Under 19 ವಿಶ್ವಕಪ್:ಭಾರತಕ್ಕೆ ಇಂದು ನೇಪಾಲ ಸವಾಲು
Team Udayavani, Feb 2, 2024, 6:13 AM IST
ಬ್ಲೋಮ್ಫಾಂಟೇನ್: ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಕೂಟದ ಬಣ ಒಂದರ ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ ಭಾರತವು ಶುಕ್ರವಾರ ನೇಪಾಲ ತಂಡವನ್ನು ಎದುರಿಸಲಿದೆ. ಭರ್ಜರಿ ಗೆಲುವಿ ನೊಂದಿಗೆ ಸೆಮಿಫೈನಲ್ ಹಂತಕ್ಕೇರಲು ಯೋಚಿಸುತ್ತಿದೆ.
ಸೂಪರ್ ಸಿಕ್ಸ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿ ಆರಂಕ ಪಡೆದಿರುವ ಭಾರತ ಬಣ ಒಂದರಲ್ಲಿ ಅಗ್ರಸ್ಥಾನ ಪಡೆದಿದೆ. ಪಾಕಿಸ್ಥಾನ ಕೂಡ ಆರಂಕ ಪಡೆದಿದ್ದರೂ ಉತ್ತಮ ರನ್ಧಾರಣೆಯ ಆಧಾರದಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಶನಿವಾರ ಪಾಕಿಸ್ಥಾನವು ತನ್ನ ಅಂತಿಮ ಪಂದ್ಯದಲ್ಲಿ ನಾಲ್ಕಂಕ ಹೊಂದಿರುವ ಬಾಂಗ್ಲಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ಬಾಂಗ್ಲಾ ಗೆದ್ದರೂ ಉತ್ತಮ ರನ್ಧಾರಣೆಯ ಆಧಾರದಲ್ಲಿ ಪಾಕಿಸ್ಥಾನ ಸೆಮಿಫೈನಲ್ ತಲುಪಲಿದೆ.
ಪ್ರತಿ ಬಣದ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಫೆ. 6 ಮತ್ತು 8ರಂದು ಸೆಮಿಫೈನಲ್ಸ್ ನಡೆಯಲಿದ್ದರೆ ಫೆ. 11ರಂದು ಫೈನಲ್ ಪಂದ್ಯ ಜರಗಲಿದೆ. ಲೀಗ್ ಹಾಗೂ ಸೂಪರ್ ಸಿಕ್ಸ್ ಹಂತದಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ ಮುಂಬಯಿಯ ಸಫìರಾಜ್ ಅವರ ಸಹೋಹರ ಮುಶೀರ್ ಖಾನ್ ಎರಡು ಶತಕ ಸಹಿತ ಸರಾಸರಿ 81ರಂತೆ 325 ರನ್ ಗಳಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.