Daily Horoscope: ವಯಸ್ಸು ಮೀರುವ ಭೀತಿಯಲ್ಲಿರುವ ಅವಿವಾಹಿತರಿಗೆ ವಿವಾಹ ಯೋಗ
Team Udayavani, Feb 4, 2024, 7:00 AM IST
ಮೇಷ: ಬಯಸಿದಂತೆ ಆಗಲಿಲ್ಲ ಎಂದು ದುಃಖಿಸದಿರಿ, ದೇವರು ಇನ್ನೊಂದು ಕೊಡುತ್ತಾನೆ ಎಂಬ ಭರವಸೆ ಇರಲಿ. ವಿರಾಮದ ದಿನವಾದರೂ ಕೆಲಸದ ಚಿಂತೆ. ಉದ್ಯಮ, ವ್ಯವಹಾರದಲ್ಲಿ ಉತ್ತಮ ಲಾಭ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ
ವೃಷಭ: ಒಳ್ಳೆಯ ಕಾಲ ಬಂದಾಗ ಎಲ್ಲವೂ ಒಳ್ಳೆಯದೇ ಆಗುತ್ತದೆ. ವಿರಾಮದಲ್ಲಿ ಗೆಳೆಯರ ಭೇಟಿ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ದಿಢೀರ್ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ.
ಮಿಥುನ: ಭಗವಂತನೇ ಭವಿಷ್ಯ ನಿರ್ಣಾಯಕ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ. ಪಿತ್ರಾರ್ಜಿತ ಆಸ್ತಿಯ ಆಭಿವೃದ್ಧಿಗೆ ಗಮನ ಕೊಡಿರಿ. ಪರಿಸರ ರಕ್ಷಣೆಗೆ ಶ್ರಮದಾನ. ಮನೆ ಮಂದಿಯ ನಡುವೆ ಪ್ರೀತಿ, ಸಾಮರಸ್ಯ ವೃದ್ಧಿ.
ಕರ್ಕಾಟಕ: ಮಲಿನ ಪರಿಸರ ಮನಸ್ಸನ್ನು ಮಲಿನಗೊಳಿಸ ದಂತೆ ಎಚ್ಚರವಿರಲಿ. ಸತತ ಪ್ರಯತ್ನದಿಂದ ಸದ್ಭಾವನೆ ಗಳಿಕೆ. ಉದ್ಯಮದ ಹಳೆಯ ಸಮಸ್ಯೆ ನಿವಾರಣೆ. ದೇವತಾರಾಧನೆ, ಸದ್ಗ್ರಂಥ ಪಾರಾಯಣ, ಧ್ಯಾನ, ಭಜನೆ, ಸತ್ಸಂಗಗಳ ಕಡೆಗೆ ಸೆಳೆತ.
ಸಿಂಹ: ಆರು ದಿನಗಳ ಸತತ ಶ್ರಮದ ಬಳಿಕ ವಿರಾಮದಲ್ಲೂ ಕ್ರಿಯೆಯ ಚಿಂತನೆ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಚಿಂತನೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಹೊರಗಿನ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಬೇಡಿಕೆ.
ಕನ್ಯಾ: ಬದುಕಿನ ಅನುಭವದ ಪರಿಧಿಯನ್ನು ವಿಸ್ತರಿಸುವ ಹೊಸ ಸನ್ನಿವೇಶಗಳು. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್ ರಿಪೇರಿಯವರಿಗೆ ವಿರಾಮ ಇಲ್ಲ. ವಯಸ್ಸು ಮೀರುವ ಭೀತಿಯಲ್ಲಿರುವ ಅವಿವಾಹಿತರಿಗೆ ವಿವಾಹ ಯೋಗ.
ತುಲಾ: ಚಿತ್ತಸ್ಥೈರ್ಯ ಪ್ರಾಪ್ತಿ ಯ ಪ್ರಯತ್ನದಲ್ಲಿ ಯಶಸ್ಸು. ಬಾಲ್ಯದ ಒಡನಾಡಿಗಳ ಅಕ ಸ್ಮಾತ್ ಮಿಲನ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ. ಮನೆಗೆ ಬಂದ ಹಿರಿಯರೊಂದಿಗೆ ಹತ್ತಿರದ ದೇವಾ ಲಯಕ್ಕೆ ಸಂದರ್ಶನ.
ವೃಶ್ಚಿಕ: ವಿರಾಮದ ದಿನ ಕೆಲಸದ ಚಿಂತೆಯನ್ನು ದೂರ ವಿಡಿ. ಬಂಧು ಮಿತ್ರರ ಭೇಟಿ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ಸುಧಾರಣೆ. ಹಳೆಯ ನಿಕಟ ಪರಿಚಿತರ ಅಕಸ್ಮಾತ್ ಭೇಟಿ. ಹಿರಿಯರ ಆರೋಗ್ಯ ಸ್ಥಿತಿಯಲ್ಲಿ ಉತ್ತಮ.
ಧನು: ಸೇವಾಕ್ಷೇತ್ರದಲ್ಲಿ ನಿಮ್ಮಿಂದ ಉಪಕೃತರಾದವರ ಆಗಮನ. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಸ್ವಂತ ಮನೆಗೋಸ್ಕರ ನಿವೇಶನ ಖರೀದಿ. ಮನೆಯಲ್ಲಿ ಇಷ್ಟದೇವತಾರ್ಚನೆ ಸೋದರ , ಸೋದರಿಯ ಭೇಟಿ.
ಮಕರ: ಹೊಸ ಹುರುಪಿ ನೊಂದಿಗೆ ದಿನಾರಂಭ.ಸಹೋ ದ್ಯೋಗಿ ಮಿತ್ರರ ಭೇಟಿ. ಸಹೋದ್ಯಮದ ಸಂಸ್ಥೆಯ ನೌಕರರ ಸೌಹಾರ್ದ ಮಿಲನ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ರಜಾ ದಿನದಲ್ಲೇ ನಿರೀಕ್ಷೆ ಮೀರಿದ ಲಾಭ.
ಕುಂಭ: ಗಳಿಸಿದ ಪುಣ್ಯವೆಂಬ ಸಂಪತ್ತಿನ ವೃದ್ಧಿಗಾಗಿ ಸತ್ಕರ್ಮ ಗಳಲ್ಲಿ ಆಸಕ್ತಿ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಬಿಡುವು ಇಲ್ಲದಷ್ಟು ಬೇಡಿಕೆ.
ಮೀನ: ವಿರಾಮದ ದಿನವೂ ಬೆನ್ನಟ್ಟಿ ಬರುವ ಕೆಲಸ ಕಾರ್ಯ ಗಳು. ಜನಸೇವಾ ಕಾರ್ಯಗಳು ನಿರಾತಂಕವಾಗಿ ಮುಂದು ವರಿಕೆ. ಬಂಧುವರ್ಗದವರಿಗೆ ಹೊಸ ವ್ಯವಹಾರ ಮುಂದುವರಿಸಲು ಮಾರ್ಗದರ್ಶನ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.