Snowfall: ಭಾರೀ ಹಿಮಪಾತ… ಅಟಲ್ ಸುರಂಗದ ಬಳಿ ಸಿಲುಕಿಕೊಂಡ 300 ಪ್ರವಾಸಿಗರ ರಕ್ಷಣೆ
Team Udayavani, Jan 31, 2024, 1:30 PM IST
ಶಿಮ್ಲಾ: ಭಾರೀ ಹಿಮಪಾತದಿಂದ ಹಿಮಾಚಲ ಪ್ರದೇಶದ ರೋಹ್ಟಾಂಗ್‌ನ ಅಟಲ್ ಸುರಂಗದ ದಕ್ಷಿಣ ಪೋರ್ಟಲ್ (ಎಸ್‌ಪಿ) ಬಳಿ ಸಿಲುಕಿದ್ದ 300 ಪ್ರವಾಸಿಗರನ್ನು ಹಿಮಾಚಲ ಪ್ರದೇಶ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಈ ಕುರಿತು ಹೇಳಿಕ ನೀಡಿದ ಕುಲು ಎಸ್‌ಪಿ ಸಾಕ್ಷಿ ವರ್ಮಾ, “ಎಟಿಆರ್‌ನ ಸೌತ್ ಪೋರ್ಟಲ್ ಬಳಿ ಸುಮಾರು 50 ಪ್ರವಾಸಿಗರ ವಾಹನಗಳು ಮತ್ತು ಒಂದು ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ ಸೇರಿದ ಬಸ್ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿದ್ದರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಅಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹಿಮಾಚಲದಲ್ಲಿ ಹವಾಮಾನ ಹೇಗಿರಲಿದೆ?
ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ಜನವರಿ 30 ರಿಂದ ಫೆಬ್ರವರಿ 3 ರವರೆಗೆ ಹಿಮಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುವ ಸಾಧ್ಯತೆಯಿರಲಿದ್ದು. ಅಲ್ಲದೆ, ರಾಜ್ಯದ ಕೆಳಗಿನ ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಲ್ಲಿ ಸಾಂದರ್ಭಿಕ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಲಕ್ಷಣಗಳು ಇರಲಿದೆ ಅಷ್ಟು ಮಾತ್ರವಲ್ಲದೆ ಬೆಟ್ಟದ ಮಧ್ಯಭಾಗದ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಗಳು ಇರಲಿದೆ ಎಂದಿದೆ.
ಈ ಅವಧಿಯಲ್ಲಿ ಸರಾಸರಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ, ಆದರೆ ಕೆಳಗಿನ ಬೆಟ್ಟಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯ ಮತ್ತು ಮಧ್ಯ ಮತ್ತು ಎತ್ತರದ ಬೆಟ್ಟಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಿದೆ.
ಇದನ್ನೂ ಓದಿ: Throws Mic: ಸಂಗೀತ ಕಾರ್ಯಕ್ರಮದ ವೇಳೆ ಪ್ರೇಕ್ಷಕರ ಮೇಲೆ ಮೈಕ್ ಎಸೆದ ಪಾಕ್ ಗಾಯಕ
#WATCH | Kullu, Himachal Pradesh: Police rescue 300 tourists stranded near the South Portal (SP) of Atal Tunnel in Rohtang after snowfall. (30.1)
(Source: Kullu District Police) pic.twitter.com/4Aga3jG5vd
— ANI (@ANI) January 30, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.