Modi ಹೆಸರಿನಲ್ಲಿ ಮತ ಹಾಕಿಸಿಕೊಂಡರೆ ಇದೇ ಹಣೆಬರಹ : ಮಧು ಬಂಗಾರಪ್ಪ ಕಿಡಿ
ಎಲ್ಲವೂ ಧರ್ಮಕ್ಕೆ ಜೋಡಣೆ... ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ಕಿಡಿ
Team Udayavani, Feb 4, 2024, 10:14 PM IST
ಶಿವಮೊಗ್ಗ :ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆಗೆ 50 ರೂ ಶುಲ್ಕ ಪಡೆಯುವುದು ಬಿಜೆಪಿ ಸರಕಾರ ಇದ್ದಾಗಲೇ ಆರಂಭವಾಗಿದೆ. ಈ ಮೊದಲು ಪರೀಕ್ಷಾ ಶುಲ್ಕ 60 ರೂಪಾಯಿ ಇತ್ತು, ನಾವು 10 ರೂಪಾಯಿ ಕಡಿಮೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾನುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಗೃಹಲಕ್ಷ್ಮೀ 2 ಸಾವಿರ ರೂ. ಕೊಟ್ಟು, ಗೃಹ ಜ್ಯೋತಿ ಕೊಟ್ಟು, ಫ್ರೀಯಾಗಿ ಬಸ್ಸಿನಲ್ಲಿ ಓಡಾಡಿಸುತ್ತಿದ್ದೇವೆ. ಹಿಂದಿನ ಸರಕಾರ ಪರೀಕ್ಷಾ ಶುಲ್ಕ 60 ರೂ. ಮಾಡಿದ್ದನ್ನು 50 ರೂ. ಗೆ ಇಳಿಸಿದ್ದೇವೆ. ಮುಂದೆ ಏನಾದರೂ ಇನ್ನೂ ಅನುಕೂಲ ಆದರೆ ಕಡಿಮೆ ಮಾಡುತ್ತೇವೆ. ಹುಡುಕುವ ಕೆಲಸವನ್ನು ನಿಲ್ಲಿಸಬೇಕು ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಉತ್ತರ ಕೊಡದಿರುವುದೇ ಒಳ್ಳೆಯದು. ಕುಮಾರಸ್ವಾಮಿ ಅವರು ಪ್ರಶ್ನೆ ಕೇಳುವ ಮೊದಲು ಸ್ವಲ್ಪ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲದಿರುವುದನ್ನು ಹುಡುಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಂತಹ ದಡ್ಡರು ಯಾರೂ ಇಲ್ಲ ಎಂದರು.
ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆ ವಿಜ್ಞಾನ ವಿಷಯ ಶುಕ್ರವಾರ ಮಧ್ಯಾಹ್ನ ನಡೆಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ,ಬಿಜೆಪಿಯವರು ಎಲ್ಲವನ್ನು ಜೋಡಣೆ ಮಾಡುವ ಕೆಲಸ ಮಾಡುತ್ತಾರೆ. ಕೆಲವು ಧರ್ಮಕ್ಕೆ ಒಲವು ತೋರಿಸುವ ಕೆಲಸ ಮಾಡಿದ್ದಾರೆ ಎಂಬ ಆಪಾದನೆ ಮಾಡಿದ್ದಾರೆ. ಕಳ್ಳನಿಗೆ ಒಂದು ಸುಳ್ಳು ನೆಪ ಬೇಕು ಅಂತಾರಲ್ಲ ಹಾಗೆ. ಬಿಜೆಪಿಯವರ ಅಂಗ ಸಂಸ್ಥೆ ಆರ್ ಎಸ್ ಎಸ್ ನವರ ಕೆಲಸ ಇದು ಎಂದು ಕಿಡಿ ಕಾರಿದರು.
