Ramnagarರಾಜ್ಯದ ಬಿಜೆಪಿ ಸಂಸದರು, ಮಂತ್ರಿಗಳು ಶೋಪೀಸ್‌ಗಳು: ಎಚ್.ಸಿ.ಬಾಲಕೃಷ್ಣ
ಬಿಜೆಪಿಯ ಗಂಡಸರು ಹೋರಾಟ ಮಾಡ್ತಾರಾ ನೋಡೋಣ: ಶಾಸಕ
Team Udayavani, Feb 5, 2024, 9:19 PM IST
ರಾಮನಗರ: ರಾಜ್ಯದ ಬಿಜೆಪಿ ಸಂಸದರು ಮತ್ತು ಕೇಂದ್ರ ಮಂತ್ರಿಗಳು ಶೋಪೀಸ್‌ಗಳಾಗಿದ್ದು, ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇಲ್ಲ. ಅವರು ಕೇವಲ ಟಿಎ, ಡಿಎ ಪಡೆದುಕೊಳ್ಳಲು ದೆಹಲಿಗೆ ಹೋಗಿ ಬರುತ್ತಾರೆ ಎಂದು ಕೆಆರ್‌ಡಿಸಿಎಲ್ ಅಧ್ಯಕ್ಷ ಹಾಗೂ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಟೀಕಿಸಿದರು.
ತಾಲೂಕಿನ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಯಾವ ಸಂಸದರೂ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿಲ್ಲ. ಎಲ್ಲರೂ ಮೋದಿ ಹೆಸರಿನಲ್ಲಿ ಗೆದ್ದಿದ್ದಾರೆ. ಈ ಕಾರಣಕ್ಕಾಗಿ ಅವರು ಮೋದಿ ಎದುರು ಕೂರುವುದೂ ಇಲ್ಲ, ನಿಲ್ಲುವುದೂ ಇಲ್ಲ. ರಾಜ್ಯದ ಪರವಾಗಿ ದನಿ ಎತ್ತುವುದೂ ಇಲ್ಲ. ನೆರೆಯ ತಮಿಳುನಾಡಿನ ಎಂಪಿಗಳನ್ನು ನೋಡಿ ರಾಜ್ಯದ ಹಿತಾಸಕ್ತಿಯನ್ನು ಯಾವ ರೀತಿ ಕಾಯಬೇಕು ಎಂಬುದನ್ನು ಕಲಿಯಲಿ ಎಂದು ಸಲಹೆ ನೀಡಿದರು.
ಬಿಜೆಪಿಯಲ್ಲಿ ಗಂಡಸರಿಲ್ಲ: ದೇಶದಲ್ಲೇ ಅತಿಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ ನಮ್ಮದಾಗಿದ್ದು, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಕಾರಣದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ಪಾಪ ನಮ್ಮ ಹೋರಾಟ ನೋಡಿ ಬಿಜೆಪಿಯ ಗಂಡಸರು ಹೋರಾಟ ಮಾಡ್ತಾರಾ ನೋಡೋಣ. ಇದರ ಅರ್ಥ ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ ಅಂತ ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.