ಚಿಕ್ಕಬಳ್ಳಾಪುರ: ಮಿನಿ ಕಿಟ್‌ ಸಿಗದೆ ಮೇವಿಗಾಗಿ ರೈತರ ಪರದಾಟ!


Team Udayavani, Jan 30, 2024, 2:03 PM IST

ಚಿಕ್ಕಬಳ್ಳಾಪುರ: ಮಿನಿ ಕಿಟ್‌ ಸಿಗದೆ ಮೇವಿಗಾಗಿ ರೈತರ ಪರದಾಟ!

ಉದಯವಾಣಿ ಸಮಾಚಾರ
ಚಿಕ್ಕಬಳ್ಳಾಪುರ: ಸರ್ಕಾರದಿಂದ ಪಶು ಸಂಗೋಪನಾ ಇಲಾಖೆ ಮೂಲಕ ಪೂರೈಕೆ ಆಗಿದ್ದ ಮೇವು ಬೀಜಗಳ ಮಿನಿಕಿಟ್‌ಗಳು ಜಿಲ್ಲೆಯ ಅರ್ಧಕ್ಕರ್ಧ ರೈತರಿಗೆ ಸಿಗದೇ ಹಸಿರು ಮೇವುಗಾಗಿ ಜಿಲ್ಲೆಯ ಅನ್ನದಾತರು ಅದರಲ್ಲೂ ಹೈನುಗಾರಿಕೆಯಲ್ಲಿ ತೊಡಗಿರುವ ಕೃಷಿಕರು ಪರದಾಡುವಂತಾಗಿದೆ.

ಈ ವರ್ಷ ಜಿಲ್ಲಾದ್ಯಂತ ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿರುವ ಪರಿಣಾಮ ಸಹಜವಾಗಿಯೆ ಮೇವು ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದ್ದು, ಅದರಲ್ಲೂ ಹಸಿರು ಮೇವು ಇಲ್ಲದೇ ಹಾಲಿನ ಉತ್ಪಾದನೆಯಲ್ಲಿ ಇಳಿಮುಖ
ಕಾಣುತ್ತಿದೆ. ಸದ್ಯ ಜಿಲ್ಲೆಯಲ್ಲಿ ಮೇವು ಮಿನಿಕಿಟ್‌ಗಳಿಗಾಗಿ ಜಿಲ್ಲೆಯ ಅನ್ನದಾತದರು ಸರ್ಕಾರದ ಕಡೆಗೆ ಎದುರು ನೋಡುವಂತಾಗಿದೆ.

