![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 7, 2024, 11:30 AM IST
ಬೆಂಗಳೂರು: ಪರಿಚಯಸ್ಥ ಮಹಿಳೆಯೊಬ್ಬರ ಮನೆ ಬಳಿ ಹೋಗಿ ಗಾಳಿಯಲ್ಲಿ ಗುಂಡು ಹಾರಿಸಿದ ನಿವೃತ್ತ ಸೈನಿಕನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.
ಅಬ್ಬಿಗೆರೆ ನಿವಾಸಿ ಪರುಶುರಾಮ್(58) ಬಂಧಿತ ನಿವೃತ್ತ ಸೈನಿಕ.
ಆರೋಪಿ ಪರಶುರಾಮ್ ಅಬ್ಬಿಗೆರೆಯ ಲಕ್ಷ್ಮಮ್ಮ ಲೇಔಟ್‌ನಲ್ಲಿರುವ ಮಹಿಳೆ ಯೊ ಬ್ಬರ ಜತೆ ಆತ್ಮೀಯತೆ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ಆಕೆ ಮನೆ ಬಳಿ ಹೋಗಿದ್ದಾನೆ. ಅದೇ ವೇಳೆ ಮಹಿಳೆಯ ಮಗ ಸೂರಜ್, ಆರೋಪಿಯನ್ನು ಗಮನಿಸಿ, “ಈ ಹೊತ್ತಿನಲ್ಲಿ ನಮ್ಮ ಮನೆ ಬಳಿ ಏಕೆ ಬಂದಿದ್ದಿರಾ’ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ಪರುಶುರಾಮ್, ಸೂರಜ್‌ನನ್ನು ಹೆದರಿಸಲು ತನ್ನ ಬಳಿಯಿದ್ದ ಪರವಾನಗಿ ಪಡೆದ ರಿವಾಲ್ವರ್‌ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಗುಂಡಿನ ಶಬ್ದದಿಂದ ಸೂರಜ್ ಮನೆಯವರು ಹಾಗೂ ಅಕ್ಕ-ಪಕ್ಕದ ಮನೆಯವರು ಹೊರಗಡೆ ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.