Budget ಕರುನಾಡ ರೈಲ್ವೇ ಯೋಜನೆಗಳಿಗೆ ಭರ್ಜರಿ ಅನುದಾನ

9 ಹೊಸ ಮಾರ್ಗ, 7 ದ್ವಿಮಾರ್ಗ ಸೇರಿ ವಿವಿಧ ಕಾಮಗಾರಿಗಳಿಗೆ 7,524 ಕೋಟಿ ರೂ. ಮೀಸಲು

Team Udayavani, Feb 2, 2024, 12:07 AM IST

train-track

ಹುಬ್ಬಳ್ಳಿ/ ಬೆಂಗಳೂರು: ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯಕ್ಕೆ ಒಟ್ಟಾರೆ 7,524 ಕೋಟಿ ರೂ. ಅನುದಾನ ನಿಗದಿಪ ಡಿಸಿದ್ದು, ಈ ಪೈಕಿ 7,329 ಕೋಟಿ ರೂ.ಗಳನ್ನು ನೈಋತ್ಯ ರೈಲ್ವೆ ವಲಯಕ್ಕೆ ನೀಡಲಾಗಿದೆ.
ಈ ಅನುದಾನದಲ್ಲಿ 2,286 ಕೋಟಿ ರೂ.ಗಳನ್ನು ಹೊಸ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ರೈಲು ಮಾರ್ಗಗಳಿಗೆ, 1,531 ಕೋಟಿ ರೂ.ಗಳನ್ನು ರೈಲು ಜೋಡಿ ಮಾರ್ಗ ಕಾಮಗಾರಿಗೆ ಹಾಗೂ 987 ಕೋಟಿ ರೂ.ಗಳನ್ನು ಪ್ರಯಾಣಿಕರಿಗೆ ವಿವಿಧ ಸೌಲಭ್ಯ-  ಸೇವೆ ಒದಗಿಸಲು ಹಂಚಿಕೆ ಮಾಡಲಾಗಿದೆ. ಇದರ ಹೊರತಾಗಿ ಬಜೆಟ್‌ನಲ್ಲಿ ಯಾವುದೇ ಹೊಸ ರೈಲನ್ನು ಪ್ರಕಟಿಸಿಲ್ಲ. ಈಗಾಗಲೇ ಘೋಷಣೆಯಾ ಗಿರುವ ಯೋಜ ನೆ  ಗಳನ್ನು ಪೂರ್ಣಗೊಳಿಸುವುದು ಮತ್ತು ಯೋಜನೆಗಳನ್ನು ತ್ವರಿತಗೊಳಿಸುವುದು ಆಗಿದೆ.

ನೈಋತ್ಯ ರೈಲ್ವೆ ವಲಯದಡಿ ಹೊಸ ಹಾಗೂ ಪ್ರಗತಿಯ ಲ್ಲಿರುವ ರೈಲು ಮಾರ್ಗ ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾ ಗಿದೆ. ಗದಗ(ತಳಕಲ್ಲ)ವಾಡಿ ರೈಲ್ವೆ ಮಾರ್ಗ ಯೊಜನೆಗೆ 380 ಕೋಟಿ ರೂ. ನಿಗದಿಪಡಿಸಲಾಗಿದೆ. ಗಿಣಗೇರಾ- ರಾಯ ಚೂರು- 300 ಕೋಟಿ ರೂ., ತುಮಕೂರು- ದಾವಣಗೆರೆ(ವಯಾ ಚಿತ್ರದುರ್ಗ) 300ಕೋಟಿ ರೂ., ತುಮಕೂರು- ರಾಯದುರ್ಗ(ವಯಾ ಕಲ್ಯಾಣದುರ್ಗ) 250 ಕೋಟಿ ರೂ., ಬಾಗಲಕೋಟೆ -ಕುಡಚಿ 410 ಕೋಟಿ ರೂ., ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು 200 ಕೋಟಿ ರೂ., ಬೆಳಗಾವಿ- ಧಾರವಾಡ (ವಯಾ ಕಿತ್ತೂರು)- 50 ಕೋಟಿ ರೂ., ಕಡೂರು – ಚಿಕ್ಕಮಗಳೂರು-ಹಾಸನ 160 ಕೋಟಿ ರೂ., ಮಂಗಳೂರು-ಪಾಲಸಮುದ್ರಂ-20 ಕೋಟಿ ರೂ., ಹಾಸನ-ಬೇಲೂರು-5 ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿದೆ. ಇದಲ್ಲದೆ ನೆರೆಯ ರಾಜ್ಯದ ಮರಿಕುಪ್ಪಂ- ಕುಪ್ಪಂ ಯೋಜನೆಗೆ 170 ಕೋಟಿ ರೂ.ಗಳನ್ನು ನೀಡಲಾಗಿದೆ.
ಜೋಡು ರೈಲು ಮಾರ್ಗ ನಿರ್ಮಾಣ ಯೋಜನೆಯಡಿ ಗದಗ-ಹೋಟಗಿ 197 ಕೋಟಿ ರೂ., ಬೈಯಪ್ಪನಹಳ್ಳಿ- ಹೊಸೂರು 150 ಕೋಟಿ ರೂ., ಯಶವಂತ ಪುರ- ಚನ್ನಸಂದ್ರ 150 ಕೋಟಿ ರೂ., ಹುಬ್ಬಳ್ಳಿ- ಚಿಕ್ಕಜಾಜೂರು 94 ಕೋಟಿ ರೂ., ಬೆಂಗ ಳೂರು ಕಂಟೋನ್ಮೆಂಟ್‌-ವೈಟ್‌ಫೀಲ್ಡ್‌ ಕ್ವಾರ್ಡು  ಪ್ಲಿಂಗ್‌ 260 ಕೋಟಿ ರೂ., ಹೊಸಪೇಟೆ-ತಿನೈಘಟ್‌-ವಾಸ್ಕೋ ಡ ಗಾಮಾ 400 ಕೋಟಿ ರೂ.ಗಳನ್ನು ನಿಗದಿಪಡಿ ಸಲಾಗಿದೆ. ಇದಲ್ಲದೆ, ನೈಋತ್ಯ ರೈಲ್ವೆ ವಲಯ ವ್ಯಾಪ್ತಿಗೆ ಬರುವ ನೆರೆಯ ರಾಜ್ಯಗಳ ರೈಲ್ವೆ ಮಾರ್ಗಗಳಾದ ಪೆನುಕೊಂಡ- ಧರ್ಮಾವರಂ 180.4 ಕೋಟಿ ರೂ., ಲೋಂಡಾ-ಮೀರಜ್‌-200 ಕೋಟಿ ರೂ., ಹೊಸೂರು- ಒಮಲೂರು-100.1 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

