Politics: ಸಿನಿಮಾರಂಗದಿಂದ ರಾಜಕೀಯದತ್ತ ಮುಖಮಾಡಿದ ದಕ್ಷಿಣದ ಖ್ಯಾತ ಕಲಾವಿದರಿವರು..


ಸುಹಾನ್ ಶೇಕ್, Feb 3, 2024, 2:36 PM IST

Politics: ಸಿನಿಮಾರಂಗದಿಂದ ರಾಜಕೀಯದತ್ತ ಮುಖಮಾಡಿದ ದಕ್ಷಿಣದ ಖ್ಯಾತ ಕಲಾವಿದರಿವರು..

ತಮಿಳು ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಎಂಟ್ರಿ ಆಗಿದ್ದಾರೆ. ತಮ್ಮ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂʼಎಂದು ಹೆಸರಿಟ್ಟಿದ್ದಾರೆ. ಆ ಮೂಲಕ ಕಾಲಿವುಡ್‌ ರಂಗದಿಂದ ಮತ್ತೊಬ್ಬ ನಟ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ.

ದಳಪತಿ ವಿಜಯ್‌ ಅವರ ರಾಜಕೀಯ ಪ್ರವೇಶ ತಮಿಳುನಾಡಿನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ದಕ್ಷಿಣ ಭಾರತದ ಸಿನಿವಲಯದಲ್ಲಿ ಸ್ಟಾರ್‌ ನಟ/ನಟಿಯರು ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಇಳಿಯುವುದು ಮೊದಲಲ್ಲ. ಸಿನಿಮಾರಂಗದಲ್ಲಿ ಜನಪ್ರಿಯತೆ ಪಡೆದುಕೊಂಡು ಜನರ ಸೇವೆಗಿಳಿದ ದಕ್ಷಿಣ ಭಾರತದ ಖ್ಯಾತ ನಟ/ ನಟಿಯರಿವರು..

ಎನ್. ಟಿ. ರಾಮರಾವ್ (NTR) : ಟಾಲಿವುಡ್‌ ಸಿನಿಮಾರಂಗದಲ್ಲಿ ಎನ್‌ ಟಿಆರ್‌ ಅವರ ಹೆಸರು ಕೇಳದವರಿಲ್ಲ. 1950 -60 ರ ದಶಕದಲ್ಲಿ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 254 ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡ ಅವರು, ಸಿನಿಮಾರಂಗದಲ್ಲಿರುವಂತೆಯೇ ರಾಜಕೀಯರಂಗದಲ್ಲೂ ಅಪಾರ ಮನ್ನಣೆ ಪಡೆದುಕೊಂಡಿದ್ದರು. 1982 ರಲ್ಲಿ ತೆಲುಗು ದೇಶಂ ಪಾರ್ಟಿ(TDP)  ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಅಖಾಡಕ್ಕೆ ಪ್ರವೇಶ ಪಡೆದರು. ಅವರು ಮೂರು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ರಾವ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರವು 1968 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು.

ಎಂ.ಜಿ. ರಾಮಚಂದ್ರನ್ (MGR): ಕಾಲಿವುಡ್‌ ಸಿನಿರಂಗದಲ್ಲಿ ಎಂಜಿಆರ್‌ ಎಂದೇ ಖ್ಯಾತರಾದ  ಎಂ.ಜಿ. ರಾಮಚಂದ್ರನ್ ಅವರ ಸಿನಿಮಾರಂಗದ ಸೇವೆಯನ್ನು ಜನ ಎಷ್ಟು ನೆನಪಿನಲ್ಲಿ ಇಟ್ಟುಕೊಂಡಿದ್ದಾರೋ, ಅವರ ರಾಜಕೀಯ ಕೊಡುಗೆಗಳನ್ನು ಕೂಡ ತಮಿಳುನಾಡಿನಲ್ಲಿ ಇಂದಿಗೂ ಜನ ಸ್ಮರಿಸುತ್ತಾರೆ. ದಶಕದ ಕಾಲ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ʼಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂʼ ಪಕ್ಷದಲ್ಲಿ ಗುರುತಿಸಿಕೊಂಡ ಅವರು ರಾಜಕೀಯ ಸೇವೆಗಳಿಂದ  ಜನರಿಂದ”ಮಕ್ಕಳ ತಿಲಗಮ್” (ಜನರ ರಾಜ) ಪಡೆದಿದ್ದರು.

