Belthangady ಕಡ್ತ್ಯಾರು ಸುಡುಮದ್ದು ಪ್ರಕರಣ; ಪಟಾಕಿ ಅಂಗಡಿಗಳಲ್ಲಿ ಅಧಿಕಾರಿಗಳಿಂದ ಪರಿಶೀಲನೆ
ಬಂಧಿತರಿಬ್ಬರು ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿಗೆ
Team Udayavani, Jan 31, 2024, 1:05 AM IST
ಬೆಳ್ತಂಗಡಿ: ವೇಣೂರು ಗೋಳಿಯಂಗಡಿ ಸಮೀಪದ ಕಡ್ತ್ಯಾರು ಜಮೀನಿನಲ್ಲಿ ಸುಡುಮದ್ದು ಘಟಕ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಸಾಲಿಡ್ ಫೈರ್ ವಕ್ಸ್Õìನ ಮಾಲಕ ವೇಣೂರಿನ ಸೈಯದ್ ಬಶೀರ್ ಹಾಗೂ ಪಟಾಕಿ ತಯಾರಿಸುತ್ತಿದ್ದ ಹಾಸನ ಮೂಲದ ಕಿರಣ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ನೀಡಲಾಗಿದೆ.
ಸ್ಥಳೀಯ ನಿವಾಸಿ ಶಾಂತಿ ಅವರ ದೂರಿನಂತೆ ವೇಣೂರು ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಅಧಿನಿಯಮ 1884ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟಕದಲ್ಲಿರುವ ಪಟಾಕಿಗಳನ್ನು ನಿಷ್ಕ್ರಿಯಗೊಳಿಸಲು ನ್ಯಾಯಾಲಯದ ಅನುಮತಿ ಬೇಕಿದ್ದು, ಸದ್ಯ ಗೋದಾಮಿಗೆ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಸಶಸ್ತ್ರ ದಳದ ಒಂದು ತುಕಡಿಯ ಮೂಲಕ ರಕ್ಷಣೆ ಒದಗಿಸಲಾಗಿದೆ.
ಎಂಎಲ್‌ಸಿ ಹರೀಶ್,
ಬಿಷಪ್ ಭೇಟಿ
ಸ್ಫೋಟ ನಡೆದ ಸ್ಥಳದಲ್ಲಿ ಸುತ್ತಮುತ್ತ ಮನೆ ಮಂದಿ ಆತಂಕ್ಕೆ ಒಳಗಾಗಿದ್ದರಿಂದ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ಬೆಳ್ತಂಗಡಿ ಬಿಷಪ್ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಅವರು ಹಾನಿಗೊಳಗಾದ ಮನೆ ಮಂದಿಯಾದ ವೆಂಕಪ್ಪ ಮೂಲ್ಯ, ಲೈಸ್ಸಿ ಚೆರಾಡಿ, ಜೋಸೆಫ್ ಮ್ಯಾಥ್ಯೂ ಅವರನ್ನು ಸಂದರ್ಶಿಸಿ ಸಾಂತ್ವನ ಹೇಳಿದರು. ಅಧಿಕಾರಿಗಳು ಸೂಕ್ತ ತನಿಖೆ ಕೈಗೊಳ್ಳಬೇಕು, ಹಾನಿಗೊಳಗಾದವರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೆಕೇಂದು ಆಗ್ರಹಿಸಿದರು.
ಶಾಸಕ ಪೂಂಜ ನೆರವು
ಘಟನಾ ಸ್ಥಳದಿಂದ ಅನತಿ ದೂರದ ಮನೆಯ ಶೀಟ್ ಮಾಡು ಕುಸಿತಗೊಂಡು ಚಳಿಯಲ್ಲಿ ರಾತ್ರಿ ಕಳೆಯುತ್ತಿದ್ದ ವೃದ್ಧ ದಂಪತಿ ವೆಂಕಪ್ಪ ಮತ್ತು ಕಮಲಾ ಅವರನ್ನು ಭೇಟಿಯಾದ ಶಾಸಕ ಹರೀಶ್ ಪೂಂಜ ಸ್ಥಳೀಯ ಕಾರ್ಯಕರ್ತರ ಸಹಾಯದಿಂದ ಸೂಕ್ತ ಮೇಲ್ಛಾವಣಿ ದುರಸ್ಥಿಗೊಳಿಸಿ ವಾಸಕ್ಕೆ ಯೋಗ್ಯವಾಗಿಸಿದರು.
ಪಟಾಕಿ ಅಂಗಡಿಗಳಲ್ಲಿ ತಹಶೀಲ್ದಾರ್ ಪರಿಶೀಲನೆ
ಸ್ಫೋಟದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಟಾಕಿ ಮಾರಾಟ ಮತ್ತು ಗೋದಾಮು ಮಳಿಗೆಗಳಿಗೆ ಜಿಲ್ಲಾಧಿಕಾರಿ ತಾತ್ಕಾಲಿಕ ಪರವಾನಿಗೆ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಹಾಗೂ ಅಗ್ನಿಶಾಮಕದಳದ ಪ್ರಾದೇಶಿಕ ಅಧಿಕಾರಿ ರಂಗನಾಥ್ ತಂಡ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋದಾಮಿಗೆ ಮಂಗಳವಾರ ದಾಳಿ ನಡೆಸಿ ನಡೆಸಿ ಪರಿಶೀಲಿಸಿದೆೆ. ತಾಲೂಕಿನ 9 ಕಡೆಗಳಲ್ಲಿರುವ ಪಟಾಕಿ ಮಾರಾಟ ಮತ್ತು ದಾಸ್ತಾನು ಗೋದಾಮಿನಲ್ಲಿ ನೋಟಿಸ್ ಹಚ್ಚಿ ಬೀಗ ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.