KUWJ ವಾರ್ಷಿಕ ಪ್ರಶಸ್ತಿ ಪ್ರಕಟ: ಉದಯವಾಣಿಯ ನಾಲ್ವರು ಆಯ್ಕೆ
Team Udayavani, Jan 31, 2024, 12:09 PM IST
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪ್ರತ್ರಕರ್ತರ ಸಂಘದ 2022-23ನೇ ಸಾಲಿನ ಪ್ರಶಸ್ತಿ ಪ್ರಕಟಗೊಂಡಿದ್ದು, “ಉದಯವಾಣಿ” ಮಣಿಪಾಲ, ಮುಂಬಯಿ ಆವೃತ್ತಿಯ ಸಂಪಾದಕ ಅರವಿಂದ ನಾವಡ, ಬೆಂಗಳೂರಿನ ವರದಿಗಾರ್ತಿ ತೃಪ್ತಿ ಕುಮ್ರಗೋಡು, ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಅರೆಕಾಲಿಕ ವರದಿಗಾರ ರಾಧಾಕೃಷ್ಣ ಭಟ್, ರಾಯಚೂರು ಜಿಲ್ಲೆ ಲಿಂಗಸೂಗೂರಿನ ಅರೆಕಾಲಿಕ ವರದಿಗಾರ ಶಿವರಾಜ ಕೆಂಭಾವಿ ಸಹಿತ 74 ಮಂದಿ ವರದಿಗಾರರು ಮತ್ತು ಛಾಯಾಗ್ರಾಹಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೆಯುಡಬ್ಲುಜೆ ವಿಶೇಷ ಪ್ರಶಸ್ತಿ ವಿಭಾಗದಲ್ಲಿ ಅರವಿಂದ ನಾವಡ ಮತ್ತು ರಾಧಾಕೃಷ್ಣ ಭಟ್, ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ ವಿಭಾಗದಲ್ಲಿ ತೃಪ್ತಿ ಕುಮ್ರಗೋಡು, ಅಭಿಮಾನಿ ಪ್ರಕಾಶನ ಪ್ರಶಸ್ತಿ ವಿಭಾಗದಲ್ಲಿ ಶಿವರಾಜ ಕೆಂಭಾವಿ ಆಯ್ಕೆಯಾಗಿದ್ದಾರೆ. ವಿವಿಧ 30 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಫೆ. 3 ಮತ್ತು 4ರಂದು ನಡೆಯಲಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಪ್ರಶಸ್ತಿಗಳ ವಿವರ:
1 ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)
ಸಣ್ಣವಂಡ ಕಿಶೋರ್ ನಾಚಪ್ಪ, ಮಡಿಕೇರಿ. ಸಂಶುದ್ದೀನ್ ಕೆ.ಎಣ್ಣೂರು, ವಾರ್ತಾಭಾರತಿ, ಮಂಗಳೂರು
2 ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ) ಸಿ.ಎನ್.ಶಿವಶಂಕರ, ದೂರದರ್ಶನ ವರದಿಗಾರ ಕೋಲಾರ, ಎಂ.ಎನ್.ಯೋಗೇಶ್, ಪ್ರಜಾವಾಣಿ, ಮಂಡ್ಯ
3 ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿಗೆ)
ಡಿ.ಉಮೇಶ್ ನಾಯ್ಕ, ವಿಜಯವಾಣಿ, ತರೀಕೆರೆ ಎಲ್.ದೇವರಾಜ್, ವಿಜಯ ಕರ್ನಾಟಕ,
4 ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ)
ಚಂದ್ರಹಾಸ ಹಿರೇಮಳಲಿ, ಪ್ರಜಾವಾಣಿ ಬೆಂಗಳೂರು. ಎಸ್.ಶ್ರೀಧರ, ವಿಜಯ ಕರ್ನಾಟಕ, ರಾಮನಗರ
5 ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ)
ಮಂಜುನಾಥ ಜಾದಗೆರೆ, ವಿಜಯ ಕರ್ನಾಟಕ ಬೆಂಗಳೂರು. ಇಬ್ರಾಹೀಂ ಖಲೀಲ್ ಬನ್ನೂರು, ವಾರ್ತಾಭಾರತಿ
6 ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ) ಶಶಿಧರ ಹೆಗಡೆ, ನಂದಿಕಲ್, ವಿಜಯ ಕರ್ನಾಟಕ. ಡಿ.ಎಚ್.ಸುಖೇಶ್, ಪಬ್ಲಿಕ್ ಟಿವಿ
7 ಮಂಗಳ ಎಂ.ಸಿ.ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆ ವಿಭಾಗ) ಕಾರಂತ ಪೆರಾಜೆ, ಅಡಿಕೆ ಪತ್ರಿಕೆ, ಪುತ್ತೂರು. ರಾಘವೇಂದ್ರ ತೊಗರ್ಸಿ, ಸುಧಾ
8 ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ) ಕೆ.ಆರ್. ಯೋಗೀಶ, ಜನಮಿತ್ರ, ಕಡೂರು. ತಾಜುದ್ದೀನ್ ಅಜಾದ್, ಡೆಕ್ಕನ್ ಹೆರಾಲ್ಡ್, ಕಲಬುರುಗಿ
9 ಅತ್ಯುತ್ತಮ ಪೋಟೋಗ್ರಫಿ: ಪಿ.ಕೆ.ಬಡಿಗೇರ, ಬೆಳಗಾವಿ. ನಟರಾಜ್, ಹಾಸನ. ಅನುರಾಗ್ ಬಸವರಾಜು, ಮೈಸೂರು
10 ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ) ಪ್ರಕಾಶ್ ಎಸ್.ಶೇಟ್, ವಿಜಯವಾಣಿ, ಹುಬ್ಬಳ್ಳಿ. ಅಮರೇಶ ದೇವದುರ್ಗ, ರಾಯಚೂರು.
