Bangalore: ವಿಶ್ವದ ಕುಖ್ಯಾತ ಮಾರ್ಕೆಟ್ ಪಟ್ಟಿಯಲ್ಲಿ ಬೆಂಗಳೂರಿನ ಎಸ್‌ಪಿ ರಸ್ತೆ ಉಲ್ಲೇಖ!
Team Udayavani, Jan 31, 2024, 10:40 AM IST
ವಾಷಿಂಗ್ಟನ್: ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಸಂಸ್ಥೆಯು(ಯುಎಸ್‌ಟಿಆರ್) ಮಂಗಳವಾರ “2022ರ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿ’ಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಬೆಂಗಳೂರಿನ ಎಸ್‌ಪಿ ರಸ್ತೆ (ಸದರ್ ಪತ್ರಪ್ಪ ರಸ್ತೆ) ಹೆಸರು ಉಲ್ಲೇಖವಾಗಿದೆ.
ಈ ಪಟ್ಟಿಯಲ್ಲಿ ವಿಶ್ವದ 39 ಆನ್‌ಲೈನ್ ಮತ್ತು 33 ಭೌತಿಕ ಮಾರುಕಟ್ಟೆಗಳನ್ನು ಹೆಸರಿಸಲಾಗಿದೆ. ನಕಲಿ ಟ್ರೇಡ್‌ಮಾರ್ಕ್ ಸೃಷ್ಟಿ ಅಥವಾ ಹಕ್ಕುಸ್ವಾಮ್ಯ ಚೌರ್ಯದಲ್ಲಿ ಈ ಮಾರುಕಟ್ಟೆಗಳು ತೊಡಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮುಂಬೈನ ಹೀರಾ ಪನ್ನ ಮಾರುಕಟ್ಟೆ, ಕೋಲ್ಕತ್ತಾದ ಕಿಡ್ಡರ್‌ಪೋರ್ ಮಾರುಕಟ್ಟೆ, ದೆಹಲಿಯ ಟ್ಯಾಂಕ್ ರಸ್ತೆ ಮಾರುಕಟ್ಟೆ ಹಾಗೂ ಇ-ಕಾರ್ಮಸ್ ಉದ್ಯಮ “ಇಂಡಿಯಾ ಮಾರ್ಟ್’ ಕೂಡ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯಲ್ಲಿವೆ.
ಈ ಮಾರುಕಟ್ಟೆಗಳಲ್ಲಿ ನಕಲಿ ವ್ಯಾಪಾರ ಹೆಚ್ಚು. ಅಲ್ಲದೇ ಕಳ್ಳತನ ಮಾಡಿರುವ ಸರಕುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ ಎಂದು ಯುಎಸ್‌ಟಿಆರ್ ತನ್ನ ವರದಿಯಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.