Test; ಬುಮ್ರಾ ಸ್ವಿಂಗ್ ದಾಳಿಗೆ ಕಂಪಿಸಿದ ಇಂಗ್ಲೆಂಡ್
ಜೈಸ್ವಾಲ್ 209, ಬುಮ್ರಾಗೆ 6 ವಿಕೆಟ್, ಭಾರತಕ್ಕೆ 143 ರನ್ ಮುನ್ನಡೆ
Team Udayavani, Feb 3, 2024, 11:46 PM IST
ವಿಶಾಖಪಟ್ಟಣ: ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ದ್ವಿಶತಕದ ಸಂಭ್ರಮಾ ಚರಣೆಯ ಬೆನ್ನಲ್ಲೇ ಆಂಗ್ಲರ ಮೇಲೆ ರಿವರ್ಸ್ ಸ್ವಿಂಗ್, ಯಾರ್ಕರ್ ಎಸೆತಗಳನ್ನು ಛೂಬಿಟ್ಟ ಜಸ್‌ಪ್ರೀತ್ ಬುಮ್ರಾ ವಿಶಾಖಪಟ್ಟಣ ಟೆಸ್ಟ್
ನಲ್ಲಿ ಭಾರತಕ್ಕೆ ದೊಡ್ಡ ಮೊತ್ತದ ಮೇಲುಗೈ ಒದಗಿಸಿದ್ದಾರೆ. 209 ರನ್ ಬಾರಿಸಿದ ಜೈಸ್ವಾಲ್ ಹಾಗೂ 45 ರನ್ನಿಗೆ 6 ವಿಕೆಟ್ ಉಡಾಯಿಸಿದ ಬುಮ್ರಾ ದ್ವಿತೀಯ ದಿನದಾಟದ ಹೀರೋ ಗಳಾಗಿ ಮೂಡಿಬಂದರು.
6 ವಿಕೆಟಿಗೆ 336 ರನ್ ಮಾಡಿ ಮೊದಲ ದಿನದಾಟ ಮುಗಿಸಿದ್ದ ಭಾರತ, ಶನಿವಾರ ಬ್ಯಾಟಿಂಗ್ ಮುಂದುವರಿಸಿ 396ಕ್ಕೆ ಆಲೌಟ್ ಆಯಿತು. ಜವಾಬಿತ್ತ ಇಂಗ್ಲೆಂಡ್ 55.5 ಓವರ್‌ಗಳಲ್ಲಿ 253 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿತು. ರೋಹಿತ್ ಪಡೆಗೆ ಲಭಿಸಿದ ಮುನ್ನಡೆ 143 ರನ್. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಭಾರತ, 5 ಓವರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಲಭಿಸಿರುವ ಒಟ್ಟು ಲೀಡ್ 171 ರನ್. ಈ ಮುನ್ನಡೆಯನ್ನು ಕನಿಷ್ಠ 400 ರನ್ ತನಕವಾದರೂ ಏರಿಸಬೇಕಾದ ಅಗತ್ಯವೀಗ ಟೀಮ್ ಇಂಡಿಯಾ ಮುಂದಿದೆ.
ಬುಮ್ರಾ ಮಾರಕ ದಾಳಿ
ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ “ಬ್ರಿಲಿಯಂಟ್ ಬೌಲಿಂಗ್’ ಮೂಲಕ ಆಂಗ್ಲರ ಪಾಳೆಯವನ್ನು ಕಂಪಿಸುವಂತೆ ಮಾಡಿದರು. ಆರಂಭದಲ್ಲಿ ಜಾಕ್ ಕ್ರಾಲಿ ಅಬ್ಬರದ ಬ್ಯಾಟಿಂಗ್ ನಡೆಸಿದರೂ ಒಮ್ಮೆ ಬುಮ್ರಾ ಲಯ ಕಂಡುಕೊಂಡ ಬಳಿಕ ಇಂಗ್ಲೆಂಡ್ ಆಟಗಾರರು ದಿಕ್ಕುತಪ್ಪತೊಡಗಿದರು. ಕೇವಲ 15.5 ಓವರ್‌ಗಳಲ್ಲಿ ಅವರು ರೂಟ್ (5), ಪೋಪ್ (23), ಬೇರ್‌ಸ್ಟೊ (25), ಸ್ಟೋಕ್ಸ್ (47) ಮತ್ತು ಆ್ಯಂಡರ್ಸನ್ (6) ವಿಕೆಟ್ ಉಡಾಯಿಸಿದರು. ಅದರಲ್ಲೂ ಕಳೆದ ಪಂದ್ಯದ ಹೀರೋ ಓಲೀ ಪೋಪ್ ಬೌಲ್ಡ್ ಆದ ರೀತಿಯಂತೂ ಅದ್ಭುತವಾಗಿತ್ತು. ಚೆಲ್ಲಾಪಿಲ್ಲಿಯಾದ ಸ್ಟಂಪ್ಸ್, ಆಗಸಕ್ಕೆ ಚಿಮ್ಮಿದ ಬೇಲ್ಸ್; ಬ್ಯಾಟನ್ನು ನೆಲಕ್ಕೆ ಊರಿಕೊಂಡು, ತಲೆಯನ್ನು ಕೆಳಹಾಕಿಕೊಂಡು ಅಸಹಾಯಕ ಸ್ಥಿತಿಯಲ್ಲಿ ನಿಂತ ಪೋಪ್… “ಪಿಕ್ಚರ್ ಆಫ್ ದ ಡೇ’ಗೆ ಇದಕ್ಕಿಂತ ಅರ್ಥವತ್ತಾದ ಚಿತ್ರವನ್ನು ಆಯ್ಕೆ ಮಾಡಲು ಸಾಧ್ಯವೇ ಇರಲಿಲ್ಲ.