21,583 ಕಿಟ್‌ಗಳ ವಿತರಣೆ:
ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಯಿಂದ ರೈತರಿಗೆ ಉಚಿತವಾಗಿ ಮೇವು ಮಿನಿ ಕಿಟ್‌ಗಳು ವಿತರಿಸಿದರೂ ಅವು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಜಿಲ್ಲೆಗೆ ಒಟ್ಟು ಪೂರೈಕೆ ಆಗಿದ್ದ 21,583 ಮಿನಿ ಕಿಟ್‌ಗಳು ರೈತರಿಗೆ ವಿತರಿಸಿದರೂ ಇನ್ನೂ 20 ಸಾವಿರಷ್ಟು ಮಿನಿ ಕಿಟ್‌ಗಳಿಗೆ ರೈತರಿಂದ ಬೇಡಿಕೆ ಬರುತ್ತಲೇ ಇದೆ. ಹೇಳಿ ಕೇಳಿ ಜಿಲ್ಲೆಯು ಹೈನುಗಾರಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. 10 ಲಕ್ಷಕ್ಕೂ ಅಧಿಕ ಜಾನುವಾರುಗಳು ಇವೆ. ಆದರೆ ಸರ್ಕಾರ ಮೇವಿನ ಮಿನಿಕಿಟ್‌ಗಳ ವಿತರಣೆ ವೇಳೆ ಜಿಲ್ಲೆಗೆ ರೈತರ ಬೇಡಿಕೆಗೆ ತಕ್ಕಂತೆ ಸಮರ್ಪಕವಾಗಿ ಪೂರೈಸದ ಪರಿಣಾಮ ಜಿಲ್ಲೆಯಲ್ಲಿ ಮೇವು ಕಿಟ್‌ಗಳು ಸಿಗದೇ ರೈತರು ಮೇವುಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಗೆ 21,583 ಮಿನಿ ಕಿಟ್‌ಗಳು ಪೂರೈಸಿದ್ದು ಆ ಪೈಕಿ ಬಾಗೇಪಲ್ಲಿ 3,138, ಚಿಕ್ಕಬಳ್ಳಾಪುರ 1,118, ಚಿಂತಾಮಣಿ 4,130, ಗೌರಿಬಿದನೂರು 5,490, ಗುಡಿಬಂಡೆ 4,439 ಹಾಗೂ ಶಿಡ್ಲಘಟ್ಟ ತಾಲೂಕಿಗೆ 3,268 ಕಿಟ್‌ಗಳು ವಿತರಿಸಲಾಗಿದೆ. ಆದರೂ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಬೇಡಿಕೆಗೆ ಅನುಗುಣವಾಗಿ ಕಿಟ್‌ಗಳು ಸಿಗದೇ ಜಾನುವಾರುಗಳಿಗೆ ಮೇವು ಒದಸುವುದು ರೈತರ ಪಾಲಿಗೆ ಸವಾಲಿನ ಕೆಲಸವಾಗಿದೆ. ಇನ್ನೂ ಜಿಲ್ಲೆಯಲ್ಲಿ ಬೇಸಿಗೆ ಶುರುವಾಗುತ್ತಿದ್ದಂತೆ ಹಸಿರು ಮೇವುಗೆ ಅನ್ನದಾತರು ಪರದಾಡುವಂತಾಗಿದೆ. ಅದರಲ್ಲೂ ಹೈನುಗಾರಿಕೆಯಲ್ಲಿ ತೊಡಗಿರುವ ಸಹಸ್ರಾರು ರೈತರು ಹಸಿರು ಮೇವಿಗೆ ಇನ್ನಿಲ್ಲದ ಪಡಿಪಾಟಲು  ಅನುಭವಿಸುವಂತಾಗಿದ್ದು ಮಾರುಕಟ್ಟೆಯಲ್ಲಿ ಹಸಿರು ಮೇವಿಗೆ ಚಿನ್ನದ ಬೆಲೆ ಬಂದಿದೆ.

ಬರದಿಂದ ಮೇವು ಉತ್ಪಾದನೆ ಕುಸಿತ: ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿದ್ದು ಬರೋಬ್ಬರಿ 75,208 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಗಳು ಹಾನಿಯಾಗಿವೆ. ರಾಗಿ ಸೇರಿದಂತೆ ಜೋಳ, ನೆಲಗಡಲೆ, ಅವರೆ, ತೊಗರಿ, ಹುರುಳಿ ಬೆಳೆಗಳು ಮಳೆ ಕೊರತೆಯಿಂದ ಹಾನಿಯಾಗಿದ್ದು ಕನಿಷ್ಠ ಜಾನುವಾರುಗಳಿಗೆ ಮೇವು ಸಿಗದ ರೀತಿಯಲ್ಲಿ ಬರ ಆವರಿಸಿ ಜಿಲ್ಲೆಯಲ್ಲಿ ಮೇವು ಉತ್ಪಾದನೆ ಕುಸಿತ ಕಂಡಿರುವುದರಿಂದ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ಹೊಂದಿಸಲು ಅನ್ನದಾತರು ಇನ್ನಿಲ್ಲದ ರೀತಿಯಲ್ಲಿ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಮೇವು ಆಧಾರಿತ 10.41 ಲಕ್ಷ ಜಾನುವಾರು
ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ 2019ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,40,212 ಹಸು ಮತ್ತು ಎಮ್ಮೆ ಹಾಗೂ 8,01,589 ಕುರಿ ಮತ್ತು ಮೇಕೆಗಳಿದ್ದು, ಒಟ್ಟು 10,41,804 ಮೇವು ಆಧಾರಿತ ಜಾನುವಾರುಗಳು ರೈತರ ಬಳಿ ಇವೆ. ಜಿಲ್ಲೆಯಲ್ಲಿ ಈ ವರ್ಷ ಬರದ ಪರಿಣಾಮ ಮೇವು ಉತ್ಪಾದನೆ ಪ್ರಮಾಣ ಕುಸಿದಿದ್ದು ಜಿಲ್ಲಾದ್ಯಂತ ಹಸಿರು ಮೇವುಗೆ ಬರ ಎದುರಾಗಿದೆ. ಪಶು ಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ ಜಿಲ್ಲೆಯಲ್ಲಿ 3,08,226 ಮೆಟ್ರಿಕ್‌ ಟನ್‌ ಮೇವು ಲಭ್ಯವಿದೆ.

