Indians ಆಯ್ಕೆ ಈಗ ಮಾಲ್ದೀವ್ಸ್ ಅಲ್ಲ, ಮುಯಿಜ್ಜು ವಿರುದ್ಧ ವಿಪಕ್ಷಗಳ ವಾಗ್ಧಂಡನೆ
Team Udayavani, Jan 30, 2024, 5:31 AM IST
ಹೊಸದಿಲ್ಲಿ: ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿ ವಿವಾದಕ್ಕೆ ಗುರಿಯಾಗಿರುವ ಮಾಲ್ದೀವ್ಸ್ ಈಗ ಭಾರತೀಯರ ಅತ್ಯುತ್ತಮ ಪ್ರವಾಸಿ ತಾಣವಾಗಿ ಉಳಿದಿಲ್ಲ.
2 ದೇಶಗಳ ನಡುವೆ ರಾಜತಾಂತ್ರಿಕ ವಿವಾದ ಆರಂಭವಾಗುವ ಮೊದಲು ದೇಶವಾಸಿಗಳ ಮೊದಲ ಪ್ರವಾಸಿ ತಾಣ ಮಾಲ್ದೀವ್ಸ್ ಆಗಿತ್ತು. ಇತ್ತೀ ಚಿನ ಸಮೀಕ್ಷೆಯ ಅನ್ವಯ ಭಾರತೀಯರು 5ನೇ ಸ್ಥಾನದಲ್ಲಿದ್ದಾರೆ. ಜ.28ರ ವರೆಗೆ 1.74 ಲಕ್ಷ ಮಂದಿ ವಿದೇಶಿ ಪ್ರವಾಸಿಗರು ಪ್ರವಾಸಿಗರ ಪೈಕಿ 13,989 ಮಂದಿ ಭಾರತೀಯರು ಅಲ್ಲಿಗೆ ಭೇಟಿ ನೀಡಿದ್ದಾರೆ. ಚೀನದಿಂದ ಆ ದೇಶಕ್ಕೆ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, 3ನೇ ಸ್ಥಾನ ಗಿಟ್ಟಿಸಿಕೊಂಡಿದೆ. ರಷ್ಯಾ ಮೊದಲ, ಇಟಲಿ ದ್ವಿತೀಯ ಸ್ಥಾನದಲ್ಲಿದೆ. ಭಾರತೀಯರು ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅಲ್ಲಿಗೆ ಶೇ.7.1ರಷ್ಟು ಆದಾಯ ಪ್ರಾಪ್ತವಾಗುತ್ತಿತ್ತು.
ಮುಯಿಜ್ಜು ವಿರುದ್ಧ ವಿಪಕ್ಷಗಳ ವಾಗ್ಧಂಡನೆ
ಮಾಲೆ: ಚೀನ ಕುಮ್ಮಕ್ಕಿನಿಂದ ಭಾರತದ ವಿರುದ್ಧ ಕುಟಿಲ ನೀತಿಗಳನ್ನು ಅನುಸರಿ ಸುತ್ತಿರುವ ಮಾಲ್ದೀ ವ್ಸ್ ಅಧ್ಯಕ್ಷ ಮೊಹ ಮ್ಮದ್ ಮುಯಿಜ್ಜು ವಿರುದ್ಧ ಸಂಸತ್‌ನಲ್ಲಿ ವಾಗ್ಧಂಡನೆ ಮಸೂದೆ ಮಂಡಿ ಸಲು ಅಲ್ಲಿನ ವಿಪಕ್ಷಗಳು ಚಿಂತನೆ ನಡೆಸಿವೆ.
ಈ ಉದ್ದೇಶಕ್ಕಾಗಿ ಪ್ರಧಾನ ವಿಪಕ್ಷ ಮಾಲ್ದೀವಿಯನ್ ಡೆಮೋಕ್ರಾಟಿಕ್ ಪಾರ್ಟಿ (ಎಂಡಿಪಿ) ಸಂಸತ್ ಸದಸ್ಯರ ಸಹಿ ಸಂಗ್ರಹವನ್ನು ಈಗಾಗಲೇ ಆರಂಭಿ ಸಿದೆ. ವಾಗ್ಧಂಡನೆ ಮಸೂದೆಯ ಯಶಸ್ಸಿಗಾಗಿ ಮತ್ತೂಂದು ವಿಪಕ್ಷದ ಡೆಮೋಕ್ರಾಟ್‌ನ ಸಹಕಾರ ವನ್ನು ಅದು ಕೋರಿದೆ.
ಮತ್ತೂಂದೆಡೆ ರವಿವಾರ ಆ ದೇಶದ ಸಂಸತ್‌ನಲ್ಲಿ ಅಲ್ಲಿನ ವಿಪಕ್ಷ ಮತ್ತು ಆಡಳಿತ ಪಕ್ಷಗಳ ಸಂಸದರ ನಡುವೆ ಹೊಡೆದಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಸಂಸತ್‌ನ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನೂ ಮಂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.