ಜಯಲಲಿತಾ: ತಮಿಳುನಾಡಿನ ರಾಜಕೀಯ ವಲಯದಲ್ಲಿ ಇಂದಿಗೂ ಅಚ್ಚಳಿಯದ ಹೆಸರಾಗಿ ಜಯಲಲಿತಾ ಅವರ ಹೆಸರು ಉಳಿದುಕೊಂಡಿದೆ. ಅವರ ಮುಖ್ಯಮಂತ್ರಿ ಅವಧಿಯಲ್ಲಿ ಮಾಡಿದ ಜನ ಸೇವೆ, ಯೋಜನೆಗಳನ್ನು ಇಂದಿಗೂ ಅಲ್ಲಿನ ಜನ ಸ್ಮರಿಸುತ್ತಾರೆ. ಒಂದು ಕಾಲದಲ್ಲಿ ಜನಪ್ರಿಯ ಸಿನಿಮಾ ನಾಯಕಿಯಾಗಿದ್ದ ಜಯಲಲಿತಾ ಅವರು 1982 ರಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದರು. 1991 ರಲ್ಲಿ ತಮಿಳುನಾಡಿನ ಸಿಎಂ ಆಗಿ ಮೊದಲ ಬಾರಿಗೆ ರಾಜ್ಯ ಆಳುವ ಅಧಿಕಾರವನ್ನು ವಹಿಸಿಕೊಂಡರು. 6 ಬಾರಿಯ ಅವಧಿಯಲ್ಲಿ 14 ವರ್ಷಗಳ ಕಾಲ ಸುದೀರ್ಘವಾಗಿ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2016 ರಲ್ಲಿ ಜಯಲಲಿತಾ ಅವರ ಅನಿರೀಕ್ಷಿತ ನಿಧನವು ಒಂದು ಯುಗವನ್ನು ಅಂತ್ಯಗೊಳಿಸಿತು.

ಚಿರಂಜೀವಿ: ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿ ಸಿನಿಮಾ ಕ್ಷೇತ್ರದಲ್ಲಿ ಇಂದಿಗೂ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶ ಪಡೆಯುವ ನಿಟ್ಟಿನಲ್ಲಿ 2007 ರಲ್ಲಿ ಚಿತ್ರರಂಗದಿಂದ ಬ್ರೇಕ್‌ ಪಡೆದುಕೊಂಡು, 2008 ರಲ್ಲಿಆಂಧ್ರಪ್ರದೇಶದಲ್ಲಿ ʼಪ್ರಜಾರಾಜ್ಯಂʼ ಪಕ್ಷವನ್ನು ಸ್ಥಾಪಿಸಿದರು. ಆ ಬಳಿಕ ಅದನ್ನು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಆ ಬಳಿಕ ನಟನೆಗೆ ಹಿಂತಿರುಗಿದ ಚಿರಂಜೀವಿ, ಇಂದು ರಾಜಕೀಯವಾಗಿ ಅಷ್ಟಾಗಿ ಸಕ್ರಿಯವಾಗಿಲ್ಲ.

ರಜಿನಿಕಾಂತ್:‌ ಸೂಪರ್‌ ಸ್ಟಾರ್‌ ರಜಿನಿಕಾಂತಾ ಅವರು, 2017 ರಲ್ಲಿ ರಾಜಕೀಯಕ್ಕೆ ಸೇರಿದ್ದರು. ರಜಿನಿ ʼಮಕ್ಕಳ್ ಮಂದ್ರಮ್ (ಆರ್‌ಎಂಎಂ) ನ್ನು ಸ್ಥಾಪಿಸಿದರು. ಇನ್ನೇನು ರಜಿನಿ ಸಿಎಂ ಆಗುತ್ತಾರೆ ಎನ್ನುವ ಮಾತುಗಳ ನಡುವೆಯೇ 2021 ರಲ್ಲಿ ಅವರು ಆರೋಗ್ಯದ ದೃಷ್ಟಿಯಿಂದ ತಮ್ಮ ಪಕ್ಷವನ್ನು ವಿಸರ್ಜಿಸಿದರು. ಆ ಮೂಲಕ ರಾಜಕೀಯದಿಂದ ದೂರ ಉಳಿದರು.

ಖುಷ್ಬು ಸುಂದರ್: ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಖುಷ್ಬು ಸುಂದರ್ ಅವರು, ಸಿನಿಮಾವಲಯದಲ್ಲಿ ಹೇಗೆ ಏರಿಳಿತವನ್ನು ಕಂಡಿದ್ದಾರೆಯೋ, ರಾಜಕೀಯವಾಗಿ ಹಾಗೆಯೇ ಅದೇ ರೀತಿಯಾಗಿ ಕಾಣಿಸಿಕೊಂಡಿದ್ದಾರೆ. 2010 ರಲ್ಲಿ ಡಿಎಂಕೆ ಪಕ್ಷಕ್ಕೆ ಸೇರಿದ ಅವರು, 2014 ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಆದರೆ 2020 ರಲ್ಲಿ ಅವರು ಬಿಜೆಪಿ ಪಕ್ಷದತ್ತ ಮುಖಮಾಡಿದರು. 2021 ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಸೋಲನ್ನು ಎದುರಿಸಿದರು.

