UV Fusion: ದಾರಿ ದೀಪ…
Team Udayavani, Feb 1, 2024, 8:15 AM IST
ಬರದ ನಾಡಿನಲ್ಲಿ ಹುಟ್ಟಿದ ದಿನೇಶನಿಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮೂರು ಹೊತ್ತು ಉಣ್ಣುವುದೇ ಕಷ್ಟ, ಇನ್ನು ಕಲಿಕೆಯ ಮಾತೆಲ್ಲಿ. ತಂದೆ ಇವನ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದಿದ್ದರು.
ದಿನೇಶ ದುಡಿಯುವುದು ಅನಿವಾರ್ಯ ಆಗಿತ್ತು. ಅದ್ರಿಂದಲೇ ತನ್ನ ಮನೆ ಸಾಗಿಸಬೇಕಾಗಿತ್ತು. ದಿನವೂ ಚಾಲಕನಾಗಿ ಬಹಳ ಪ್ರಾಮಾಣಿಕವಾಗಿ ಕಷ್ಟ ಪಡುತ್ತಿದ. ಹಬ್ಬಕ್ಕೋ ಇಲ್ಲ ಕಾರ್ಯಕ್ರಮಕ್ಕೋ ಊರಿಗೆ ಹೋಗುತ್ತಿದ್ದ. ಟ್ಯಾಕ್ಸಿ ಚಾಲಕನಾಗಿ ದುಡಿಮೆ ಮಾಡುತ್ತಿದ್ದ ದಿನೇಶನಿಗೆ ಸ್ನೇಹಿತ ವರ್ಗ ತುಂಬಾ ಕಡಿಮೆ. ಅವನದೊಂದು ಒಬ್ಬಂಟಿ ಜೀವನ. ಈ ಕಾರಣಕ್ಕೆ ದಿನ ಪೂರ್ತಿ ದುಡಿಮೆಯಲ್ಲೇ ಮುಳುಗಿ ಹೋಗುತ್ತಿದ್ದ.
ತನ್ನ ಕೆಲಸ ಮುಗಿಸಿ ಇನ್ನೇನು ತನ್ನ ರೂಮಿಗೆ ಹೋಗಬೇಕು ಎನ್ನುವಷ್ಟರಲ್ಲಿ ಮತ್ತೂಂದು ಬಾಡಿಗೆ ಬಂತು . ಒಪ್ಪುವ ಮನಸ್ಸಿಲ್ಲದಿದ್ದರು ಗ್ರಾಹಕ ಹೇಳಿದ ವಿಳಾಸ ಅವನ ರೂಮಿಗೆ ಹತ್ತಿರವಿದ್ದಿತು ಅನ್ನೋ ಕಾರಣಕ್ಕೆ ಒಪ್ಪಿ ಟ್ಯಾಕ್ಸಿ ಆನ್ ಮಾಡಿ ಹೊರಟ. ಟ್ಯಾಕ್ಸಿ ಬಾಡಿಗೆಗೆ ಹತ್ತಿದ್ದು ಉತ್ತರ ಭಾರತದ ನಡುಪ್ರಾಯದ ಹುಡುಗಿ .
ಟ್ಯಾಕ್ಸಿ ಮುಂದೆ ಹೊರಟನಂತೆ ಅವಳ ಮಾತು ಶುರುವಾಯಿತು ಬೆಂಗಳೂರ್ ಮೇ ಕೈಸ ಕೈಸ ಲೋಗ್ ಹೈ ಎಂದು. ದಿನೇಶನಿಗೆ ಹಿಂದಿ ಸ್ವಲ್ಪಾ ಬರುತಿತ್ತು. ಅವನು ನನಗೆ ಅಷ್ಟೊಂದು ಹಿಂದಿ ಬರುವುದಿಲ್ಲ ಕನ್ನಡದಲ್ಲೇ ಮಾತಾಡಿ ಎಂದು ಹೇಳಿದ. ಅವಳು ನಿಮ್ಮ ಹೆಸರು ಏನು ಎಂದು ಕೇಳಿದಳು , ನನ್ನ ಹೆಸರು ದಿನೇಶ ನಮ್ಮದು ತುಮಕೂರು ಎಂದ, ನಿಮ್ಮ ಹೆಸರು, ಊರು ಎಂದು ಕೇಳಿದ . ನನ್ನ ಹೆಸರು ಗೀತಾ ನಮ್ಮದು ರಾಜಸ್ತಾನ ಎಂದು ಹೇಳಿದಳು. ಅನಂತರ ದಿನೇಶ ತನ್ನ ಕಷ್ಟವನ್ನೆಲ್ಲ ಅವಳ ಬಳಿ ತೋಡಿಕೊಂಡ. ಇದರ ನಡುವೆ ಸಮಯ ಕಳೆದದ್ದು ಅರಿವಿಗೆ ಬರಲಿಲ್ಲ. ಅವಳು ಹೇಳಿದ ವಿಳಾಸಕ್ಕೆ ಟ್ಯಾಕ್ಸಿ ಬಂದು ತಲುಪಿತು. ಅವಳು ಟ್ಯಾಕ್ಸಿ ಇಳಿದು ಒಂದು ನಸುನಗುತ್ತಾ ಧನ್ಯವಾದ ಹೇಳಿ ಇವನ ಮೊಬೈಲ್ ನಂಬರ್ ನ್ನು ಪಡೆದು ಹೊರಟಳು.