11 ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ) ಅಖಿಲೇಶ್ ಚಿಪ್ಪಲಿ, ಪ್ರಜಾವಾಣಿ, ಶಿವಮೊಗ್ಗ
12 ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗೆ) ಶಶಿಕಾಂತ್ ಎಸ್.ಶಂಬಳ್ಳಿ, ಪ್ರಜಾವಾಣಿ. ಬೀದರ್ ಪ್ರಕಾಶ್ ಬಾಳಕ್ಕನವರ್, ಪ್ರಜಾವಾಣಿ, ಬಾಗಲಕೋಟೆ
13 ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ) ಪಿ.ಶಾಂತಕುಮಾರ್, ಕನ್ನಡ ಪ್ರಭ, ಅರಸೀಕೆರೆ. ಹೆಚ್.ಕೆ.ರಾಘವೇಂದ್ರ, ಕೋಲಾರ ಪತ್ರಿಕೆ, ಕೋಲಾರ
14 ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ:
ನಂಜುಂಡಪ್ಪ, ದೂರದರ್ಶನ ಮತ್ತು ಆಕಾಶವಾಣಿ, ತೃಪ್ತಿ ಕುಂಬ್ರಗೋಡು, ಉದಯವಾಣಿ. ಎಚ್.ಆರ್.ಅಶ್ವಿನಿ, ವಿಜಯವಾಣಿ, ಬೆಂಗಳೂರು.
15 ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ) ಬರಗೂರು ವಿರೂಪಾಕ್ಷಪ್ಪ, ಪ್ರಜಾಪ್ರಗತಿ, ಶಿರಾ, ತುಮಕೂರು ಜಿಲ್ಲೆ ಮಾಳಿಂಗರಾಯ ಪೂಜಾರ, ಲಕ್ಷ್ಮೀಶ್ವರ, ಗದಗ
16 ನಾಡಿಗೇರ ಕೃಷ್ಣರಾಯರ ಪ್ರಶಸ್ತಿ:
ರಂಜಿತ್ ಅಶ್ವತ್, ವಿಶ್ವವಾಣಿ, ಎನ್. ರಾಘವೇಂದ್ರ, ಸಂಪಾದಕರು, ವಿನೋದ ಪತ್ರಿಕೆ
17 ಅತ್ಯುತ್ತಮ ಪುಟ ವಿನ್ಯಾಸ (ಡೆಸ್ಕ್) ಜಿ.ಎಂ.ಕೊಟ್ರೇಶ್, ಕನ್ನಡ ಪ್ರಭ ಹೆಚ್.ಕೆ.ರವೀಂದ್ರನಾಥ ಹೊನ್ನೂರು
18 ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿ:
ಎಸ್.ಶ್ಯಾಮ್ ಪ್ರಸಾದ್, ಪಿಟಿಐ, ಬೆಂಗಳೂರು
19 ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿಗೆ) ಅನುಕಾರ್ಯಪ್ಪ, ರಿಪಬ್ಲಿಕ್ ಕನ್ನಡ ಟಿವಿ, ಕೊಡಗು ಜಿಲ್ಲೆ
20 ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ (ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ)
ಪವನ್ ಕುಮಾರ್ ಹೆಚ್, ಡೆಕ್ಕನ್ ಹೆರಾಲ್ಡ್, ಉತ್ತರ ಕನ್ನಡ. ಅಕ್ಷಯ ಪಿ.ವಿ., ಸ್ಟಾರ್ ಆಫ್ ಮೈಸೂರು, ಕೊಡಗು
21 ಟಿ.ಕೆ.ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ) ಸಿದ್ದು ಆರ್.ಜಿ.ಹಳ್ಳಿ, ಹಾವೇರಿ, ಪ್ರಜಾವಾಣಿ
ಶಶಿಕಾಂತ್ ಮೆಂಡೇಗಾರ, ಬಿಜಾಪುರ.
