![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 5, 2024, 1:08 PM IST
ಲಾಸ್ ಏಂಜಲೀಸ್: ಪ್ರತಿಷ್ಠಿತ 66ನೇ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿ ಲಾಸ್ ಏಂಜಲೀಸ್ ನ ಕ್ರಿಪ್ಟೋ.ಕಾಮ್ ಅರೆನಾದಲ್ಲಿ ನಡೆದಿದೆ. ಸಂಗೀತ ಲೋಕದ ದಿಗ್ಗಜ ಹಾಗೂ ನವ ಕಲಾವಿದರ ಸಾಧನೆಗೆ ಗ್ರ್ಯಾಮಿ ಗೌರವ ಸಂದಿದೆ.
ಕಾರ್ಯಕ್ರಮ ನಡೆಯುತ್ತಿರುವಾಗಲೇ ಮೂರು ಗ್ರ್ಯಾಮಿ ಗೆದ್ದು ಸಂಭ್ರಮದಲ್ಲಿದ್ದ ರ‍್ಯಾಪರ್ ರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ತನ್ನ ರ‍್ಯಾಪ್ ಹಾಡುಗಳಿಂದಲೇ ಜಾಗತಿಕವಾಗಿ ಮ್ಯೂಸಿಕ್ ಲೋಕದಲ್ಲಿ ಸದ್ದು ಮಾಡಿರುವ ಕಿಲ್ಲರ್ ಮೈಕ್ ಈ ವರ್ಷ ಗ್ರ್ಯಾಮಿ ಅವಾರ್ಡ್ಸ್ ನಲ್ಲಿ ಮೂರು ಗ್ರ್ಯಾಮಿಯನ್ನು ಗೆದ್ದಿದ್ದಾರೆ.
ಬೆಸ್ಟ್ ರ‍್ಯಾಪ್ ಪರ್ಫಾಮೆನ್ಸ್, ಬೆಸ್ಟ್ ರ‍್ಯಾಪ್ ಸಾಂಗ್, ಬೆಸ್ಟ್ ರ‍್ಯಾಪ್ ಆಲ್ಬಂ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ‘ಸೈಂಟಿಸ್ಟ್ಸ್ & ಇಂಜಿನಿಯರ್ಸ್’ ಗಾಗಿ ಬೆಸ್ಟ್ ರ‍್ಯಾಪ್ ಪರ್ಫಾಮೆನ್ಸ್, ಹಾಗೂ ಬೆಸ್ಟ್ ಬೆಸ್ಟ್ ರ‍್ಯಾಪ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಅವರ ‘ಮೈಕೆಲ್ʼ ಆಲ್ಬಂ ಬೆಸ್ಟ್ ರ‍್ಯಾಪ್ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.
ಈ ಹಿಂದೆ 2003 ರಲ್ಲಿ ಅವರು ‘ದಿ ಹೋಲ್ ವರ್ಲ್ಡ್ʼ ಆಲ್ಬಂಗಾಗಿ ಗ್ರ್ಯಾಮಿ ಗೆದಿದ್ದರು.
ಗ್ರ್ಯಾಮಿ ಕಾರ್ಯಕ್ರಮದ ಭದ್ರತಾ ಸಿಬ್ಬಂದಿಯೊಂದಿಗೆ ಮೈಕ್ ಅವರು ವಾಗ್ವಾದ ನಡೆಸಿದ್ದಾರೆ. ಈ ವಾಗ್ವಾದ ದೈಹಿಕ ಹಲ್ಲೆಯತ್ತ ಸಾಗಿದ್ದು, ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಶಸ್ತಿ ಗೆದ್ದ ಬಳಿಕ ವೇದಿಕೆಯಲ್ಲಿ ಮಾತನಾಡಿದ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಮೈಕ್ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ರ‍್ಯಾಪ್ ವೃತ್ತಿ ಜೀವನದ ಹೊರತಾಗಿ ಮೈಕ್ ಕಪ್ಪು ಜನರ ಅಸಮಾನತೆಯ ವಿರುದ್ಧವೂ ಅವರು ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಕಪ್ಪು ಜನ ಸಮುದಾಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು 2019 ರ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘ಟ್ರಿಗ್ಗರ್ ವಾರ್ನಿಂಗ್ ವಿಥ್ ಕಿಲ್ಲರ್ ಮೈಕ್’ ಸರಣಿಯ ನಿರೂಪಕರಾಗಿಯೂ ಅವರು ಕಾಣಿಸಿಕೊಂಡಿದ್ದರು.
Rapper Killer Mike has been arrested at the #GRAMMYs after winning three awards.
— Pop Base (@PopBase) February 5, 2024
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.