UV Fusion: ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು


Team Udayavani, Feb 3, 2024, 11:50 AM IST

3-uv-fusion

ನಮ್ಮ ಬದುಕಿನಲ್ಲಿ ಅನೇಕರು ಬಂದು ಹೋಗುತ್ತಾರೆ. ಬಂದಂತಹ ಎಲ್ಲರೂ ಒಳ್ಳೆ ಯವರೇ ಎಂದು ನಿರ್ಧರಿಸುವುದು ಕಷ್ಟ. ನಾನಾ ರೀತಿಗಳಲ್ಲಿ ಮೋಸಗೊಳಿಸುವವರು ಇರುತ್ತಾರೆ. ಅವರಾಡುವ ಎಲ್ಲ ನುಡಿಗಳು ಸತ್ಯ ಎಂದು ನಂಬುವುದು ಸರಿಯಲ್ಲ. ಸುಳ್ಳೆಂದು ದೂಷಿಸುವುದು ಸರಿಯಲ್ಲ. ಹಾಗಂತ ಮೂರನೆಯವರು ಆ ವ್ಯಕ್ತಿ ಸರಿ ಇಲ್ಲ ಎಂದು ಹೇಳಿದರೆ ಅದನ್ನು ನಂಬುವುದು ಸರಿಯಲ್ಲ. ಹೀಗೆ ನಮ್ಮ ದೈನಂದಿನ ಜೀವನದಲ್ಲಿ ಇಂತಹ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ.

ಕನ್ನಡ ಭಾಷೆಯಲ್ಲಿ ಚಲಾವಣೆಯಲ್ಲಿರುವ ಅನೇಕ ಗಾದೆ ಮಾತುಗಳು ನಮ್ಮ ಜೀವನ ಯಾವುದೋ ಒಂದು ಸಂದರ್ಭಕ್ಕೆ ಹೋಲು ವಂತಿದೆ.  ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಈ ಗಾದೆ ನಮ್ಮ ಬದುಕಿದೆ ಮಾರ್ಗದರ್ಶನದಂತೆ ಕಾಣುತ್ತದೆ. ಯಾಕೆಂದರೆ ಕೆಲವೊಂದು ವಿಚಾರ ಆಗಿರಬಹುದು ಅಥವಾ ವಸ್ತುವೇ ಆಗಿರಬಹುದು, ಅದನ್ನು ನಾವು ಕಣ್ಣಾರೆ ಕಂಡು ಅದು ಅದೇ ವಸ್ತು ಎಂದು ನಿರ್ಧ ರಿಸುವುದು ಸರಿಯಲ್ಲ. ಬೆಳ್ಳಗಿರುವುದೆಲ್ಲಾ ಹಾಲಲ್ಲವಲ್ಲ… ಬೆಳ್ಳಗಿರುವ ನೀರನ್ನು ಕಂಡು ಹಾಲು ಎಂದು ಭಾವಿಸಿ ಹಾಲಾಹಲವನ್ನು ಸೇವಿಸಿದ ಪ್ರಸಂಗವನ್ನು ನಾವೆಲ್ಲಾ ಗಮನಿಸಿದ್ದೇವೆ. ಹಾಗೆಯೇ ದೂರದಲ್ಲಿ ಒಂದು ಹಗ್ಗ ಬಿದ್ದಿದ್ದರೆ ಅದನ್ನ ಹಾವು ಎಂದು ಭಾವಿಸಿ  ಊರೆಲ್ಲಾ ಕಿರುಚಾಡಿ ಬೆಚ್ಚಿ ಬೀಳುವುದು ಸರಿಯೇ? ಅಥವಾ ಸರಿಯಾಗಿ ಸ್ವಲ್ಪ ಹತ್ತಿರದಿಂದ ನೋಡಿ ಅದೇನೆಂದು ಸ್ಪಷ್ಟೀಕರಿಸಿಕೊಳ್ಳುವುದು ಸರಿಯೇ? ಇಂತಹ ಪ್ರಸಂಗಗಳು ಎದೆಷ್ಟೋ ನಮ್ಮ ಸುತ್ತಮುತ್ತ ನಡೆದಿದೆ.

