ಹೆಂಡತಿ ಕೋಪಗೊಂಡಾಗ ಏನು ಮಾಡಬೇಕು?: ಓವೈಸಿ ನೀಡಿದ ಸಲಹೆ ಇಲ್ಲಿದೆ
ಪುರುಷತ್ವವೆಂದರೆ...
Team Udayavani, Feb 4, 2024, 9:53 PM IST
ಹೈದರಾಬಾದ್ : ವಿವಾಹಿತ ಪುರುಷನು ತನ್ನ ಹೆಂಡತಿ ಕೋಪಗೊಂಡಾಗ ಅದಕ್ಕೆ ಪ್ರತಿಕ್ರಿಯಿಸುವ ಬದಲು ಮೌನವಾಗಿರಬೇಕು, ಏಕೆಂದರೆ ನಿಮ್ಮ ಹೆಂಡತಿಯನ್ನು ಹೊಡೆಯುವುದರಲ್ಲಿ ಅಥವಾ ಸಿಟ್ಟನ್ನು ಹೊರಹಾಕುವಲ್ಲಿ ಯಾವುದೇ ಪುರುಷತ್ವವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ವಿಡಿಯೋವನ್ನು ಹಂಚಿಕೊಂಡಿದ್ದು, ನಿಮ್ಮ ಹೆಂಡತಿಯ ಮೇಲೆ ನಿಮ್ಮ ಕೋಪವನ್ನು ಹೊರಹಾಕುವಲ್ಲಿ ಅಥವಾ ಹೊಡೆಯುವುದರಲ್ಲಿ ಯಾವುದೇ ಪೌರುಷವಿಲ್ಲ, ಆದರೆ ಕೋಪವನ್ನು ಸಹಿಸಿಕೊಳ್ಳುವುದರಲ್ಲಿ ಪೌರುಷವಿದೆ ಎಂದು ಹೇಳಿದರು.
“ಪುರುಷತ್ವವೆಂದರೆ ನಿಮ್ಮ ಹೆಂಡತಿಯ ಮೇಲೆ ಟೀಕೆಗಳನ್ನು ಮಾಡುವುದಲ್ಲ, ನಿಮ್ಮ ಹೆಂಡತಿ ಕೋಪಗೊಂಡಾಗ, ನೀವು ಸಹಿಸಿಕೊಳ್ಳಬೇಕು, ನೀವು ಪ್ರವಾದಿ ಮಹಮ್ಮದ್ ಅವರ ನಿಜವಾದ ಅನುಯಾಯಿಯಾಗಿದ್ದರೆ, ಹೇಳಿ, ಪ್ರವಾದಿಯವರು ತಮ್ಮ ಜೀವನದಲ್ಲಿ ಯಾವುದೇ ಮಹಿಳೆಯ ಮೇಲೆ ತಮ್ಮ ಕೈಗಳನ್ನು ಬಳಸಿದ್ದಾರೆಯೇ? “ಇಸ್ಲಾಂ ಮೇ ಖವಾತೀನ್ ಕಾ ಮಕಾಮ್’ (ಇಸ್ಲಾಂನಲ್ಲಿ ಮಹಿಳೆಯರ ಸ್ಥಾನ) ಎಂಬ ಕಾರ್ಯಕ್ರಮದಲ್ಲಿ ಹೈದರಾಬಾದ್ ಸಂಸದ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.