13,349 ರೈತರಿಗೆ ಮಾತ್ರ ಮೇವು ಕಿಟ್‌
ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದ್ದರೂ ಸರ್ಕಾರ ಪೂರೈಸಿರುವ ಮೇವು ಕಿಟ್‌ಗಳು ಇಲ್ಲಿವರೆಗೂ ಜಿಲ್ಲೆಯಲ್ಲಿ ಕೇವಲ 13,349 ರೈತರಿಗೆ ಮಾತ್ರ ಸಿಕ್ಕಿವೆ. ಆ ಪೈಕಿ ಬಾಗೇಪಲ್ಲಿ 2,458, ಚಿಕ್ಕಬಳ್ಳಾಪುರದಲ್ಲಿ 835, ಚಿಂತಾಮಣಿ ಯಲ್ಲಿ 1,958, ಗೌರಿಬಿದನೂರಲ್ಲಿ 2,525, ಗುಡಿಬಂಡೆ 4,439 ಹಾಗೂ ಶಿಡ್ಲಘಟ್ಟದಲ್ಲಿ 1,920 ರೈತರಿಗೆ ಮಾತ್ರ ಮೇವು ಕಿಟ್‌ಗಳು ಸಿಕ್ಕಿದ್ದು, ಇನ್ನೂ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆ ರೈತರಿಗೆ ಮೇವು ಕಿಟ್‌ಗಳ ಅಗತ್ಯ ಇದ್ದರೂ ಪೂರೈಕೆ ಕೊರತೆಯ ಪರಿಣಾಮ ಪಶು ಸಂಗೋಪನಾ ಇಲಾಖೆಗೆ ಅಲೆದಾಡುವಂತಾಗಿದೆ. ಇನ್ನೂ 13,349 ರೈತರು ಮೇವು ಕಿಟ್‌ ಪಡೆದಿದ್ದರೂ ಇಲ್ಲಿವರೆಗೂ ಕೇವಲ 9,171 ರೈತರು ಮಾತ್ರ
ಬಿತ್ತನೆ ಮಾಡಿದ್ದಾರೆಂದು ಪಶು ಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಗೆ ಈ ವರ್ಷ ಒಟ್ಟು 21,583 ಮಿನಿ ಮೇವು ಕಿಟ್‌ಗಳು ಸರಬರಾಜು ಆಗಿದ್ದು, ಎಲ್ಲಾ ಕಿಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ರೈತರಿಗೆ ಇನ್ನೂ ಮಿನಿ ಕಿಟ್‌ಗಳಿಗೆ ಬೇಡಿಕೆ ಬರುತ್ತಿದ್ದು, ಜಿಲ್ಲೆಗೆ 19,200 ಮೇವು ಕಿಟ್‌ಗಳು ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಬಂದ ಕೂಡಲೇ ರೈತರಿಗೆ ಕಿಟ್‌ಗಳನ್ನು ವಿತರಿಸಲಾಗುವುದು.
●ಡಾ.ರವಿ, ಉಪ ನಿರ್ದೇಶಕರು,
ಪಶು ಸಂಗೋಪನಾ ಇಲಾಖೆ

■ ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್‌ ನಿಲ್ದಾಣ  

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.