ದಿನೇಶ ಟ್ಯಾಕ್ಸಿಯನ್ನು ತನ್ನ ರೂಮಿನ ಹತ್ತಿರ ನಿಲ್ಲಿಸಿ ಲಾಕ್ ಮಾಡಿದ. ರೂಮಿನ ಬಾಗಿಲು ತೆಗೆದು ಒಳಗಡೆ ಹೋಗಿ ಮುಖ ತೊಳೆದು ಹೋಟೆಲಿನಿಂದ ತಂದ ಊಟವನ್ನು ತಿನ್ನಲು ಶುರು ಮಾಡಿದ. ಮನದಲ್ಲಿ ಇದು ಎಷ್ಟು ರುಚಿ ಇದ್ದರೇನು ಅಮ್ಮಾ ಮಾಡುವ ಅಡಿಗೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮನಸ್ಸಿಲ್ಲದಿದ್ದರು ತಿಂದು ಮುಗಿಸಿದ.
ಇನ್ನೇನು ಮಲಗಬೇಕು ಎನ್ನುವ ಸಮಯದಲ್ಲಿ ಮೊಬೈಲ್ ಗೆ ಸಂದೇಶವೊಂದು ಬಂದಿತು. ಹಾಯ್ ಐ ಆಮ್ ಗೀತಾ ಎಂದು. ದಿನೇಶ ಹೇಳಿ ನನ್ನಿಂದ ಏನು ಆಗಬೇಕು ಎಂದು ಕೇಳಿದ. ಸ್ವಲ್ಪ ಸಮಯ ಇವರಿಬ್ಬರ ನಡುವೆ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಪ್ರತಿದಿನ ಅನೇಕ ವಿಷಯಗಳು ಸಮಸ್ಯೆಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಗಾಢವಾದ ಇವರ ಸ್ನೇಹ ಪ್ರೀತಿಯಾಗಲು ತುಂಬಾ ದಿನ ಬೇಕಾಗಾಲಿಲ್ಲ.
ದಿನೇಶನಿಗೆ ಕಾಲ್ ಮಾಡಿದ ಗೀತಾ ತನ್ನ ತಂದೆಯ ಹತ್ತಿರ ಮಾತನಾಡಿ, ನಮ್ಮ ಮದುವೆಗೆ ಒಪ್ಪಿಸೋಣ ಎಂದು ಹೇಳಿದಳು . ಆಗ ದಿನೇಶ ಗೀತಾಳಿಗೆ ನಾವಿನ್ನೂ ಜೀವನದಲ್ಲಿ ನೆಲೆ ಕಂಡುಕೊಳ್ಳಲು ತುಂಬಾ ಸಮಯ ಬೇಕು, ಆತುರ ಬೇಡ ಎಂದು ಹೇಳಿದ. ಅದಕ್ಕೆ ಗೀತಾ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದೇವೆ, ಸಾಕಷ್ಟು ದುಡಿಯುತ್ತಿದ್ದೇವೆ, ಸಮಸ್ಯೆ ಏನು ಆಗುವುದಿಲ್ಲ, ಯೋಚನೆ ಮಾಡಬೇಡ ಎಂದು ಹೇಳುತ್ತಾಳೆ. ನಿನಗೆ ನಾಳೆ ಒಂದು ಸರ್ಪ್ರೈಸ್ ಇದೇ ಎಂದು ಹೇಳಿ ತನ್ನ ಕಾಲ್ ಕಟ್ ಮಾಡುತ್ತಾಳೆ. ದಿನೇಶನಿಗೆ ಏನು ಅಂತಹ ಸರ್ಪ್ರೈಸ್ ಎಂದು ತನ್ನಲ್ಲೇ ಯೋಚನೆ ಮಾಡುತ್ತಲೇ ನಿದ್ರೆಗೆ ಜಾರುತ್ತಾನೆ.
