ಬಜಪೆ: ಸಂತೆಗೆ ಹಲಸಿನ ಹಣ್ಣು ಲಗ್ಗೆ, ಬ್ಯಾಡಿಗಿ ಮೆಣಸಿನ ದರ ಇಳಿಕೆ
Team Udayavani, Feb 6, 2024, 3:38 PM IST
ಬಜಪೆ: ಇಲ್ಲಿನ ಸೋಮವಾರ ಸಂತೆಯಲ್ಲಿ ಈಗ ಹೆಚ್ಚು ಹೊಸ ಮಳಿಗೆಗಳು ಬರಲಾರಂಭಿಸಿವೆ. ಈ ಬಾರಿಯ ವಿಶೇಷವಾಗಿ ಕೊಯಮುತ್ತೂರು ಹಾಗೂ ಮಡಿಕೇರಿಯ ಹಲಸಿನ ಹಣ್ಣು ಲಗ್ಗೆಯಿಟ್ಟಿದ್ದು, ಗ್ರಾಹಕರನ್ನು ಆಕರ್ಷಿಸಿದೆ.
ಸ್ಥಳೀಯವಾಗಿ ಹಲಸಿನ ಗುಜ್ಜೆ (ಎಳೆ ಹಲಸಿನ ಕಾಯಿ) ಮಾತ್ರ ಲಭ್ಯವಿರುವ ಕಾರಣ ಸಂತೆಯಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿರುವುದನ್ನು ಕಂಡ ಜನರು ದರದ ಬಗ್ಗೆ ಹೆಚ್ಚು ಚಿಂತೆ ಮಾಡದೇ ಹೊಸರುಚಿಯನ್ನು ಸವಿದು ಸಂಭ್ರಮಿಸಿದರು.
ಕೊಯಮುತ್ತೂರು ಕೆ.ಜಿ.ಗೆ 80ರಿಂದ 120 ರೂಪಾಯಿ, ಮಡಿಕೇರಿ ಕೆ.ಜಿ.ಗೆ 30 ರೂಪಾಯಿಯಂತೆ ಹಲಸಿನ ಹಣ್ಣುನ್ನು ಸೀಳಿ
ಸೊಳೆಯನ್ನು ತೆಗೆದು ಮಾರುತ್ತಿದ್ದರು.
ಇಳಿಕೆ ಕಂಡ ಬ್ಯಾಡಿಗಿ ಮೆಣಸಿನ ದರ
ಬ್ಯಾಡಿಗಿ ಮೆಣಸಿನ ದರ ಈ ಬಾರಿ ಇಳಿಕೆಯತ್ತ ಮುಖ ಮಾಡಿದೆ. ಮೊದಲ ದರ್ಜೆ ಮೆಣಸಿಗೆ 320 ರೂ., ದ್ವಿತೀಯ ದರ್ಜೆ 270 ರೂ., ಇತರ ಮೆಣಸು 200 ರೂ. ಯಂತೆ ಮಾರಾಟವಾಗುತ್ತಿತ್ತು.
ದ್ರಾಕ್ಷಿ 1.5 ಕೆ.ಜಿ.ಗೆ 100 ರೂಪಾಯಿ ಸಿಡ್‌ಲೆಸ್ ದ್ರಾಕ್ಷಿ 1 ಕೆ.ಜಿಗೆ 70 ರೂಪಾಯಿ, 1.5 ಕೆ.ಜಿ.ಗೆ 100 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಜ್ವರ, ಶೀತ, ಕೆಮ್ಮು ಹಲವಡೆ ಇರುವ ಕಾರಣ ಇದನ್ನು ತೆಗೆದುಕೊಳ್ಳಲು ಕೆಲವರು ಹಿಂಜರಿಯುತ್ತಿದ್ದರು.
ರಸ್ತೆ ಬದಿ ಟೆಂಪೊದಲ್ಲಿ ಧ್ವನಿವರ್ಧಕ ಬಳಸಿ 100 ರೂಪಾಯಿಗೆ 5 ಕೆ.ಜಿ. ಈರುಳ್ಳಿ ಮಾರಾಟ ಮಾಡುತ್ತಿದ್ದರೆ, ಸಂತೆಯೊಳಗೆ
4 ಕೆ.ಜಿ.ಗೆ 100 ರೂಪಾಯಿಯಂತೆ ಮಾರಾಟವಾಗುತ್ತಿರುವುದು ಕಂಡು ಬಂದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ಬಾರಿ ಟೊಮೇಟೊ ದರ ಕೊಂಚ ಏರಿಕೆ ಕಂಡಿದೆ. ಕೆಲವೆಡೆ ಕೆ.ಜಿ.ಗೆ 30 ರೂ. ಇನ್ನೂ ಕೆಲವೆಡೆ ಕೆ.ಜಿ.ಗೆ 40 ರೂ.ಗೆ ಮಾರಾಟ
ಮಾಡಲಾಗುತ್ತಿತ್ತು.
ಈಗ ಬಸಳೆ ಧಾರಾಳವಾಗಿ ಮಾರುಕಟ್ಟೆಗೆ ಬರಬೇಕಿತ್ತು. ಈ ಭಾರಿ ಕೆಲವೆಡೆ ಹಳದಿ ರೋಗ ಬಂದ ಕಾರಣ ಇಳುವರಿ
ಕಡಿಮೆಯಾಗಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಹಾಗಾಗಿ ದರ ಕಳೆದ ವಾರದಷ್ಟೇ ಇದ್ದು, ಕಟ್ಟೊಂದಕ್ಕೆ 80 ರೂ.
ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೃಷಿಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.