Kunigal: ಟಾಟಾ ಎಸ್- ಕಾರು ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Team Udayavani, Feb 5, 2024, 2:40 PM IST
ಕುಣಿಗಲ್: ಟಾಟಾ ಎಸ್ ಹಾಗೂ ಕಾರು ನಡುವೆ ಡಿಕ್ಕಿ ಸಂಬವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಬೇಗೂರು ಬೈಪಾಸ್ ನಲ್ಲಿ ಫೆ.5ರ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಹಾಸನ ಜಿಲ್ಲೆ ಚನ್ನರಾಚಪಟ್ಟಣ ತಾಲೂಕು ಗುಳ್ಳೆನಹಳ್ಳಿ ಮಟ್ಟಿನವಿಲೆ ಅಣ್ಣೇಗೌಡ (38) ಹಾಗೂ ಕಾರು ಚಾಲಕ ನಿರಂಜನ್ ಮೃತಪಟ್ಟಿದ್ದಾರೆ.
ಸ್ವಾಮಿ ಅಲಿಯಾಸ್ ಪುಟ್ಟ ತೀವ್ರ ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅದಿಚುಂಚನಗಿರಿಗೆ ಕಳುಹಿಸಿ ಕೊಡಲಾಗಿದೆ. ಟಾಟಾ ಎಸ್ ಚಾಲಕ ಬಾಗಲಕೋಟೆ ಮೂಲದ ಪರಸಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ,
ಘಟನೆ ವಿವರ: ಅಣ್ಣೇಗೌಡ ಹಾಗೂ ಇನ್ನಿತ್ತರರು ಹಾಸನದಿಂದ ಬೆಂಗಳೂರು ಕಡೆಗೆ ಹೊಗುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ತಾಲೂಕಿನ ಕಾಮತ್ ಹೋಟೆಲ್ ಕಡೆಗೆ ಬರುತ್ತಿದ್ದ ಟಾಟಾ ಎಸ್ ಗೋಡ್ಸ್ ಗಾಡಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಟಾಟಾ ಎಸ್ ಅಡ್ಡ ಬಂದ ಪರಿಣಾಮ ಕಾರು ಟಾಟಾ ಎಸ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಬವಿಸಿದೆ ಎನ್ನಲಾಗಿದೆ.
ವೃತ್ತ ನಿರೀಕ್ಷಕ ನವೀನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
Minister V. Somanna ಹಾಲಿನ ದರ ಏರಿಕೆ ಗ್ಯಾರಂಟಿಗೆ ಬಳಸಿದ್ರೆ ವಿರೋಧ
Tumkur ಕೊಟ್ಟಿಗೆಗೆ ನುಗ್ಗಿದ 5 ಚಿರತೆಗಳು: 32 ಕುರಿಗಳ ಸಾವು
BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ
Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.