Thalapathy 69: ದಳಪತಿ ವಿಜಯ್ ಕೊನೆಯ ಸಿನಿಮಾಕ್ಕೆ ಅಟ್ಲಿ ಆ್ಯಕ್ಷನ್ ಕಟ್?
ಅಟ್ಲಿ ಸಿನಿಮಾದಲ್ಲಿ ವಿಜಯ್ ಜೊತೆ ಶಾರುಖ್ ?
Team Udayavani, Feb 3, 2024, 4:39 PM IST
ಚೆನ್ನೈ: ದಳಪತಿ ವಿಜಯ್ ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂʼ ಎಂದು ಹೆಸರಿಟ್ಟು ಅದನ್ನು ನೋಂದಾಯಿಸಿದ್ದಾರೆ. ಇತ್ತ ಸಿನಿಮಾರಂಗದಿಂದ ದೂರವಾಗುವುದಾಗಿಯೂ ವಿಜಯ್ ಘೋಷಿಸಿದ್ದಾರೆ.
ಅವರ 69ನೇ ಸಿನಿಮಾವೇ ಅವರ ಕೊನೆಯ ಸಿನಿಮಾವೆಂದು ಅವರು ಅನೌನ್ಸ್ ಮಾಡಿದ್ದಾರೆ. ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವ ನಿಟ್ಟಿನಲ್ಲಿ 2026 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆ ಮೂಲಕ ರಾಜ್ಯವನ್ನಾಳುವ ಕನಸನ್ನು ಇಟ್ಟುಕೊಂಡಿದ್ದಾರೆ.
‘Thalapathy 69’ ಸಿನಿಮಾ ವಿಜಯ್ ವೃತ್ತಿ ಬದುಕಿನ ಕೊನೆಯ ಸಿನಿಮಾವೆಂದು ಹೇಳಲಾಗಿದೆ. ಈ ಸಿನಿಮಾಕ್ಕೆ ಈಗಾಗಲೇ ಅವರು ಖ್ಯಾತ ಪ್ರೂಡಕ್ಷನ್ ಸಂಸ್ಥೆ ಜೊತೆ ಸಹಿ ಮಾಡಿಕೊಂಡಿದ್ದಾರೆ. ಆದರೆ ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ: Politics: ಸಿನಿಮಾರಂಗದಿಂದ ರಾಜಕೀಯದತ್ತ ಮುಖಮಾಡಿದ ದಕ್ಷಿಣದ ಖ್ಯಾತ ಕಲಾವಿದರಿವರು..
ಈ ಸಿನಿಮಾವನ್ನು ವಿಜಯ್ ಅವರಿಗೆ ಹ್ಯಾಟ್ರಿಕ್ ಹಿಟ್ ತಂದುಕೊಟ್ಟ ಅಟ್ಲಿ ಕುಮಾರ್ ಅವರು ಮಾಡಲಿದ್ದಾರೆ ಎನ್ನುವ ಮಾತೊಂದು ಕಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ‘Thalapathy 69′ ಸಿನಿಮಾ ರಾಜಕೀಯ ಕಥಾಹಂದರವನ್ನು ಒಳಗೊಂಡಿದೆ. ರಾಜಕೀಯ ಎಂಟ್ರಿಯಾದ ಬಳಿಕ ರಾಜಕೀಯ ಪ್ರೇರಿತ ಸಿನಿಮಾವೊಂದು ಬರುವುದು ಒಂದಷ್ಟು ವಿವಾದಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಈ ಹಿಂದೆ ಅಟ್ಲಿ ವಿಜಯ್ ಅವರೊಂದಿಗೆ ʼತೇರಿ’, ‘ಮೆರ್ಸಲ್’ ಮತ್ತು ‘ಬಿಗಿಲ್’ ಸಿನಿಮಾಗಳನ್ನು ಮಾಡಿದ್ದಾರೆ. ಇತರೆ ನಿರ್ದೇಶಕರಿಗಿಂತ ಅಟ್ಲಿ ವಿಜಯ್ ಅವರ ಸಿನಿಮಾದ ನಾಡಿಮಿಡಿತವನ್ನು ಹೆಚ್ಚಾಗಿ ಅರಿತುಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ಅಟ್ಲಿ ಈ ಹಿಂದೆ ಹೇಳಿದಂತೆ ಶಾರುಖ್ – ವಿಜಯ್ ಅವರನ್ನು ಜೊತೆಯಾಗಿ ಸ್ಕ್ರೀನ್ ಮೇಲೆ ತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಅಟ್ಲಿ ಅವರೇ ವಿಜಯ್ ಅವರ ಕೊನೆಯ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಾರೋ, ಇಲ್ವೋ ಎನ್ನುವುದರ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.