ಇನ್ನೇನು ಇಂಗ್ಲೆಂಡ್ ಬ್ಯಾಟರ್ ಜತೆಯಾಟ ಕಟ್ಟುತ್ತಾರೆ ಎನ್ನುವಾಗ ನಾಯಕ ರೋಹಿತ್, ಬುಮ್ರಾ ಕೈಗೆ ಚೆಂಡು ನೀಡುತ್ತಿದ್ದರು. ಬುಮ್ರಾ ಎಲ್ಲೂ ನಿರಾಸೆಗೊಳಿಸಲಿಲ್ಲ. ಬುಮ್ರಾ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ 10ನೇ ನಿದರ್ಶನ ಇದಾಗಿದೆ. ಈ ಸಾಧನೆಯ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನೂ ಪೂರ್ತಿಗೊಳಿಸಿದರು. ಚೈನಾಮನ್ ಬೌಲರ್ ಕುಲದೀಪ್ ಯಾದವ್ 3 ವಿಕೆಟ್ ಉರುಳಿಸಿದರು. 78 ಎಸೆತಗಳಿಂದ 76 ರನ್ ಬಾರಿಸಿದ ಜಾಕ್ ಕ್ರಾಲಿ ಇಂಗ್ಲೆಂಡ್ ಸರದಿಯ ಟಾಪ್ ಸ್ಕೋರರ್ (11 ಬೌಂಡರಿ, 2 ಸಿಕ್ಸರ್).
ಜೈಸ್ವಾಲ್ ಡಬಲ್ ಸೆಂಚುರಿ
179 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಯಶಸ್ವಿ ಜೈಸ್ವಾಲ್ ಬಹಳ ಬೇಗ ಡಬಲ್ ಸೆಂಚುರಿ ಪೂರೈಸಿ ಭಾರತದ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು. 200 ರನ್ನಿಗೆ ಅವರು ಸಮಯ ವ್ಯರ್ಥಗೊಳಿಸಲೇ ಇಲ್ಲ. ಸೆಹವಾಗ್ ಶೈಲಿಯಲ್ಲಿ ಮುನ್ನುಗ್ಗಿದರು. ವೈಯಕ್ತಿಕ ಗಳಿಕೆ 191 ರನ್ ಆಗಿದ್ದಾಗ ಬಶೀರ್ ಎಸೆತಗಳನ್ನು ಸತತವಾಗಿ ಸಿಕ್ಸರ್ ಮತ್ತು ಬೌಂಡರಿಗೆ ಬಡಿದಟ್ಟಿ ಡಬಲ್ ಸೆಂಚುರಿ ಸಂಭ್ರಮದಲ್ಲಿ ಮಿಂದೆದ್ದರು. ಈ ಎಳೆಯನ ಅಸಾಮಾನ್ಯ ಬ್ಯಾಟಿಂಗ್ ಪರಾಕ್ರಮ ಎಲ್ಲ ದಿಕ್ಕುಗಳಿಂದಲೂ ಭಾರೀ ಪ್ರಶಂಸೆಗೊಳಗಾಗಿದೆ.
ಜೈಸ್ವಾಲ್ ಅವರ ಮ್ಯಾರಥಾನ್ ಇನ್ನಿಂಗ್ಸ್‌ಗೆ ತೆರೆ ಎಳೆದವರು ಜೇಮ್ಸ್ ಆ್ಯಂಡರ್ಸನ್. 8ನೇ ವಿಕೆಟ್ ರೂಪದಲ್ಲಿ ಔಟಾದ ಜೈಸ್ವಾಲ್ 290 ಎಸೆತಗಳಿಂದ ಜೀವನಶ್ರೇಷ್ಠ 209 ರನ್ ಬಾರಿಸಿದರು. ಈ ಚೆಂದದ ಆಟದ ವೇಳೆ 19 ಬೌಂಡರಿ, 7 ಸಿಕ್ಸರ್‌ಗಳ ತೋರಣ ಕಟ್ಟಿದರು.
