OTT Release: ಒಂದೇ ದಿನ ಓಟಿಟಿಗೆ ಬರಲಿದೆ ಧನುಷ್ – ಮಹೇಶ್ ಬಾಬು ಸಿನಿಮಾ; ಯಾವಾಗ,ಎಲ್ಲಿ?
Team Udayavani, Feb 4, 2024, 2:23 PM IST
![7](https://www.udayavani.com/wp-content/uploads/2024/02/7-2-620x372.jpg)
![7](https://www.udayavani.com/wp-content/uploads/2024/02/7-2-620x372.jpg)
ಚೆನ್ನೈ/ ಹೈದರಾಬಾದ್: ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಸಂಕ್ರಾಂತಿ ಸಂದರ್ಭದಲ್ಲಿ ತೆರೆಕಂಡಿದ್ದ ಎರಡು ದೊಡ್ಡ ಸಿನಿಮಾಗಳು ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ.
ಧನುಷ್ ಅಭಿನಯದ ʼಕ್ಯಾಪ್ಟನ್ ಮಿಲ್ಲರ್ʼ ಹಾಗೂ ಪ್ರಿನ್ಸ್ ಮಹೇಶ್ ಬಾಬು ಅವರ ʼಗುಂಟೂರು ಖಾರಂ ʼಗುಂಟೂರು ಖಾರಂʼ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಈ ಎರಡೂ ಸಿನಿಮಾಗಳು ಒಂದೇ ದಿನ ಓಟಿಟಿಗೆ ಲಗ್ಗೆ ಇಡಲಿದೆ.
ʼಕ್ಯಾಪ್ಟನ್ ಮಿಲ್ಲರ್ʼ:
1930 ರ ಸ್ವಾತಂತ್ರ್ಯ ಕಾಲದ ಕಥೆಯನ್ನೊಳಗೊಂಡಿರುವ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದಲ್ಲಿ ಧನುಷ್ ಅವರು ಸಖತ್ ಮಾಸ್ ರೂಪದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಥಿಯೇಟರ್ ನಲ್ಲಿ ಮೆಚ್ಚುಗೆ ಆಗುವುದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಕೋಟಿ – ಕೋಟಿ ಗಳಿಕೆ ಕಂಡಿತ್ತು.
ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಸಿನಿಮಾ ಇದೇ ಫೆ.9 ರಂದು ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಲಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.
ಈ ಸಿನಿಮಾದಲ್ಲಿ ಧನುಷ್ ಜೊತೆ ಶಿವರಾಜ್‌ಕುಮಾರ್, ಪ್ರಿಯಾಂಕಾ ಅರುಲ್ ಮೋಹನ್, ಅದಿತಿ ಬಾಲನ್, ಸಂದೀಪ್ ಕಿಶನ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮುಂತಾದವರು ನಟಿಸಿದ್ದಾರೆ.
ʼಗುಂಟೂರು ಖಾರಂʼ:
ಪ್ರಿನ್ಸ್ ಮಹೇಶ್ ಬಾಬು – ತ್ರಿವಿಕ್ರಮ್ ಕಾಂಬಿನೇಷನ್ ನಲ್ಲಿ ʼಗುಂಟೂರು ಖಾರಂʼ ಸಿನಿಮಾಕ್ಕೆ ಆರಂಭಿಕ ದಿನದಲ್ಲಿ ಭರ್ಜರಿ ರೆಸ್ಪಾನ್ಸ್ ಕೇಳಿ ಬಂದಿತ್ತು. ಫ್ಯಾಮಿಲಿ ಅಡಿಯನ್ಸ್ ಗೆ ʼಗುಂಟೂರು ಖಾರಂʼ ಸಿನಿಮಾ ಇಷ್ಟವಾಗಿತ್ತು.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ʼಹನುಮಾನ್ʼ , ʼನಾ ಸಾಮಿ ರಂಗʼ ಸಿನಿಮಾದೊಂದಿಗೆ ಪೈಪೋಟಿ ತೆರೆಕಂಡರೂ ಮಹೇಶ್ ಬಾಬು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಾಣುವಲ್ಲಿ ಯಶಸ್ಸಾಗಿತ್ತು.
ಇದೇ ಫೆ.9 ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ ನೆಟ್ ಫ್ಲಿಕ್ಸ್ ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.
ಈ ಸಿನಿಮಾದಲ್ಲಿ ಶ್ರೀ ಲೀಲಾ, ಮೀನಾಕ್ಷಿ ಚೌಧರಿ, ಪ್ರಕಾಶ್ ರಾಜ್, ರಮ್ಯಾ ಕೃಷ್ಣ, ರಾವ್ ರಮೇಶ್, ಜಗಪತಿ ಬಾಬು, ಅಜಯ್ ಘೋಷ್ ಮುಂತಾದವರು ನಟಿಸಿದ್ದರು.