ್ದೆಗೆ ರಾಜೀನಾಮೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ನಿತೀಶ್, “ಮಹಾಘಟಬಂಧನ್ ಕಥೆ ಮುಗಿದಿದೆ. ಇಂಡಿಯಾ ಒಕ್ಕೂಟದ ಪರಿಸ್ಥಿತಿ ಸರಿಯಿಲ್ಲ. ಅಲ್ಲಿ ಯಾರೂ ಕೆಲಸ ಮಾಡುತ್ತಿಲ್ಲ. ಒಕ್ಕೂಟವನ್ನು ಬೆಳೆಸಲು ನಾನು ಪ್ರಯತ್ನಿಸಿದೆ, ಆದರೆ ಅದು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.
ಜೆಡಿಯು ಕಥೆ ಮುಗಿಯಲಿದೆ: ತೇಜಸ್ವಿ
ಬಿಹಾರ ಬೆಳವಣಿಗೆ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, “ನಿತೀಶ್ ಗೌರವಾನ್ವಿತ ನಾಯಕ. ಆದರೆ, ಒಂದಂತೂ ಸತ್ಯ- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಕಥೆ ಮುಗಿಯಲಿದೆ’ ಎಂದಿದ್ದಾರೆ.
ಇಂಡಿಯಾಗೆ ಹಿನ್ನಡೆ: ವಿದೇಶಿ ಮಾಧ್ಯಮಗಳು!
ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ನಿತೀಶ್ ಕುಮಾರ್ ಒಕ್ಕೂಟ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಾದ ಈ ಬೆಳವಣಿಗೆ ಇಂಡಿಯಾ ಒಕ್ಕೂಟಕ್ಕೆ ಭಾರೀ ಹಿನ್ನಡೆಯಾದಂತಾಗಿದೆ ಎಂದು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅರಬ್ ನ್ಯೂಸ್, ಪ್ರಸಕ್ತ ಬೆಳವಣಿಗೆ ಒಕ್ಕೂಟದ ರಾಜಕೀಯಕ್ಕೆ ತಿರುವು ಎಂದಿದ್ದರೆ, ಅಲ್ ಅರೇಬಿಯಾ ಮತ್ತು ರಾಯಿಟರ್ಸ್ ಸಂಸ್ಥೆಗಳೂ “ಈ ಬೆಳವಣಿಗೆ ಬಿಜೆಪಿಗೆ ಲಾಭ ಮತ್ತು ಒಕ್ಕೂಟಕ್ಕೆ ನಷ್ಟತರುವಂಥದ್ದು’ ಎಂದು ಹೇಳಿವೆ. ಸಿಂಗಾಪುರ ಮೂಲದ ಏಷ್ಯಾ ನ್ಯೂಸ್ ನೆಟ್‌ವರ್ಕ್, “ನಿತೀಶ್ ನಿರ್ಣಯ ಒಕ್ಕೂಟದ ಶಕ್ತಿಯನ್ನು ಕುಂದಿಸಿ ದುರ್ಬಲಗೊಳಿಸುತ್ತದೆ’ ಎಂದು ವರದಿ ಮಾಡಿದ್ದರೆ, ಮಲೇಷ್ಯಾ ಮೂಲದ ದಿ ಸ್ಟಾರ್ ವೆಬ್‌ಸೈಟ್, “ಮೋದಿ ಸರ್ಕಾರಕ್ಕೆ ಸವಾಲೆಸೆದವರಿಗೆ ಇದು ದೊಡ್ಡ ಆಘಾತ’ ಎಂದು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.