ಭಾರತ ಪ್ರಥಮ ಇನ್ನಿಂಗ್ಸ್
( ಮೊದಲ ದಿನ 6 ವಿಕೆಟಿಗೆ 336)
ಯಶಸ್ವಿ ಜೈಸ್ವಾಲ್ ಸಿ ಬೇರ್‌ಸ್ಟೊ ಬಿ ಆ್ಯಂಡರ್ಸನ್ 209
ಆರ್. ಅಶ್ವಿನ್ ಸಿ ಫೋಕ್ಸ್ ಬಿ ಆ್ಯಂಡರ್ಸನ್ 20
ಕುಲದೀಪ್ ಯಾದವ್ ಔಟಾಗದೆ 8
ಜಸ್‌ಪ್ರೀತ್ ಬುಮ್ರಾ ಸಿ ರೂಟ್ ಬಿ ರೇಹಾನ್ 6
ಮುಕೇಶ್ ಕುಮಾರ್ ಸಿ ರೂಟ್ ಬಿ ಬಶೀರ್ 0
ಇತರ 2
ಒಟ್ಟು (ಆಲೌಟ್) 396
ವಿಕೆಟ್ ಪತನ: 7-364, 8-383, 9-395.
ಬೌಲಿಂಗ್: ಜೇಮ್ಸ್ ಆ್ಯಂಡರ್ಸನ್ 25-4-47-3
ಜೋ ರೂಟ್ 14-0-71-0
ಟಾಮ್ ಹಾಟಿÉì 18-2-74-1
ಶೋಯಿಬ್ ಬಶೀರ್ 38-1-138-3
ರೇಹಾನ್ ಅಹ್ಮದ್ 17-2-65-3
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್
ಜಾಕ್ ಕ್ರಾಲಿ ಸಿ ಅಯ್ಯರ್ ಬಿ ಅಕ್ಷರ್ 76
ಬೆನ್ ಡಕೆಟ್ ಸಿ ಪಾಟಿದಾರ್ ಬಿ ಕುಲದೀಪ್ 21
ಓಲೀ ಪೋಪ್ ಬಿ ಬುಮ್ರಾ 23
ಜೋ ರೂಟ್ ಸಿ ಗಿಲ್ ಬಿ ಬುಮ್ರಾ 5
ಜಾನಿ ಬೇರ್‌ಸ್ಟೊ ಸಿ ಗಿಲ್ ಬಿ ಬುಮ್ರಾ 25
ಬೆನ್ ಸ್ಟೋಕ್ಸ್ ಬಿ ಬುಮ್ರಾ 47
ಬೆನ್ ಫೋಕ್ಸ್ ಬಿ ಕುಲದೀಪ್ 6
ರೇಹಾನ್ ಅಹ್ಮದ್ ಸಿ ಗಿಲ್ ಬಿ ಕುಲದೀಪ್ 6
ಟಾಮ್ ಹಾರ್ಟ್ಲಿ ಸಿ ಗಿಲ್ ಬಿ ಬುಮ್ರಾ 21
ಜೇಮ್ಸ್ ಆ್ಯಂಡರ್ಸನ್ ಎಲ್‌ಬಿಡಬ್ಲ್ಯು ಬುಮ್ರಾ 6
ಶೋಯಿಬ್ ಬಶೀರ್ ಔಟಾಗದೆ 8
ಇತರ 9
ಒಟ್ಟು (ಆಲೌಟ್) 253
ವಿಕೆಟ್ ಪತನ: 1-59, 2-114, 3-123, 4-136, 5-159, 6-172, 7-182, 8-229, 9-234.
ಬೌಲಿಂಗ್: ಜಸ್‌ಪ್ರೀತ್ ಬುಮ್ರಾ 15.5-5-45-6
ಮುಕೇಶ್ ಕುಮಾರ್ 7-1-44-0
ಕುಲದೀಪ್ ಯಾದವ್ 17-1-71-3
ಆರ್. ಅಶ್ವಿನ್ 12-0-61-0
ಅಕ್ಷರ್ ಪಟೇಲ್ 4-0-24-1
ಭಾರತ ದ್ವಿತೀಯ ಇನ್ನಿಂಗ್ಸ್
ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ 15
ರೋಹಿತ್ ಶರ್ಮ ಬ್ಯಾಟಿಂಗ್ 13
ಒಟ್ಟು (ವಿಕೆಟ್ ನಷ್ಟವಿಲ್ಲದೆ) 28
ಬೌಲಿಂಗ್: ಜೇಮ್ಸ್ ಆ್ಯಂಡರ್ಸನ್ 2-0-6-0
ಶೋಯಿಬ್ ಬಶೀರ್ 2-0-17-0
ರೇಹಾನ್ ಅಹ್ಮದ್ 1-0-5-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.