ರಾಜ್ಯದ ಮೂಲಕ ಹಾದು ಹೋಗುವ ಕಾರಿಡಾರ್‌

ಕೇಂದ್ರ ಸರ್ಕಾರ ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್‌ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಇದರಲ್ಲಿ ಒಂದು ರೈಲ್ವೆ ಆರ್ಥಿಕ ಕಾರಿಡಾರ್‌ ಕರ್ನಾಟದ ಮೂಲಕ ಹಾದು ಹೋಗಲಿದೆ. ಇದು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸಮಯ, ಹಣ ಉಳಿತಾಯಕ್ಕೆ ಸಹಾಯಕವಾಗಲಿದೆ. ಸಂಚಾರ ದಟ್ಟಣೆ ಇರುವ ಕಾರಿಡಾರ್‌ಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದರಿಂದ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಇಂಧನ, ಖನಿಜ, ಸಿಮೆಂಟ್‌ ಕಾರಿಡಾರ್‌ಗಳಾಗಿವೆ. ರೈಲ್ವೆ ಪ್ರಯಾಣಿಕರ ಸುರಕ್ಷತೆ ಹೆಚ್ಚಳ ಮತ್ತು ರೈಲುಗಳ ಸಂಚಾರ ವೇಗ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಮಾರ್ಗದ ಕೆಳ, ಮೇಲ್ಸೇ ತುವೆಗಳ ನಿರ್ಮಾಣ ಹಾಗೂ ಸಂಬಂಧಿತ ಕಾಮಗಾರಿಗಳಿಗೆ 341 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ರೈಲು ಸಂಚಾರದ ವಿವಿಧ ಸೌಲಭ್ಯಗಳಿಗಾಗಿ 126.11 ಕೋಟಿ ರೂ.ಗಳನ್ನು ನಿಗದಿಪಡಿಸ ಲಾಗಿದೆ. ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರೈಲ್ವೆಯ ಹೊಸ ಮಾರ್ಗಗಳ ಸಮೀಕ್ಷೆ, ಜೋಡು ಮಾರ್ಗ ಯೋಜನೆಗಳಿಗೆ 22 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