ಸತ್ಯ ಎಲ್ಲಿದೆ ಎಂದರೆ ನಮ್ಮ ಜಿಹ್ವಾಮೂಲ ದಲ್ಲಿದೆ ಎಂದು ಹೇಳಬೇಕು. ನಮ್ಮ ನಾಲಗೆ ನಮ್ಮ ಹಿಡಿತದಲ್ಲಿರಬೇಕು. ಆಗ ಮಾತ್ರ ಕಂಡದ್ದನ್ನು ಕಂಡಂತೆ ಸತ್ಯ ಸಂಗತಿ ಹೇಳುವ ಧೈರ್ಯ ನಮ್ಮಲ್ಲಿರುತ್ತದೆ. ಜನ ಯಾರೋ ಹೇಳಿದ ಮಾತುಗಳನ್ನು ಕೇಳಿ ಅದೇ ಸತ್ಯ ಎಂದು ನಂಬಿ ಊರೆಲ್ಲ ಡಂಗುರ ಭಾರಿಸುವುದು ಹಿಂದಿನಿಂದಲೂ ರೂಢಿಯಲ್ಲಿದೆ.

ಆಲಿಸುವ ಸಾಮರ್ಥ್ಯಕ್ಕೆ ಮನುಷ್ಯನಲ್ಲಿ ಕೊರತೆಯಿದೆ. ಯಾವಾಗ ಸುಪ್ತ ವಾಗಿ ಆಲಿಸುವ ಗುಣ ಮನುಷ್ಯನಲ್ಲಿ ಕರಗತವಾಗುತ್ತೋ ಅಂದು ಆತ ಅರ್ಧ ಗೆದ್ದ ಹಾಗೆ.  ಇನ್ನೊಬ್ಬರು ಹೇಳಿರುವ ವಿಷಯವನ್ನು ವಿಚಾರಕ್ಕೆ ಒಳಪಡಿಸದೆ ಅದೇ ಸತ್ಯವೆಂದು ನಂಬಿ ಮುನ್ನಡೆಯುವವರು ಮೂರ್ಖರು. ಕಣ್ಣೆದುರು ನಡೆದುದೆಲ್ಲ ಸತ್ಯ ಎಂದು ನಂಬಬಾರದು ಅದನ್ನ ಪ್ರಮಾಣಿಸಿ ನೋಡಬೇಕು.

ಕೆಲವೊಮ್ಮೆ ನಮ್ಮ ಜತೆಗೇ ಇರುವವರು ದೂರದಲ್ಲಿ ಏನೋ ನಮ್ಮ ಕಡೆ ನೋಡಿ ಮಾತನಾಡುತ್ತಿದ್ದಾರೆ ಎಂದರೆ ಅವರು ನಮ್ಮ ಬಗ್ಗೆ ಮಾತುಗಳನ್ನಾಡುತ್ತಾ ಇದ್ದಾರೆ ಎಂದರ್ಥವಲ್ಲ. ಒಂದು ವೇಳೆ ಮಾತನಾಡಿದರು ನಮ್ಮ ಬಗ್ಗೆ ಕೆಟ್ಟ ವಿಚಾರಗಳನ್ನು ಆಡಿದ್ದಾರೆ ಎಂದು ಭಾವಿಸುವುದು ಸರಿಯಲ್ಲ.

ಅದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂದು ಪತ್ತೆ ಹಚ್ಚಿ ದೃಢೀಕರಿಸಿಕೊಳ್ಳಬೇಕು ಎಂಬುದೇ ಈ ಗಾದೆಯ ಆಶಯವಾಗಿದೆ. ಕೆಲವೊಮ್ಮೆ ಹಲವಾರು ಕಾರಣಗಳಿಂದ ಎದುರಿಗಿರುವ ವಸ್ತುಗಳ ನೈಜ ಸ್ವರೂಪವನ್ನು ಗ್ರಹಿಸಲಾಗದ ಸಂದರ್ಭ ಎದುರಾಗುತ್ತದೆ. ತಾಳ್ಮೆ, ಸಹನೆ ಇದ್ದರೆ ಇವೆಲ್ಲವೂ ಸಾಧ್ಯ, ಅಸಾಧ್ಯವಾದುದು ಯಾವುದೂ ಇಲ್ಲ.

-ದೀಪ್ತಿ ಅಡ್ಡಂತ್ತಡ್ಕ

ವಿವೇಕಾನಂದ ಕಾಲೇಜು

ಪುತ್ತೂರು

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.