Missing Case; ಪ್ರತ್ಯೇಕ ಪ್ರಕರಣ: ನಾಲ್ವರು ನಾಪತ್ತೆ
Team Udayavani, Jan 30, 2024, 12:20 AM IST
ಹಾವೇರಿ ಮೂಲದ ಗಾರೆ ಕಾರ್ಮಿಕ
ಮಂಗಳೂರು: ಮೂಲತಃ ಹಾವೇರಿಯವರಾಗಿದ್ದು ಮಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ರವಿ ಫಕೀರಪ್ಪ ದೇಸೂರ (48) ನಾಪತ್ತೆಯಾಗಿದ್ದಾರೆ.
ಪಂಜಿಮೊಗರು ವಿದ್ಯಾನಗರದಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದ ರವಿ ಫಕೀರಪ್ಪ ಕಳೆದ ನವೆಂಬರ್‌ನಲ್ಲಿ ಊರಿಗೆ ಹೋಗುವುದಾಗಿ ತಿಳಿಸಿ ಹೋದವರು ಊರಿಗೂ ಹೋಗದೆ ಮನೆಗೂ ವಾಪಸಾಗದೆ ನಾಪತ್ತೆಯಾಗಿದ್ದಾರೆ ಎಂದು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
5.6 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಅಂಗಿ ಧರಿಸಿದ್ದರು. ಮಾಹಿತಿ ತಿಳಿದವರು ಕಾವೂರು ಪೊಲೀಸ್ ಠಾಣೆ 0824-2220533 ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಬಡಗುಳಿಪಾಡಿಯ ಪರಮೇಶ್ವರ
ಬಜಪೆ: ಗಂಜಿಮಠ ಬಡಗುಳಿಪಾಡಿ ಗ್ರಾಮದ ಗಣೇಶ್ ನಗರ ಹೌಸ್‌ನ ನಿವಾಸಿ ಪರಮೇಶ್ವರ ಗೌಡ (60) ಜ. 8ರಂದು ಸಂಜೆ 6.45ಕ್ಕೆ ಮನೆಯಿಂದ ಹೋದವರು ಕಾಣೆಯಾಗಿದ್ದು, ಇವರನ್ನು ಎಲ್ಲ ಕಡೆ ಹುಡುಕಾಡಿದಾಗ ಪತ್ತೆಯಾಗಿಲ್ಲ.
ಈ ಬಗ್ಗೆ ಅವರ ಪತ್ನಿ ಗಿರಿಜಾ ಬಜಪೆ ಪೊಲೀಸ್ ಠಾಣೆಗೆ ಜ. 27ರಂದು ದೂರು ನೀಡಿದ್ದಾರೆ.
ಅವರು 5.3 ಅಡಿ ಎತ್ತರ,ಎಣ್ಣೆ ಕಪ್ಪು ಮೈ ಬಣ್ಣ ,ಸಪೂರ ಶರೀರ, ಕೊಂಕಣಿ ಕನ್ನಡ ತುಳು ಮಾತನಾಡುತ್ತಾರೆ. ನೇರಳೆ ಬಣ್ಣದ ಗೆರೆಯ ಶರ್ಟ್, ಕೇಸರಿ ಬಣ್ಣದ ಲುಂಗಿ ಧರಿಸಿದ್ದರು.
ಹೊಟೇಲ್ ಕಾರ್ಮಿಕ
ಬ್ರಹ್ಮಾವರ: ಚೇರ್ಕಾಡಿ ಗ್ರಾಮ ಉಗ್ರಾಣಿಜಡ್ಡಿನ ಹರೀಶ (39) ಜ. 24ರಿಂದ ಕಾಣೆಯಾಗಿದ್ದಾರೆ.
ಬೀದರ್‌ನ ಹೊಟೇ ಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಕಾಲಿನ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಜ. 24ರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಗ್ರೇ ಕಲರ್ ಪ್ಯಾಂಟ್ ಹಾಗೂ ನೀಲಿ ಬಣ್ಣದ ತುಂಬು ತೋಳಿನ ಅಂಗಿ ಧರಿಸಿದ್ದರು. ಎಡಕಾಲು ಮಣಿಗಂಟು ಬಳಿ ಗಾಯವಾಗಿದೆ. ಇವರ ಕುರಿತು ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ(0820-2561044) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಧಾರವಾಡದ ಯುವಕ
ಮಂಗಳೂರು: ಮೂಲತಃ ಧಾರವಾಡದ, ಮಂಗಳೂರಿನ ಬೋಳೂರು ಗ್ರಾಮದ ಅಶ್ವಥಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಂಜುನಾಥ ಶಿವಪ್ಪ ಗಾಣಿಗೇರ (22) ಊರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಬರ್ಕೆ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.