22 ಅಪ್ಪಾಜಿಗೌಡ (ಸಿನಿಮಾ ಪ್ರಶಸ್ತಿ-ಚಲನಚಿತ್ರ ವರದಿಗೆ) ಅರುಣ್ ಕುಮಾರ, ಬೆಂಗಳೂರು. ಬಬಿತಾ ಎಸ್. ವಿಜಯ ಕರ್ನಾಟಕ
23 ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ: ಬಿ.ಸಿ.ಚನ್ನೇಗೌಡ, ಚನ್ನರಾಯಪಟ್ಟಣ ಗುರುರಾಜ್ ಕುಲಕರ್ಣಿ, ಸಂಯುಕ್ತ ಕರ್ನಾಟಕ, ಬೀದರ್
24 ಬದರೀನಾಥ್ ಹೊಂಬಾಳೆ ಪ್ರಶಸ್ತಿ:
ಕೆ.ಎನ್.ಪುಟ್ಟಲಿಂಗಯ್ಯ, ಸಂಪಾದಕರು, ಉದಯಕಾಲ. ವೆಂಕಟೇಶ್ ಬಿ. ಇಮ್ರಾಪುರ, ಹೊಸ ದಿಗಂತ, ಗದಗ
25 ಅಭಿಮಾನಿ ಪ್ರಕಾಶನ ಪ್ರಶಸ್ತಿ:
ವಿರೂಪಾಕ್ಷ ಕೆ. ಕವಟಗಿ, ವಿಜಯ ಕರ್ನಾಟಕ, ಚಿಕ್ಕೋಡಿ, ಶಿವರಾಜ್ ಕೆಂಭಾವಿ, ಉದಯವಾಣಿ, ಲಿಂಗಸೂಗೂರು
26 ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ: ಎಂ.ಎನ್.ಅಹೋಬಳಪತಿ, ವಿಜಯ ಕರ್ನಾಟಕ, ಚಿತ್ರದುರ್ಗ ಶ್ರೀಧರ್ ನಾಯಕ್, ಹಿರಿಯ ಪತ್ರಕರ್ತರು
27 ರವಿ ಬೆಳಗೆರೆ ಪ್ರಶಸ್ತಿ:
ಟಿ. ಗುರುರಾಜ್, ಸಂಪಾದಕರು, ಹಲೋ ಮೈಸೂರು ಜಗದೀಶ್ ಬೆಳ್ಳಿಯಪ್ಪ, ಟಿವಿ-9
27 ಅತ್ಯುತ್ತಮ ತನಿಖಾ ವರದಿ: ನ್ಯೂಸ್ ಫಸ್ಟ್, ಬೆಂಗಳೂರು (ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಹಗರಣ)
28 ವಿದ್ಯುನ್ಮಾನ ಟಿ.ವಿ ವಿಭಾಗ: ಹರೀಶ್ ನಾಗರಾಜ್, ವಿಸ್ತಾರ ಟಿವಿ,
ನವಿತಾ ಜೈನ್, ನ್ಯೂಸ್ 18, ರಾಚಪ್ಪ ಜೀ ಟಿವಿ, ದಶರಥ ಟಿವಿ-5, ಮನೋಜ್ ಕುಮಾರ್, ಪವರ್ ಟಿವಿ, ಮೋಹನ್ ರಾಜ್ ಕ್ಯಾಮರಾಮೆನ್, ಸುವರ್ಣ ಟಿವಿ
29 ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿ:
ನಿರ್ಮಲ ಎಲಿಗಾರ್, ಬೆಂಗಳೂರು. ಪಿ.ಬಿ.ಹರೀಶ್ ರೈ ಮಂಗಳೂರು, ಪ್ರಕಾಶ್ ಮಸ್ಕಿ, ರಾಯಚೂರು ಕೆ.ಎಸ್.ಭಾಸ್ಕರ ಶೆಟ್ಟಿ, ಬೆಂಗಳೂರು, ರಾಧಾಕೃಷ್ಣ ಭಟ್ ಭಟ್ಕಳ, ಉತ್ತರ ಕನ್ನಡ. ವೆಂಕಟೇಶ್ ಮೂರ್ತಿ, ಕಲಬುರ್ಗಿ, ಅರವಿಂದ ನಾವಡ, ಉಡುಪಿ, ರಾಜಶೇಖರ ಜೋಗಿನ್ಮನೆ, ರಮೇಶ್ ಪಾಳ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.