ಆ ದಿನ ಪಿಯುಸಿ ಪರೀಕ್ಷೆ ಆರಂಭವಾಗುತ್ತದೆ. 1 ರಂದು ಬೆಳಗ್ಗೆ ಪಿಯುಸಿ ಪರೀಕ್ಷೆ ಇರುವುದರಿಂದ, ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ ಅಲ್ಲ, ಪೂರ್ವ ಸಿದ್ದತಾ ಪರೀಕ್ಷೆ ಆಗಿದ್ದರಿಂದ ಮಧ್ಯಾಹ್ನ ಮಾಡುತ್ತಿದ್ದೇವೆ. ಒಂದು ದಿನ ಮುಂದೆ ಹಾಕಬಹುದು ಅಂತಾ ಹೇಳಬಹುದು. ಒಂದು ದಿನ ಮುಂದೆ ಹಾಕಿದರೆ ಮೂರು ಮೂರು ಪರೀಕ್ಷೆ ಇರುವುದರಿಂದ ಸಮಸ್ಯೆ ಆಗುತ್ತದೆ. ಇಂತಹ ದುರುದ್ದೇಶ, ಯೋಚನೆ ಇವರಿಗೆ ಮಾತ್ರ ಸಾಧ್ಯ. ನೀವು ಏನಾದರೂ ಅಭಿವೃದ್ಧಿ ಕೆಲಸ ಮಾಡಿದರೆ ಅದನ್ನು ಹೇಳಿ. ನಮ್ಮ ಸರಕಾರ ಇದೆ. ನಮ್ಮ ಮಕ್ಕಳಿಗೆ ಅನುಕೂಲ ಆಗುವ ರೀತಿಯಲ್ಲಿ ನಮಗೆ ಆಡಳಿತ ನಡೆಸಲು ಬರುತ್ತದೆ. ಅದನ್ನು ನಾವು ಮಾಡುತ್ತೇವೆ ಎಂದು ಕಿಡಿ ಕಾರಿದರು.
ಫೆ.7 ರಂದು ಕೇಂದ್ರ ಸರಕಾರದ ವಿರುದ್ದ ದೆಹಲಿಯಲ್ಲಿ ಹೋರಾಟ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ”26 ಜನರನ್ನು ಇಲ್ಲಿಂದ ಗೆಲ್ಲಿಸಿಕೊಟ್ರಲ್ಲಾ, ಯಾರಾದರೂ ಒಬ್ಬರಾದರೂ ಕೇಂದ್ರ ಸರಕಾರದ ಬಳಿ ಒದರಿದ್ದಾರಾ? ರಾಮನ ತಂದು ಬೀದಿಗೆ ನಿಲ್ಲಿಸಿದರು ಇವರಿಗೆ ಮಾನ ಮರ್ಯಾದೆ ಇದೆಯಾ?” ಎಂದು ಪ್ರಶ್ನಿಸಿದರು.
ಬಂಗಾರಪ್ಪ ಅವರು 35 ವರ್ಷದ ಹಿಂದೆಯೇ ರಾಮನಿಗೆ ಆರಾಧನಾ ಎನ್ನುವ ಕಾರ್ಯಕ್ರಮ ಕೊಟ್ಟಿದ್ದರು. ಬಗರ್ ಹುಕುಂಗೆ ಯಾವೊಬ್ಬ ಸಂಸದ ಧ್ವನಿ ಎತ್ತಲ್ಲ. ಸರಕಾರದ ಹಣ 4 ಲಕ್ಷ ಕೋಟಿ ರೂ. ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಗಳು, ಮಂತ್ರಿಗಳು ಹೋಗಿ ಕೇಳುತ್ತಾರೆ. ಈಗ ಹೋಗಿ ಹೋರಾಟ ಮಾಡಬೇಕಾಗುತ್ತದೆ. ಯಾರಿಗಾದರೂ ತೊಂದರೆ ಆದರೆ ಹೋರಾಟ ಮಾಡುವುದಿಲ್ಲವಾ? ಹಾಗಾದರೆ ನಾವು ಹೋರಾಟ ಮಾಡೋದು ತಪ್ಪಾ? ಇವರಿಗಂತು ಯೋಗ್ಯತೆ ಇಲ್ಲ. ಮೋದಿ ಅವರ ಹೆಸರಿನಲ್ಲಿ ಮತ ಹಾಕಿಸಿಕೊಂಡರೆ ಇದೇ ಹಣೆಬರಹ ಆಗುವುದು. ಜನರ ಜೊತೆ ಇದ್ದವರ ಮುಖ ನೋಡಿ ಮತ ಹಾಕಬೇಕು. ಮೋದಿ ಅವರ ಹೆಸರನ್ನು ತಗೊಂಡು ಬರುತ್ತಾರಲ್ಲ ಇವರು. ನಾಳೆ ಮೋದಿ ಸಹಾಯ ಮಾಡಲ್ಲ ಅನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದ್ದು, ಅನಿವಾರ್ಯವಾಗಿ ಹೋರಾಟ ಮಾಡಬೇಕಿದೆ. ನಮ್ಮ ಕರ್ತವ್ಯ ಮಾಡಬೇಕಿದೆ. ನಾನು ಕೂಡಾ ಹೋಗುತ್ತಿದ್ದೇನೆ. ಅಲ್ಲಿ ಹೋಗಿ ಧ್ವನಿ ಎತ್ತುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.