![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 29, 2024, 9:23 AM IST
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಕುಚುಕು ಸ್ನೇಹಿತರಾಗಿದ್ದ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಮತ್ತೆ ಒಂದಾಗಿ ಕಾಣಿಸಿಕೊಳ್ಳಬೇಕೆನ್ನುವುದು ಅವರ ಅಭಿಮಾನಿಗಳ ಆಪೇಕ್ಷೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಡಿಬಾಸ್ – ಕಿಚ್ಚನ ಫ್ಯಾನ್ಸ್ ಗಳ ನಾನಾ ವಿಚಾರವಾಗಿ ಚರ್ಚೆ ನಡೆಯುತ್ತಲೇ ಇರುತ್ತದೆ.
ಕಿಚ್ಚ ಸುದೀಪ್ ಅವರು ಬಿಡುವಿದ್ದಾಗ ತನ್ನ ಅಭಿಮಾನಿಗಳ ಜೊತೆ ʼಎಕ್ಸ್ʼ ನಲ್ಲಿ ʼಆಸ್ಕ್ ಕಿಚ್ಚʼ ನ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಸೋಮವಾರ (ಜ.29 ರಂದು) ಕಿಚ್ಚ ಅಭಿಮಾನಿಗಳ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಆಂಧ್ರದ ಅಭಿಮಾನಿಯೊಬ್ಬರು ರಾಮ್ ಚರಣ್ ಬಗ್ಗೆ ಒಂದು ಪದ ಹೇಳಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಿಚ್ಚ ಅವರು ʼಜೆಂಟಲ್‌ಮೆನ್ʼ ಎಂದು ಉತ್ತರಿಸಿದ್ದಾರೆ. ಪ್ರಭಾಸ್ ಅವರು ಸ್ಟೈಲಿಸ್ಟ್ ಎಂದಿದ್ದಾರೆ. ಇನ್ನು ವಿಷ್ಣುವರ್ಧನ್ ಅವರು ನನ್ನ ಮಾರ್ಗದರ್ಶಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಒಬ್ಬ ಕನಸಗಾರ ಎಂದು ಪ್ರಶ್ನೆಗೆ ಕಿಚ್ಚ ರಿಪ್ಲೈ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Bossನಿಂದ ಬಂದ ಒಂದು ರೂಪಾಯಿಯೂ ನನಗೆ ಬೇಡ; ಅದನ್ನು ದಾನ ಮಾಡುತ್ತೇನೆ: ಡ್ರೋನ್ ಪ್ರತಾಪ್
ಇನ್ನು ಅವರ ಮುಂದಿನ ʼಮ್ಯಾಕ್ಸ್ʼ ಚಿತ್ರದ ಬಗ್ಗೆ ಕೇಳಿದಾಗ ಎಲ್ಲದಕ್ಕೂ ಶೀಘ್ರದಲ್ಲಿ ಉತ್ತರ ಸಿಗುತ್ತದೆ ಎಂದಿದ್ದಾರೆ. ಇನ್ನು 25 ದಿನದಲ್ಲಿ ಶೂಟಿಂಗ್ ಮುಗಿಯಬಹುದೆಂದು ಅವರು ಹೇಳಿದ್ದಾರೆ.
ಇನ್ನು ಮತ್ತೊಬ್ಬರು ದರ್ಶನ್ ಹಾಗೂ ಕಿಚ್ಚನ ಫೋಟೋ ಹಾಕಿ ದಾಸ ದರ್ಶನ್ ಅವರ ಬಗ್ಗೆ ಏನಾದರೂ ಹೇಳಿ ಎಂದಿದ್ದಾರೆ. ಇದಕ್ಕೆ ಸುದೀಪ್ ಅವರು “ನಾನು ಯಾವಗಾಲೂ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ” ಎಂದಿದ್ದಾರೆ. ʼಆಸ್ಕ್ ಕಿಚ್ಚʼ ಸೆಷನ್ಸ್ ಈ ರಿಪ್ಲೈ ವೈರಲ್ ಆಗಿದೆ. ಇದಕ್ಕೆ ನೂರಾರು ಅಭಿಮಾನಿಗಳ ಪ್ರೀತಿಯಿಂದ ರಿಪ್ಲೈ ಕೊಟ್ಟಿದ್ದಾರೆ.
ಇನ್ನೊಬ್ಬರು Sir, ನಿಮ್ದು ಮತ್ತೆ ದರ್ಶನ್ ಅವರ್ದು ಸಮಸ್ಯೆನ ಯಾವಾಗ solve ಮಾಡ್ಕೋತೀರಾ ಇನ್ನು ಎಸ್ಟ್ time ತಗೋತೀರಾ ಎಂದು ಪ್ರಶ್ನೆ ಕೇಳಿದ್ದಾರೆ ಇದಕ್ಕೆ ಸುದೀಪ್ ಅವರು, “ಸಮಸ್ಯೆಯೇನು ಅಂತ ಇಬ್ರು ಹುಡುಕ್ತಾ ಇದೀವಿ” ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಗ್ ಬಾಸ್ ಶೋ ಮುಗಿಸಿರುವ ಕಿಚ್ಚ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
One Word About dasa darshan ❤️
#AskKichcha .. pic.twitter.com/yiVfQ4BNkW— sudeep (@iamSudeepS) January 29, 2024
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.