Fine: ಮಿತಿಗಿಂತ ಉದ್ದದ ವಸ್ತು ಸಾಗಾಟ- 4 ವರ್ಷದಲ್ಲಿ 22.71 ಲ.ರೂ. ದಂಡ
Team Udayavani, Feb 3, 2024, 11:58 PM IST
ಮಂಗಳೂರು: ಗೂಡ್ಸ್ ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಉದ್ದದ ವಸ್ತು, ಸಲಕರಣೆಗಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಕಳೆದ ನಾಲ್ಕು ವರ್ಷಗಳಲ್ಲಿ 4,541 ಪ್ರಕರಣ ಗಳನ್ನು ದಾಖಲಿಸಿದ್ದು, 22,71,350 ರೂ. ದಂಡ ಸಂಗ್ರಹಿಸಿದ್ದಾರೆ.
ನಗರದ ವಿವಿಧ ಟೆಂಪೋ ರಿಕ್ಷಾ, ಪಿಕಪ್ ವಾಹನ, ಮಿನಿ ಟೆಂಪೋಗಳಲ್ಲಿ ನಿಗದಿತ ಪ್ರಮಾಣಕ್ಕೆ ಹೆಚ್ಚು ಉದ್ದವಾಗಿರುವ ಪೈಪ್, ಕಬ್ಬಿಣದ ಸರಳು, ಅಲ್ಯೂಮಿನಿಯಂ ರಾಡ್‌ಗಳು, ಮರ ಇತ್ಯಾದಿಗಳನ್ನು ಸಾಗಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಇದು ವಾಹನದಿಂದ ಹೊರಬಿದ್ದು ಇತರ ವಾಹನಗಳಲ್ಲಿ ಸಂಚರಿಸುವರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಘಟನೆಗಳೂ
ಸಂಭವಿಸಿವೆ.
2024ರಲ್ಲಿ ಕಳೆದ ಒಂದು ತಿಂಗಳಲ್ಲಿ ಕಮಿಷನರೆಟ್ ವ್ಯಾಪ್ತಿ ಯಲ್ಲಿ 269 ಪ್ರಕರಣಗಳನ್ನು ದಾಖಲಿಸ ಲಾಗಿದ್ದು, 1,34,500 ರೂ. ದಂಡ ವಿಧಿಸಲಾಗಿದೆ. 2021ರಲ್ಲಿ 974 ಪ್ರಕರಣದಲ್ಲಿ 5,07,500 ರೂ., 2022ರಲ್ಲಿ 1,311 ಪ್ರಕರಣ, 6,54,500 ರೂ ದಂಡ, 2023ರಲ್ಲಿ 1987 ಪ್ರಕರಣ, 9,74,850 ರೂ. ದಂಡ ಸಂಗ್ರಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.