Natural Gas: ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ 5.56 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ
ಆರ್ಥಿಕ ಅಗತ್ಯತೆ ಪೂರೈಸಲು ಇಂಧನ ವಲಯ ಮಹತ್ವದ್ದು
Team Udayavani, Feb 6, 2024, 10:05 PM IST
ಪಣಜಿ: ನೈಸರ್ಗಿಕ ಅನಿಲ ಸರಬರಾಜು ವಲಯದಲ್ಲಿ ಮುಂದಿನ 5-6 ವರ್ಷಗಳಲ್ಲಿ ಭಾರತಕ್ಕೆ 5.56 ಲಕ್ಷ ಕೋಟಿ ರೂ. ಹೂಡಿಕೆ ಹರಿದುಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪಣಜಿಯಲ್ಲಿ ನಡೆದ ಮಾತನಾಡಿದ ಅವರು, “ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಅಗತ್ಯಗಳನ್ನು ಪೂರೈಸಲು ಇಂಧನ ವಲಯಕ್ಕೆ ಹರಿದುಬರುವ ಹೂಡಿಕೆಯ ಭಾಗ ಇದಾಗಿದೆ ಎಂದರು. “ವಿಶ್ವದಲ್ಲೇ ಭಾರತವು ಮೂರನೇ ಅತಿದೊಡ್ಡ ಇಂಧನ, ತೈಲ ಮತ್ತು ಎಲ್‌ಪಿಜಿ ಬಳಕೆದಾರ ರಾಷ್ಟ್ರವಾಗಿದೆ.ನಾಲ್ಕನೇ ಅತಿದೊಡ್ಡ ಎಲ್‌ಎನ್‌ಜಿ(ದ್ರವೀಕೃತ ನೈಸರ್ಗಿಕ ಅನಿಲ) ಆಮದುದಾರ ದೇಶವಾಗಿದೆ ಎಂದರು.
ಎಲ್‌ಎನ್‌ಜಿ ಖರೀದಿಗೆ ಕತಾರ್ ಜತೆಗೆ 6.47 ಲಕ್ಷ ಕೋಟಿ ರೂ.ಒಪ್ಪಂದ
ಪ್ರಸ್ತುತ ಇರುವ ದರಕ್ಕಿಂತ ಕಡಿಮೆ ದರದಲ್ಲಿ 2048 ವರ್ಷದವರೆಗೆ ಕತಾರ್‌ನಿಂದ ಎಲ್‌ಎನ್‌ಜಿ ಆಮದನ್ನು ಮಾಡಿಕೊಳ್ಳಲು 6.47 ಲಕ್ಷ ಕೋಟಿ ರೂ.ಮೌಲ್ಯದ ಒಪ್ಪಂದವನ್ನು ಭಾರತ ಮಾಡಿಕೊಳ್ಳಲಿದೆ. ವಿದ್ಯುತ್ ಉತ್ಪಾದಿಸಲು, ರಸಗೊಬ್ಬರಗಳನ್ನು ತಯಾರಿಸಲು ಮತ್ತು ಸಿಎನ್‌ಜಿಗೆ ಪರಿವರ್ತಿಸಲು ವರ್ಷಕ್ಕೆ 7.5 ಮಿಲಿಯನ್ ಟನ್ ಅನಿಲವನ್ನು ಖರೀದಿಸುವ 2004ರ ಒಪ್ಪಂದವನ್ನು ವಿಸ್ತರಿಸಲು ಕತಾರ್ ಎನರ್ಜಿಯೊಂದಿಗೆ ಪೆಟ್ರೊನೆಟ್ ಎಲ್‌ಎನ್‌ಜಿ ಲಿ. ಒಪ್ಪಂದಕ್ಕೆ ಸಹಿ ಹಾಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.