Udupi: ಬೆಳ್ಳಂಪಳ್ಳಿಯಲ್ಲಿ ಶೂನ್ಯ ಶಿಕ್ಷಕರ ಶಾಲೆ! -ಖಾಯಂ ಶಿಕ್ಷಕರಿಗೆ ಆಗ್ರಹಿಸಿ ಪ್ರತಿಭಟನೆ
Team Udayavani, Feb 2, 2024, 1:00 AM IST
ಉಡುಪಿ: ಶೂನ್ಯ ಶಿಕ್ಷಕರ ಶಾಲೆಯಾಗಿರುವ ಬೆಳ್ಳಂಪಳ್ಳಿಯ ಜೈ ಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಗುರುವಾರ ವಿದ್ಯಾರ್ಥಿಗಳು ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಡಿಡಿಪಿಐ ಬರಬೇಕು ಎಂದು ಪ್ರತಿಭಟನೆ ನಿರತರು ಪಟ್ಟು ಹಿಡಿದರು. 1947ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಾಲೆ ಕಳೆದ ಹಲವು ವರ್ಷಗಳಿಂದ ಖಾಯಂ ಶಿಕ್ಷಕರನ್ನೇ ಕಂಡಿಲ್ಲ. ಶಾಲೆಗೆ ಖಾಯಂ ಶಿಕ್ಷಕರನ್ನು ನೀಡುವಂತೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆರು ವರ್ಷಗಳಿಂದ ವಾರಕ್ಕೆ ಒಬ್ಬರು ಶಿಕ್ಷಕರು ಮಾತ್ರ ಈ ಶಾಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಡಕುಂಟಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದರೂ ಖಾಯಂ ಶಿಕ್ಷಕರ ನಿಯೋಜನೆ ಗೊಂಡಿಲ್ಲ ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ತಿಳಿಸಿದ್ದಾರೆ.
55 ವಿದ್ಯಾರ್ಥಿಗಳು
ಈ ಶಾಲೆಯಲ್ಲಿ ಒಟ್ಟು 55 ಮಕ್ಕಳು ವ್ಯಾಸಂಗ ಮಾಡಿಕೊಂಡಿದ್ದಾರೆ. ಶಾಲೆಯ ಬೀಗವು ಸಂಚಾಲಕರ ಬಳಿ ಇದ್ದು, ಅವರಿಗೆ ಅನಾರೋಗ್ಯವಾದ ಕಾರಣ ಮಕ್ಕಳು ಶಾಲೆಗೆ ಬಂದರೂ ಮಕ್ಕಳಿಗೆ ಬಿಸಿ ಊಟದ ವ್ಯವಸ್ಥೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಅಲ್ಲದೆ ಈ ಶಾಲೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳಿಗೆ ಸಿಇಟಿ ಅರ್ಜಿ ಸಲ್ಲಿಸಲು ಕೆಲವೇ ದಿನ ಮಾತ್ರ ಉಳಿದಿರುವುದರಿಂದ ಸುಮಾರು 10 ವಿದ್ಯಾರ್ಥಿಗಳಿಗೆ ದೃಢೀಕರಣ ಪತ್ರದ ಪಡೆಯುವುದು ಕಷ್ಟವಾಗುತ್ತಿದೆ. ಇದಕ್ಕಾಗಿಯೇ ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ವಿದ್ಯಾರ್ಥಿಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶೀಘ್ರದಲ್ಲಿ ಶಾಲೆಗೆ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Trasi: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Udupi: ಗ್ಯಾರಂಟಿ ಯೋಜನೆಗಳ ಯಾವುದೇ ಕಾರಣಕ್ಕೂ ರದ್ದುಗೊಳಿಸಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Kambala: ಹಲವು ವರ್ಷಗಳ ಬಳಿಕ ಪುನರಾರಂಭ; ಮಿಯ್ಯಾರಿನಲ್ಲಿ ಕಂಬಳ ಕೋಣಗಳಿಗೆ ತರಬೇತಿ
Siddapura: ಹಳ್ಳಿಹೊಳೆ ಜಾಗಕ್ಕೆ ಅಕ್ರಮವಾಗಿ ಪ್ರವೇಶಿ ಬೆದರಿಕೆ; ಕಳವು
MUST WATCH
ಹೊಸ ಸೇರ್ಪಡೆ
Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ
Itanagar: ಚೀನ ಜತೆ ದೀರ್ಘ ಕಾಲ ಶಾಂತಿ ಸ್ಥಾಪನೆಗೆ ಪ್ರಯತ್ನ; ರಕ್ಷಣ ಸಚಿವ ರಾಜನಾಥ್‌ಸಿಂಗ್
New Delhi: ದೀಪಾವಳಿ ಹಬ್ಬದ ವೇಳೆ ಅಮೆರಿಕ ರಾಯಭಾರಿ ಡ್ಯಾನ್ಸ್!
Kannada Rajyotsava: ನಿಂತ ನೆಲವೇ ಕರ್ನಾಟಕ!
Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.