Jharkhand; ವಿಶ್ವಾಸಮತ ಗೆದ್ದ ಚಂಪೈ ಸೊರೇನ್; 47 ಶಾಸಕರ ಬೆಂಬಲ


Team Udayavani, Feb 5, 2024, 2:32 PM IST

Champai Soren

ರಾಂಚಿ: ಝಾರ್ಖಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಚಂಪೈ ಸೊರೇನ್ ಅವರು ಇಂದು ನಡೆದ ವಿಶ್ವಾಸಮತದಲ್ಲಿ ವಿಜಯ ಸಾಧಿಸಿದ್ದಾರೆ. ಈ ಮೂಲಕ ಜೆಎಂಎಂ ಸರ್ಕಾರವು ದೊಡ್ಡ ಗೆಲುವು ಪಡೆದಿದೆ.

ವಿಶ್ವಾಸಮತದ ವೇಳೆ ಒಟ್ಟು 47 ಸಮ್ಮಿಶ್ರ ಶಾಸಕರು ಚಂಪೈ ಸೊರೇನ್ ಸರ್ಕಾರವನ್ನು ಬೆಂಬಲಿಸಿದರು. 29 ಮತಗಳು ಸೊರೇನ್ ವಿರುದ್ಧ ದಾಖಲಾಯಿತು.

ಚಂಪೈ ಸೊರೇನ್ ಅವರ ವಿಜಯವನ್ನು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಘೋಷಿಸಿದರು. ಇದನ್ನು ಜಾರ್ಖಂಡ್ ವಿಧಾನಸಭೆಯಲ್ಲಿ ಭಾರೀ ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತದ ಅಂಕ 41 ಆಗಿದ್ದು, ಇಂದಿನ ಸದನಕ್ಕೂ ಮುನ್ನ ಚಂಪೈ ಸೊರೇನ್ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ಗೆ 47 ಶಾಸಕರ ಬೆಂಬಲವಿದ್ದು, ಅದು 50ಕ್ಕೆ ಹೆಚ್ಚಾಗಬಹುದು ಎಂದು ಹೇಳಿದ್ದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಜೆಎಂಎಂ ನಾಯಕ, ಮಾಜಿ ಸಿಎಂ ಹೇಮಂತ್‌ ಸೊರೇನ್‌ ಬಂಧನವಾದ ಬಳಿಕ ಚಂಪೈ ಅವರು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದರು. ರಾಜ್ಯಪಾಲರು ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು 10 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ ಹೆಚ್ಚು ದಿನ ಕಳೆದರೆ ಶಾಸಕರ ಖರೀದಿ ನಡೆಯಬಹುದು ಎಂಬ ಭೀತಿಯಿಂದ ಚಂಪೈ ಅವರು ಫೆ. 5ರಂದೇ ವಿಶ್ವಾಸಮತ ಸಾಬೀತುಪಡಿಸುವುದಾಗಿ ಘೋಷಿಸಿದ್ದರು. ರೆಸಾರ್ಟ್‌ನಲ್ಲಿದ್ದ ಜೆಎಂಎಂ ಪಕ್ಷದ ಶಾಸಕರು ಸೋಮವಾರ ವಿಶ್ವಾಸ ಮತ ಹಿನ್ನೆಲೆಯಲ್ಲಿ ರವಿವಾರವೇ ರಾಂಚಿಗೆ ವಾಪಸಾಗಿದ್ದರು.

ಟಾಪ್ ನ್ಯೂಸ್

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.