ಇನ್ನು ಆಯಾ ಜಿಲ್ಲೆಗಳಲ್ಲೇ KFD ಪರೀಕ್ಷೆ
Team Udayavani, Feb 1, 2024, 1:27 AM IST
ಶಿವಮೊಗ್ಗ: ಮಂಗನಕಾಯಿಲೆ (ಕೆಎಫ್‌ಡಿ) ವಿಚಾರದಲ್ಲಿ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ಮುಂದೆ ರೋಗಿಗಳ ಮಾದರಿ ಪರೀಕ್ಷೆಗೆ ಶಿವಮೊಗ್ಗ ವಿಡಿಎಲ್ ಲ್ಯಾಬ್ ಅವಲಂಬಿಸಬೇಕಾಗಿಲ್ಲ.
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್‌ಡಿ)ಮನುಷ್ಯರ ಪಾಲಿಗೆ ನರಕವಾಗಿದೆ. ಈವರೆಗೆ ಗಂಭೀರವಾದ ಪ್ರಯತ್ನಗಳು ನಡೆಯದ ಪರಿಣಾಮ ಆರು ದಶಕಗಳಾದರೂ ಈ ಕಾಯಿಲೆ ಜನರ ಜೀವ ಹಿಂಡುತ್ತಿದೆ. ಆರೋಗ್ಯ ಇಲಾಖೆ ದಶಕಗಳ ಹಿಂದೆ ಶಿವಮೊಗ್ಗದಲ್ಲಿ ವಿಡಿಎಲ್ ಲ್ಯಾಬ್ ಸ್ಥಾಪಿಸುವ ಮೂಲಕ ಕೆಎಫ್‌ಡಿ ಪೀಡಿತ ಪ್ರದೇಶದ ಜನರ ರಕ್ತ ಮಾದರಿ ಪರೀಕ್ಷೆಯನ್ನು ಆರಂಭಿಸಿತು.
ಈವರೆಗೂ ಕೆಎಫ್‌ಡಿ ಪೀಡಿತ ಪ್ರದೇಶಗಳಲ್ಲಿ ಯಾರಿಗೆ ಜ್ವರ ಬಂದರೂ ಇಲ್ಲಿಗೆ ಸ್ಯಾಂಪಲ್ ಕಳುಹಿಸಲಾಗುತ್ತಿದೆ. ಮಾದರಿ ಸಂಗ್ರಹಿಸಿ ಕಳುಹಿಸಿದ ಒಂದೆರಡು ದಿನದಲ್ಲಿ ಫಲಿತಾಂಶ ಸಿಗುತ್ತಿದೆ. ಈ ಆಧಾರದಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತಿದೆ. ಶಿವಮೊಗ್ಗಕ್ಕೆ ಮಾದರಿ ಕಳುಹಿಸುವುದರಿಂದ ಆರ್ಥಿಕವಾಗಿ ಹೊರೆ-ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ ಎಂದು ಭಾವನೆ ಇದೆ. ಇದನ್ನು ತಪ್ಪಿಸುವ ಸಲುವಾಗಿ ಆರೋಗ್ಯ ಇಲಾಖೆ ಆಯಾ ಜಿಲ್ಲೆಗಳಲ್ಲೇ ಪರೀಕ್ಷೆ ನಡೆಸಲು ಬೇಕಾದ ಲ್ಯಾಬ್ ಲಭ್ಯತೆ, ಇತರ ವಿಷಯಗಳ ಕುರಿತು ಡಿಎಚ್‌ಒಗಳಿಗೆ ಸಂದೇಶ ಕಳುಹಿಸಿದೆ.
ಕೋವಿಡ್ ಸಂದರ್ಭ ಎಲ್ಲ ಜಿಲ್ಲೆಗಳಲ್ಲಿ ಆರ್‌ಟಿಸಿಪಿಆರ್ ಲ್ಯಾಬ್‌ಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳು ಕಾರ್ಯಾಚರಿಸುತ್ತಿವೆ. ಈ ಲ್ಯಾಬ್‌ಗಳಲ್ಲೇ ಕೆಎಫ್‌ಡಿ ಟೆಸ್ಟ್ ನಡೆಸಬಹುದು. ಟೆಸ್ಟ್ ನಡೆಸುವ ಸಿಬಂದಿಗೆ ಬೇಕಾದ ತರಬೇತಿ, ಸಹಕಾರವನ್ನು ಎನ್‌ಐವಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ) ಪುಣೆಯಿಂದ ಪಡೆಯಲು ಕೂಡ ಸೂಚಿಸಲಾಗಿದೆ. ಕೆಎಫ್‌ಡಿ ಅವಧಿ ಜೂನ್‌ವರೆಗೂ ಇರಲಿದ್ದು, ಅಷ್ಟರೊಳಗೆ ಸ್ಥಳೀಯವಾಗಿ ಪರೀಕ್ಷೆ ಆರಂಭವಾಗುವ ಸಾಧ್ಯತೆ ಇದೆ.
ಕೆಎಫ್‌ಡಿ ಹೆಚ್ಚಳ
ಜ.30ರ ವರೆಗೆ ಉತ್ತರಕನ್ನಡ 19, ಶಿವಮೊಗ್ಗ 12, ಚಿಕ್ಕಮಗಳೂರು ಇಬ್ಬರಿಗೆ ಕೆಎಫ್ಡಿ ತಗಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಡಿಸೆಂಬರ್‌ನಲ್ಲಿ ಎರಡು ಪ್ರಕರಣ ಬಿಟ್ಟರೆ ಯಾವುದೂ ವರದಿಯಾಗಿರಲಿಲ್ಲ. ಜನವರಿಯಲ್ಲೇ ಅಬ್ಬರಿಸುತ್ತಿರುವ ಕೆಎಫ್‌ಡಿ ಮಾರ್ಚ್-ಎಪ್ರಿಲ್‌ನಲ್ಲಿ ರುದ್ರನರ್ತನ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟರೊಳಗೆ ಲ್ಯಾಬ್ ಆರಂಭವಾದರೆ ಜನರಿಗೆ ವೇಗವಾಗಿ ಫಲಿತಾಂಶ ಕೊಡುವ ಜತೆಗೆ ಸೂಕ್ತ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.