Train ಯಶವಂತಪುರ-ಮಂಗಳೂರು ಸೆಂಟ್ರಲ್ ರೈಲು: ಕಣ್ಣೂರಿನಿಂದ ಕೋಯಿಕ್ಕೋಡ್ ವರೆಗೆ ವಿಸ್ತರಣೆ
Team Udayavani, Jan 31, 2024, 12:40 AM IST
ಮಂಗಳೂರು: ಯಶವಂತಪುರ – ಮಂಗಳೂರು ಸೆಂಟ್ರಲ್ (ಕಣ್ಣೂರು) ರಾತ್ರಿ ರೈಲು ಕೇರಳದಲ್ಲಿ ಎರಡನೇ ಬಾರಿಗೆ ವಿಸ್ತರಣೆಗೊಂಡಿದ್ದು, ಇದೀಗ ಕಣ್ಣೂರಿನಿಂದ ಕೋಯಿಕ್ಕೋಡ್ ವರೆಗೆ ವಿಸ್ತರಣೆಯಾಗಿದೆ.
ನಂ. 16511/512 ಬೆಂಗಳೂರು – ಕಣ್ಣೂರು – ಬೆಂಗಳೂರು ರಾತ್ರಿ ರೈಲನ್ನು ಕೋಯಿಕ್ಕೋಡ್ ವರೆಗೆ ವಿಸ್ತರಿಸುವ ಕುರಿತ ದಕ್ಷಿಣ ರೈಲ್ವೇಯ ಪ್ರಸ್ತಾವನೆಗೆ ರೈಲ್ವೇ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈಗ ಇರುವ ವೇಳಾಪಟ್ಟಿಯಂತೆ ರೈಲು ಸಂಚರಿಸಲಿದ್ದು, ನಂ. 16511 ರೈಲು ಕೋಯಿಕ್ಕೋಡ್‌ಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಈ ರೈಲು ತಲಶ್ಶೇರಿ, ವಡಕರ ಮತ್ತು ಕ್ವಿಲಾಂಡಿಯಲ್ಲಿ ನಿಲುಗಡೆಯಾಗಲಿದೆ. 16512 ರೈಲು ಸಂಜೆ 3.30ಕ್ಕೆ ಕೋಯಿಕ್ಕೋಡ್‌ನಿಂದ ಹೊರಡಲಿದೆ.
ರೈಲನ್ನು ವಿಸ್ತರಿಸುವುದಿಲ್ಲ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ನಳಿನ್ ಕುಮಾರ್ ಅವರಿಗೆ ನೀಡಿರುವ ಭರವಸೆಯ ಹೊರತಾಗಿಯೂ ಈ ವಿಸ್ತರಣೆ ಪ್ರಕ್ರಿಯೆ ನಡೆದಿದೆ.
2007ರಲ್ಲಿ ಆರಂಭವಾಗಿದ್ದು, ಯಶವಂತಪುರ – ಮಂಗಳೂರು ಸೆಂಟ್ರಲ್ ರೈಲು ಮೊದಲನೇ ಬಾರಿ ರೈಲು 2009ರಲ್ಲಿ ಮಂಗಳೂರಿನಿಂದ ಕಣ್ಣೂರು ವರೆಗೆ ವಿಸ್ತರಣೆಯಾಗಿತ್ತು. ಕಾರವಾರಕ್ಕೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಹೊರತಾಗಿಯೂ ಈ ರೈಲನ್ನು ಕಣ್ಣೂರಿಗೆ ವಿಸ್ತರಿಸಲಾಗಿತ್ತು.
ವಿಸ್ತರಣೆಗೆ ವಿರೋಧ
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಸಮಿತಿ ಈ ವಿಸ್ತರಣೆಯನ್ನು ವಿರೋಧಿಸಿದ್ದು, ಇದು ಕರಾವಳಿಯ ಪ್ರಯಾಣಿಕರಿಗೆ ಸೀಟ್ ಅಲಭ್ಯತೆಗೆ ಕಾರಣವಾಗಲಿದೆ. ಕೇರಳಿಗರು ಬೆಂಗಳೂರಿಗೆ ತೆರಳಲು ಇದೇ ರೈಲನ್ನು ಅವಲಂಬಿಸುವ ಕಾರಣ, ಕಾದಿರಿಸದ ಸೀಟ್‌ಗಳಿರುವ ಬೋಗಿಗಳು ಮಂಗಳೂರು ತಲುಪುವಾಗಲೇ ಭರ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.