Tv Show: ಸಿಹಿಕಹಿ ಚಂದ್ರು ʼಬೊಂಬಾಟ್ ಭೋಜನʼದಲ್ಲಿ ʼಬೆಳ್ಳುಳ್ಳಿ ಕಬಾಬ್ʼ ಖ್ಯಾತಿಯ ಚಂದ್ರು
Team Udayavani, Feb 7, 2024, 12:44 PM IST
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಭಾರೀ ವೈರಲ್ ಆಗುತ್ತಿರುವ ʼಬೆಳ್ಳುಳ್ಳಿ ಕಬಾಬ್ʼ ಚಂದ್ರು ಸಿಹಿಕಹಿ ಚಂದ್ರು ನಡೆಸಿಕೊಡುವ ಜನಪ್ರಿಯ ಅಡುಗೆ ಕಾರ್ಯಕ್ರಮ ʼಬೊಂಬಾಟ್ ಭೋಜನʼ ದಲ್ಲಿ ಭಾಗಿಯಾಗಿದ್ದಾರೆ.
ತನ್ನ ಅಡುಗೆಯ ಕೈ ರುಚಿಯಿಂದಲೇ ಜನಪ್ರಿಯವಾಗಿರುವ ಸಿಹಿಕಹಿ ಚಂದ್ರು ಅವರು ಸ್ಟಾರ್ ಸುವರ್ಣದಲ್ಲಿ ʼಬೊಂಬಾಟ್ ಭೋಜನʼ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಕಿರುತೆರೆ ಹಾಗೂ ಕೆಲ ಸೆಲೆಬ್ರಿಟಿಗಳು ಸಿಹಿಕಹಿ ಚಂದ್ರು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮನೆಯ ಅಡುಗೆಯಂತೆ ಚಂದ್ರು ಅವರ ಅಡುಗೆ ಮನೆಯಲ್ಲಿ ಕೈರುಚಿಯ ಆಹಾರವನ್ನು ತಯಾರಿಸುತ್ತಾರೆ. ಅಡುಗೆಯ ಜೊತೆ ಮಾತುಕತೆಯೂ ಸಾಗುವುದರಿಂದ ಈ ಕಾರ್ಯಕ್ರಮಕ್ಕೆ ಪ್ರತ್ಯೇಕ ವೀಕ್ಷಕರ ಬಳಗವೇ ಇದೆ.
ಸೋಶಿಯಲ್ ಮೀಡಿಯಾದಲ್ಲಿ ʼರಾಹುಲಾ ಅಲ್ಲಾಡ್ಸಪ್ಪʼ, ರಾಹುಲಾ ಸ್ವಲ್ಪ ಕುಟ್ಟಿ ಕೊಡಪ್ಪ ರಾಜಾʼ, ʼಒನ್ ಮೂರ್ ಒನ್ ಅಂತಾ ಇರಬೇಕುʼ ಎಂದೇ ಫೇಮಸ್ ಆಗಿರುವ ʼಬೆಳ್ಳುಳಿ ಕಬಾಬ್ʼ ಖ್ಯಾತಿಯ ಚಂದ್ರು ಅವರು ʼಬೊಂಬಾಟ್ ಭೋಜನ ಸೀಸನ್ -4 ನಲ್ಲಿ ಕಾಣಿಸಿಕೊಂಡಿದ್ದಾರೆ.
ಫುಟ್ ಪಾತ್ ನಿಂದ ವ್ಯಾಪಾರ ಆರಂಭಿಸಿ, ಇಂದು ʼನಿಮ್ಮ ಮನೆ ಚಂದ್ರು ಫ್ಯಾಮಿಲಿ ರೆಸ್ಟೋರೆಂಟ್ʼ ಇಟ್ಟುಕೊಂಡಿರುವ ದಿನಗಳ ಸಂಗತಿಯನ್ನು ಕೂಡ ಚಂದ್ರು ʼಬೊಂಬಾಟ್ ಭೋಜನʼ ದಲ್ಲಿ ಹಂಚಿಕೊಂಡಿದ್ದಾರೆ.
ಸಿಹಿಕಹಿ ಚಂದ್ರು ಅವರಿಗೆ ಅಡುಗೆಯನ್ನು ಮಾಡಿ, ಚಂದ್ರು ಅವರು ತಮ್ಮ ಕೈರುಚಿಯನ್ನು ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ.
ಚಂದ್ರು ಅವರು ಅಡುಗೆ ಮಾಡುವುದರ ಜೊತೆ ಅದರ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುತ್ತಾರೆ. ಅವರ ಅಡುಗೆಯಂತೆ ಅವರ ಮಾತಿನ ಶೈಲಿಯೂ ಬಹಳ ಫೇಮಸ್ ಆಗಿದೆ. ಇದರೊಂದಿಗೆ ಅವರೊಂದಿಗೆ ಕೆಲಸ ಮಾಡುವ ರಾಹುಲ್ ಕೂಡ ʼರಾಹುಲಾ ಅಲ್ಲಾಡ್ಸಪ್ಪʼ ಎಂದು ಹೇಳಿ ಹೇಳಿಯೇ ಫೇಮಸ್ ಆಗಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.