ಗೀತಾ ಸುಮಾರು ಒಂಬತ್ತು ಗಂಟೆಗೆ ಕಾಲ್ ಮಾಡಿ ದಿನೇಶನಿಗೆ ಇವತ್ತು ನಮ್ಮ ಪಪ್ಪ ಬರ್ತಾರೆ ಮಾತಾಡೋದು ಇದೆ ಅಡ್ರಸ್ ಕಳಿಸ್ತಿನಿ ಬಾ ಎಂದಳು.
ದಿನೇಶ ರೆಡಿಯಾಗಿ ತನ್ನ ಟ್ಯಾಕ್ಸಿ ಆನ್ ಮಾಡಿ ಗೀತಾ ಹೇಳಿದ ವಿಳಾಸಕ್ಕೆ ಹೊರಟ. ಒಳಗೆ ಹೋದ ದಿನೇಶನಿಗೆ ಮೊದಲು ಕಂಡಿದ್ದು ಗೀತಾ ಸ್ವಲ್ಪ ಪಕ್ಕದಲ್ಲಿ ಸುಮಾರು ಐವತ್ತರ ಪ್ರಾಯದ ವ್ಯಕ್ತಿಯೊಬ್ಬರು ಕೂತಿದ್ದರು. ಅವರು ನೋಡಲು ದೊಡ್ಡ ಉದ್ಯಮಿಯಂತೆ ಕಾಣುತ್ತಿದ್ದರು. ದಿನೇಶ ಅವರ ಬಳಿ ಬಂದು ಕುಳಿತ. ಗೀತಾ ಇವರು ನಮ್ಮ ಪಪ್ಪ ಮುಂಬಯಿಯಲ್ಲಿ ದೊಡ್ಡ ಕಂಪನಿಯನ್ನು ಸ್ಥಾಪಿಸಿದ್ದಾರೆ ಎಂದಳು. ದಿನೇಶನಿಗೆ ಇದನ್ನು ಕೇಳಿ ತಲೆ ತಿರುಗಿದಂತೆ ಆಯಿತು ಯಾಕೆಂದರೆ ಗೀತಾ ಇದೆಲ್ಲ ಹೇಳಿರಲಿಲ್ಲ. ದಿನೇಶ ಗೀತಾ ಕೂಡ ಮಧ್ಯಮ ವರ್ಗದ ಹುಡುಗಿ ಎಂದುಕೊಂಡಿದ್ದ.
ಗೀತಾಳ ತಂದೆ ನನಗೆ ಇರುವುದು ಒಬ್ಬಳೇ ಮಗಳು ಅವಳ ಇಷ್ಟಕ್ಕೆ ನಾನು ಅಡ್ಡ ಬರುವುದಿಲ್ಲ ಎಂದು ದಿನೇಶನಿಗೆ ಹೇಳಿದರು. ಆದರೆ ನನ್ನದೊಂದು ಕಂಡೀಷನ್ ಇದೆ, ನೀನು ನನ್ನ ವ್ಯವಹಾರವನ್ನೆಲ್ಲಾ ನೋಡಿಕೊಳ್ಳಬೇಕು ಎಂದರು. ದಿನೇಶ ಏನು ಮಾತನಾಡದೆ ಮಂಕು ಬಡಿದವನಂತೆ ತಲೆಯಾಡಿಸಿದ. ಗೀತಾಳ ಮೊಗದಲ್ಲಿ ಮಂದಹಾಸವೊಂದು ಮೂಡಿತ್ತು. ದಿನೇಶನು ಇಷ್ಟು ದಿನ ಪಟ್ಟ ಕಷ್ಟಕ್ಕೆ ತರ್ಪಣ ಬಿಡುವ ದಿನ ಬಂದಿತ್ತು. ಸಂತೋಷದಿಂದ ಸ್ವಲ್ಪ ಸಮಯ ಮೂವರು ಮಾತನಾಡಿ ಮನೆಯ ಕಡೆ ಹೊರಟರು. ದಿನೇಶನ ಅದೃಷ್ಟ ಕೇಳದೆಯೇ ತಾನಾಗಿ ಗೀತಾಳ ರೂಪದಲ್ಲಿ ಬಂದಿತ್ತು.
-ಲೋಕೇಶ್
ಶಿರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.