TTD : ತಿರುಪತಿ ದೇಗುಲದಲ್ಲಿ ಇನ್ನು ಮಂಗಳಸೂತ್ರ ಮಾರಾಟ!
ಟಿಟಿಡಿಯಿಂದ ಹೊಸ ಯೋಜನೆ- ಸನಾತನ ಹಿಂದೂ ಧರ್ಮದ ಪ್ರಚಾರವೇ ಉದ್ದೇಶ
Team Udayavani, Feb 1, 2024, 2:08 AM IST
ತಿರುಪತಿ: ಮದುವೆಗೆ ಮಂಗಳಸೂತ್ರ ಬೇಕಾದರೆ ನೇರ ತಿರುಪತಿ ಶ್ರೀ ವೆಂಕಟೇಶ್ವರನ ಸನ್ನಿಧಾನದಿಂದಲೇ ಖರೀದಿಗೆ ಅವಕಾಶ ಸಿಗಲಿದೆ. ದೇಗುಲದ ಆಡಳಿತ ಮಂಡಳಿ, ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ) ಈ ಹೊಸ ಯೋಚನೆಯನ್ನು ಹೊಂದಿದೆ. ಈ ಮೂಲಕ ಸನಾತನ ಹಿಂದೂ ಧರ್ಮದ ಪ್ರಚಾರಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಟ್ರಸ್ಟ್ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಹೇಳಿದ್ದಾರೆ.
ತಿರುಪತಿ ವೆಂಕಟೇಶ್ವರ ಸನ್ನಿಧಿಯಿಂದಲೇ ಮಂಗಳಸೂತ್ರ ಖರೀದಿಸಿ ಸಂತೃಪ್ತ ವೈವಾಹಿಕ ಜೀವನ ಹೊಂದುವ ನಿಟ್ಟಿನಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗಿದೆ. 4 ರಿಂದ 5 ವಿನ್ಯಾಸಗಳಲ್ಲಿ ಅವುಗಳನ್ನು ತಯಾರಿಸಲಾಗುತ್ತದೆ. ಅದಕ್ಕಾಗಿ 5 ರಿಂದ 10 ಗ್ರಾಂ ಚಿನ್ನವನ್ನೂ ಬಳಕೆ ಮಾಡಲಾಗುತ್ತದೆ ಎಂದು ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ಬಜೆಟ್ಗೆ ಸಮ್ಮತಿ: ಇದರ ಜತೆಗೆ ಟಿಟಿಡಿಯ ವಾರ್ಷಿಕ ಬಜೆಟ್ಗೆ ಕೂಡ ಆಡಳಿತ ಮಂಡಳಿ ಸಮ್ಮತಿ ನೀಡಿದ್ದು, 2024-25ನೇ ಸಾಲಿನಲ್ಲಿ ಹುಂಡಿ ಕಾಣಿಕೆಗಳ ಮೂಲಕ 1611 ಕೋಟಿ ರೂ. ಸಂಗ್ರಹ ಆಗಲಿದೆ ಎಂದು ನಿರೀಕ್ಷಿಸಿದೆ. ಶ್ರೀವಾರಿ ಹುಂಡಿಯಲ್ಲಿ ಪ್ರತಿ ದಿನ ಸರಾಸರಿ ನಗದು ಮೂಲಕ 4.5 ಕೋಟಿ ರೂ.ಗಳಿಂದ 5 ಕೋಟಿ ರೂ. ವರೆಗೆ ಸಂಗ್ರಹದ ನಿರೀಕ್ಷೆಯನ್ನು ಆಡಳಿತ ಮಂಡಳಿ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.