ಕಮಲ್ ಹಾಸನ್: ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಕಮಲ್‌ ಹಾಸನ್‌ ಅವರು ಸಿನಿಮಾರಂಗದಲ್ಲಿ ಇಂದು ದೊಡ್ಡಮಟ್ಟದ ಹೆಸರನ್ನು ಗಳಿಸಿದ್ದಾರೆ. ಆದರೆ ಅವರ ರಾಜಕೀಯ ಜರ್ನಿ ಅಷ್ಟಾಗಿ ಯಶಸ್ಸಿನ ಹಾದಿಯಲ್ಲಿ ಸಾಗಿಲ್ಲ. 2018 ರಲ್ಲಿ ʼಮಕ್ಕಳ್ ನೀಧಿ ಮೈಯಂʼ (MNM) ಪಕ್ಷವನ್ನು ಸ್ಥಾಪಿಸಿದರು.  2021 ರ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತಿದ್ದರು. ಇಂದು ಕಮಲ್ ಹಾಸನ್ ಅವರು ಸಿನಿಮಾರಂಗ ಹಾಗೂ MNM ಅಧ್ಯಕ್ಷರಾಗಿ ತೊಡಗಿಸಿಕೊಂಡಿದ್ದಾರೆ.

ಉದಯನಿಧಿ ಸ್ಟಾಲಿನ್:  ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ ಉದಯನಿಧಿ ಸ್ಟಾಲಿನ್ ಅವರು ಇಂದು ಸಿನಿಮಾರಂಗ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ತಮಿಳುನಾಡಿನ ಸಿಎಂ ಆಗಿರುವ ಅವರು ಅವರ ತಂದೆ ಎಂ.ಕೆ. ಸ್ಟಾಲಿನ್‌ ಅವರ ಸಚಿವ ಸಂಪುಟದಲ್ಲಿ ಉದಯನಿಧಿ  ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿದ್ದಾರೆ.

ಪವನ್ ಕಲ್ಯಾಣ್: ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅವರ ರಾಜಕೀಯ ಅಖಾಡ ಆಂಧ್ರದಲ್ಲಿ ಸದ್ದು ಮಾಡಿದೆ. ಪವನ್ ಕಲ್ಯಾಣ್ 2014 ರಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ತಮ್ಮ‌ ಜನಸೇನಾ ಪಕ್ಷದಿಂದ ಅವರು ಯಾತ್ರೆಗಳನ್ನು ಕೈಗೊಂಡು ರಾಜಕೀಯವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡು ಚುನಾವಣೆಯನ್ನು ಎದುರಿಸು ತಯಾರಿಯಲ್ಲಿದ್ದಾರೆ.

ವಿಜಯಕಾಂತ್:  ಇತ್ತೀಚೆಗೆ ನಿಧನರಾದ ಕ್ಯಾಪ್ಟನ್‌ ವಿಜಯಕಾಂತ್‌ ತಮಿಳು ಸಿನಿಮಾರಂಗದಲ್ಲಿ ದೊಡ್ಡ ಹೆಸರು. 2005 ರಲ್ಲಿ ಶುರುವಾದ ʼದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ʼ ಪಕ್ಷದ ಸಂಸ್ಥಾಪಕರಲ್ಲಿ‌ ವಿಜಯಕಾಂತ್‌ ಅವರು ಒಬ್ಬರು. 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು. 2016 ರಲ್ಲಿ ಚುನಾವಣಾ ಭಾಷಣದ ಸಂದರ್ಭದಲ್ಲಿ ಹಲವು ಟೀಕೆಗಳನ್ನು ಎದುರಿಸಿದ್ದರು.

ರಮ್ಯಾ: ಚಂದನವನದ ಮೋಹಕತಾರೆ ನಟಿ ರಮ್ಯಾ(ದಿವ್ಯಾ ಸ್ಪಂದನಾ) ಅವರು ನಟನೆ ಮೂಲಕವೇ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡವರು. ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡ ಅವರು,  2013 ರಲ್ಲಿ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಂಸದೆಯಾಗಿ ಸೇವೆ ಸಲ್ಲಿಸಿದ್ದರು. ನಟನೆಯಿಂದ ದೂರ ಉಳಿದರೂ ರಾಜಕೀಯವಾಗಿ ಅವರು ಆಗಾಗ ಟ್ವೀಟ್‌ ಗಳನ್ನು ಮಾಡಿ, ಸ್ವಪಕ್ಷದ ತಪ್ಪುಗಳನ್ನೇ ಟೀಕಿಸುವ ಮೂಲಕ ಸದ್ದು ಮಾಡಿದ್ದರು.

ಸುರೇಶ್‌ ಗೋಪಿ:  ಮಾಲಿವುಡ್‌ ಸಿನಿಮಾರಂಗದ ಖ್ಯಾತ ನಟ ಸುರೇಶ್‌ ಗೋಪಿ ಅವರು ರಾಜಕೀಯದಲ್ಲಿ ಯಶಸ್ಸಿನ ಹಾದಿಯನ್ನು ಕಂಡುಕೊಂಡಿದ್ದಾರೆ. ರಾಜ್ಯಸಭಾ ಸಂಸದರಾಗಿ ಬಿಜೆಪಿ ಸೇರಿದರು. 2019 ರಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ತ್ರಿಶೂರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

 

ಟಾಪ್ ನ್ಯೂಸ್

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

1-asaasas

Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !

6-WLD

Weight Loss Drinks: ತೂಕ, ಕೊಬ್ಬು ಕಡಿಮೆ ಮಾಡಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.