Election ರಾಜ್ಯದಿಂದ ಯಾರಿಗೆ ರಾಜ್ಯಸಭೆ ಭಾಗ್ಯ?ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಯಾರೆಂಬ ಕುತೂಹಲ
ರಾಜ್ಯದ 4 ಸ್ಥಾನಗಳಿಗೆ ಫೆ. 27ರಂದು ಚುನಾವಣೆ
Team Udayavani, Jan 30, 2024, 7:10 AM IST
ಬೆಂಗಳೂರು: ಎಪ್ರಿಲ್‌ನಲ್ಲಿ ನಿವೃತ್ತಿ ಯಾಗಲಿರುವ ರಾಜ್ಯಸಭೆಯ 4 ಸದಸ್ಯರ ತೆರವಾಗುವ ಸ್ಥಾನಗಳಿಗೆ ಚುನಾವಣೆ ಘೋಷಣೆ ಯಾಗಿದ್ದು, ಇದರ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ.
2018ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಜಿ.ಸಿ. ಚಂದ್ರಶೇಖರ್, ಸಯ್ಯದ್ ನಾಸಿರ್ ಹುಸೇನ್, ಡಾ| ಎಲ್. ಹನುಮಂತಯ್ಯ ಹಾಗೂ ಕೇಂದ್ರ ಸಚಿವರೂ ಆಗಿರುವ ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರ ಸದಸ್ಯತ್ವದ ಅವಧಿ ಎಪ್ರಿಲ್‌ನಲ್ಲಿ ಮುಗಿಯಲಿದ್ದು, ಈ ಸ್ಥಾನಗಳಿಗೆ ಫೆ. 27ರಂದು ಮತದಾನ ನಡೆಯಲಿದೆ. ಹೀಗಾಗಿ ಹಾಲಿ ಸದಸ್ಯರು ತಮ್ಮ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದರೆ ಈ ಸ್ಥಾನಗಳ ಮೇಲೆ ಹಲವರು ಕಣ್ಣಿಟ್ಟಿರುವುದರಿಂದ ರಾಜಕೀಯ ಪಕ್ಷಗಳ ಒಳಗೂ ಸಾಕಷ್ಟು ಕಸರತ್ತುಗಳು ನಡೆಯಲಿವೆ.
ರಾಜ್ಯಸಭಾ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ವಿಧಾನಸಭಾ ಸದಸ್ಯರೇ ಮತದಾರರಾಗಿರಲಿದ್ದು, ಗೆಲ್ಲಲು ಕನಿಷ್ಠ 45 ಮತಗಳ ಅಗತ್ಯವಿದೆ.
ಫೆ. 27ರಂದೇ ಫಲಿತಾಂಶ
ಫೆ. 8ರಂದು ಅಧಿಸೂಚನೆ ಪ್ರಕಟಗೊಂಡು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಫೆ. 15ರ ವರೆಗೆ ಉಮೇದುವಾರಿಕೆ ಸಲ್ಲಿಕೆಗೆ ಅವಕಾಶ ಇರಲಿದ್ದು, ಫೆ. 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಹಿಂಪಡೆಯಲು ಫೆ. 20ರ ವರೆಗೆ ಕಾಲಾವಕಾಶ ಇರಲಿದೆ. ಕಣದಲ್ಲಿ ಹೆಚ್ಚುವರಿ ಅಭ್ಯರ್ಥಿ ಇದ್ದರಷ್ಟೇ ಫೆ. 27ರಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟಗೊಳ್ಳಲಿದೆ. ಒಂದು ವೇಳೆ 4 ಸ್ಥಾನಗಳಿಗೆ ತಲಾ ಒಬ್ಬೊಬ್ಬರು ಅಭ್ಯರ್ಥಿಗಳಷ್ಟೇ ಕಣದಲ್ಲಿ ಉಳಿದರೆ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿವೆ.
ಕಾಂಗ್ರೆಸ್-ಬಿಜೆಪಿ ಸ್ಥಿತಿಗತಿ
-ಜಿ.ಸಿ. ಚಂದ್ರಶೇಖರ್(ಕಾಂಗ್ರೆಸ್) ನಿವೃತ್ತಿ: ಮತ್ತೆ ಅವಕಾಶ ಸಾಧ್ಯತೆ
-ಸೈಯ್ಯದ್ ನಾಸಿರ್ ಹುಸೇನ್(ಕಾಂಗ್ರೆಸ್) ನಿವೃತ್ತಿ: ಮತ್ತೆ ಅವಕಾಶ ಸಾಧ್ಯತೆ
-ಡಾ| ಎಲ್. ಹನುಮಂತಯ್ಯ (ಕಾಂಗ್ರೆಸ್): ಒಬಿಸಿ ಸಮುದಾಯದ ನಾಯಕರಿಗೆ ಅವಕಾಶ?
-ರಾಜೀವ್ ಚಂದ್ರಶೇಖರ್ (ಬಿಜೆಪಿ) ನಿವೃತ್ತಿ: ಬೇರೆ ನಾಯಕರಿಗೆ ಅವಕಾಶ ಸಾಧ್ಯತೆ
ರಾಜ್ಯಸಭೆಯ 1 ಸ್ಥಾನ ಗೆಲ್ಲಲು ಬೇಕಿರುವುದು 45 ಮತ
-ಕಾಂಗ್ರೆಸ್ ಬುಟ್ಟಿಯಲ್ಲಿವೆ
3 ಸ್ಥಾನ ಗೆಲ್ಲುವ 135 ಮತ
-ಕೈಗೆ ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ ಬಲ
-ಬಿಜೆಪಿ ಬತ್ತಳಿಕೆಯಲ್ಲಿ 66,
ದಳದಲ್ಲುಂಟು 19 ಮತಗಳು
-ಮಿತ್ರಪಕ್ಷಕ್ಕೆ ಕೆಆರ್‌ಪಿ ಪಕ್ಷದ
ಜನಾರ್ದನ ರೆಡ್ಡಿ ಬೆಂಬಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.