40 ಸಾವಿರ ಬೋಗಿಗಳು ವಂದೇ ಭಾರತ್‌ಗೆ ಶೀಘ್ರ ಪರಿವರ್ತನೆ
ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಸಾಮಾನ್ಯ ರೈಲ್ವೆ ಬೋಗಿಗಳೂ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡ “ವಂದೇ ಭಾರತ್‌’ ರೈಲುಗಳಾಗಿ ಪರಿವರ್ತನೆ ಆಗಲಿವೆ. ಅಷ್ಟೇ ಅಲ್ಲ, ಕೆಲವೇ ವರ್ಗ ಗಳಿಗೆ ಸೀಮಿತವಾ ಗಿರುವ ಅವುಗಳ ಸೇವೆ ಸಾಮಾನ್ಯ ವರ್ಗಗಳಿಗೂ ಕೈಗೆಟಕು ವಂತಾಗಲಿದೆ.
ಹೌದು, ದೇಶದ 40 ಸಾವಿರ ಸಾಮಾನ್ಯ ರೈಲ್ವೆ ಬೋಗಿಗಳನ್ನು ಈಗ ಕೇಂದ್ರ ಸರ್ಕಾರ ಹೈಟೆಕ್‌ ಸೌಲಭ್ಯವುಳ್ಳ “ವಂದೇ ಭಾರತ್‌’ ರೈಲು ಬೋಗಿಗಳಾಗಿ ಪರಿವರ್ತಿಸಲು ಮುಂದಾಗಿದೆ. ಇದರ ಜತೆಗೆ ಮೂರು ಆರ್ಥಿಕ ರೈಲ್ವೆ ಕಾರಿಡಾರ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದರಿಂದ ರೈಲ್ವೆ ಸಂಚಾರದಟ್ಟಣೆಗೂ ಮುಕ್ತಿ ಸಿಗಲಿದೆ. ಇದನ್ನು ಸ್ವತಃ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಈ ಭಾರಿ ಸಂಖ್ಯೆಯಲ್ಲಿ ಬೋಗಿಗಳ ಪರಿವರ್ತನೆಯಿಂದ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವುದರ ಜತೆಗೆ ಸಾರ್ವಜನಿಕರಿಗೆ ಪ್ರಯಾಣದ ಅವಧಿ ಕೂಡ ತಗ್ಗಲಿದೆ. ಅಲ್ಲದೆ, ವಿಶೇಷವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಪೂರಕವಾಗಲಿದೆ. ಇನ್ನು ಸಾಮಾನ್ಯ ಬೋಗಿಗಳನ್ನು “ವಂದೇ ಭಾರತ್‌’ಗೆ ಪರಿವರ್ತನೆ ಮಾಡುವುದರಿಂದ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಿಗೆ ನೆರವಾಗಲಿದೆ.

ಮೆಟ್ರೊ, ನಮೋ ಭಾರತ್‌ ರೈಲುಗಳ ಸೇವೆ ವಿಸ್ತರಣೆ

ನಗರ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರಕಾರ, ದಟ್ಟಣೆರಹಿತ ಸಂಚಾರ ಸೌಲಭ್ಯಕ್ಕಾಗಿ ಮೆಟ್ರೊ ಮತ್ತು ನಮೋ ಭಾರತ್‌ ರೈಲುಗಳ ಸೇವೆಯನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುವುದಾಗಿ ಪ್ರಕಟಿಸಿದೆ.

ಮೆಟ್ರೊ ಮತ್ತು ನಮೋ ಭಾರತ್‌ ನಗರ ಸಂಚಾರ ವ್ಯವಸ್ಥೆಯ ವೇಗವರ್ಧಕಗಳು ಎಂದು ವಿಶ್ಲೇಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್‌, ಇವುಗಳ ಸೇವೆ ವಿಸ್ತರಣೆ ಮೂಲಕ ಮುಂಬರುವ ದಿನಗಳಲ್ಲಿ ಸಂಚಾರ ಆಧಾರಿತ ಅಭಿವೃದ್ಧಿ (ಟಿಒಡಿ) ಗೆ ಆದ್ಯತೆ ನೀಡಲು ಉದ್ದೇ ಶಿ ಸಲಾಗಿದೆ ಎಂದು ಹೇಳಿದರು.

ದೇಶವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದ್ದು, 2023ರ ನವೆಂಬರ್‌ ಅಂತ್ಯದ ವರೆಗೆ 895 ಕಿ.ಮೀ. ಇದೆ. ಮುಂದಿನ 2-3 ವರ್ಷಗಳಲ್ಲಿ ಅಮೆರಿಕವನ್ನು ಹಿಂದಿಕ್ಕುವ ಮೂಲಕ ಎರಡನೇ ಸ್ಥಾನಕ್ಕೆ ಬರುವ ಗುರಿ ಹೊಂದಲಾಗಿದೆ. ಈ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹದೀìಪ್‌ಸಿಂಗ್‌ ಪುರಿ ಕೂಡ ಅಭಿಪ್ರಾಯ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರ ಜತೆಗೆ “ನಮೋ ಭಾರತ್‌’ ಎಂದೇ ಕರೆಯಲಾಗುವ ಪ್ರಾದೇ ಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್‌)ಯು ಮೆಟ್ರೋ ಮತ್ತು ಭಾರತೀಯ ರೈಲ್ವೆಗಳಿಗಿಂತ ವೇಗವಾಗಿ ಸಂಚರಿಸುವ ಸಾರಿಗೆ ವ್ಯವಸ್ಥೆಗಳಾಗಿವೆ. ಈ ರೈಲುಗಳ ವಿನ್ಯಾಸದ ಪ್ರಕಾರ ವೇಗ ಗಂಟೆಗೆ 180 ಕಿ.ಮೀ. ಇದ್ದು, ಕಾರ್ಯಾಚರಣೆಯ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಆಗಿದೆ. ಅಂತರ ನಗರಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಪ್ರತಿ 15 ನಿಮಿಷಕ್ಕೊಂದು ರೈಲು ಸೇವೆ ಕಲ್ಪಿಸುವ ಉದ್ದೇಶ ಇದೆ.

ಟಾಪ್ ನ್ಯೂಸ್

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ

Budget  2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

MONEY GONI

Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.