![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 7, 2024, 11:01 PM IST
ಬೆಂಗಳೂರು: ದಿಲ್ಲಿಯ ಜಂತರ್ ಮಂತರ್‌ನಲ್ಲಿ ಅನುದಾನಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ಹೊರಾಟ ನಡೆಸಿದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಕೇಂದ್ರ ಬಿಜೆಪಿ ತೆರಿಗೆ ಏಟು ನೀಡಿದೆ.
ಕರ್ನಾಟಕ ರಾಜ್ಯವು ವಾಸ್ತವವಾಗಿ ಸಂಗ್ರಹಿಸುವುದಕ್ಕಿಂತ ಕಡಿಮೆ ತೆರಿಗೆ ಆದಾಯವನ್ನು ಪಡೆಯುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯರ ಆರೋಪ ಸುಳ್ಳು ಎಂದಿರುವ ಬಿಜೆಪಿ, ತೆರಿಗೆ ಸಂಗ್ರಹಣೆಯ ಕಾರ್ಯವಿಧಾನಗಳ ತಪ್ಪು ತಿಳಿವಳಿಕೆಯಿಂದಲೂ ಈ ರೀತಿ ಆರೋಪಿಸಿರಬಹುದು ಅಥವಾ ಚುನಾವಣ ಭರವಸೆಗಳನ್ನು ಈಡೇರಿಸಲಾರದ ಅಸಮರ್ಥತೆಯನ್ನು ಸಮರ್ಥಿಸಿಕೊಳ್ಳಲು ಹೀಗೆ ಆರೋಪಿಸುತ್ತಿರಬಹುದು ಎಂದಿದೆ.
ಇದೇ ತರ್ಕವನ್ನು ಕರ್ನಾಟಕಕ್ಕೆ ಅನ್ವಯಿಸುವುದಾದರೆ ಬೆಂಗಳೂರಿನಲ್ಲಿ ಅತೀ ಹೆಚ್ಚು ತೆರಿಗೆ ಸಂಗ್ರಹಣೆ ಆಗುತ್ತದೆ. ಹಾಗೆಂದು ಉಳಿದ ಜಿಲ್ಲೆಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂದರ್ಥವೇ? ಎಂದು ಪ್ರಶ್ನಿಸಿದೆ. ವಿಭಜನೆಯನ್ನು ಉತ್ತೇಜಿಸುವ, ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಜನರಲ್ಲಿ ಪ್ರತ್ಯೇಕತಾ ಭಾವ ಹುಟ್ಟುಹಾಕಲು ಇಂತಹ ವಾದಗಳನ್ನು ಮಾಡಲಾಗುತ್ತಿದೆ. ತುಕೆx ಗ್ಯಾಂಗ್ ಜತೆಗಿನ ಇಂತಹ ತಂತ್ರಗಳು ಏಕತೆಯನ್ನು ಹಾಳು ಮಾಡುವುದಲ್ಲದೆ, ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ಉಂಟು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.
ಯಾವ ರಾಜ್ಯಕ್ಕೂ ವಿಶೇಷ ಅನುದಾನ ಶಿಫಾರಸು ಮಾಡಿಲ್ಲ
15ನೇ ಹಣಕಾಸು ಆಯೋಗವು 2021-22ರಿಂದ 2025-26ರ ವರೆಗಿನ ತನ್ನ ಅಂತಿಮ ವರದಿಯಲ್ಲಿ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ. 2020-21ನೇ ಸಾಲಿನಿಂದ ಕರ್ನಾಟಕಕ್ಕೆ ಬಂಡವಾಳ ವೆಚ್ಚದ ಯೋಜನೆಗಳಿಗೆ ಸಹಾಯ ಮಾಡಲು 6,279.94 ಕೋಟಿ ರೂ. ಸಾಲವನ್ನು 50 ವರ್ಷಗಳಿಗೆ ಬಡ್ಡಿ ರಹಿತವಾಗಿ ನೀಡಿದೆ ಎಂದು ಹೇಳಿದೆ.
18,005 ಕೋಟಿ ರೂ. ಹೆಚ್ಚುವರಿ ಅನುದಾನ
2014-24 ರವರೆಗೆ ಕರ್ನಾಟಕಕ್ಕೆ 2,85,452 ಕೋಟಿ ರೂ.ಗಳ ತೆರಿಗೆ ಹಂಚಿಕೆಯನ್ನು ಕೇಂದ್ರ ಸರಕಾರ ಮಾಡಿದ್ದು, ಇದು 2004-14ರ ಅವಧಿಯಲ್ಲಿದ್ದ ಯುಪಿಎ ಸರ್ಕಾರಕ್ಕಿಂತ ಶೇ. 3.5ರಷ್ಟು ಹೆಚ್ಚು. 2014-23ರ ವರೆಗೆ 2,08,832 ಕೋಟಿ ರೂ.ಗಳನ್ನು ಎನ್‌ಡಿಎ ಸರಕಾರ ಬಿಡುಗಡೆ ಮಾಡಿದ್ದರೆ, 2004-14ರ ವರೆಗೆ ಇದ್ದ ಯುಪಿಎ ಸರಕಾರ 60,779 ಕೋಟಿ ರೂ. ಬಿಡುಗಡೆ ಮಾಡಿತ್ತು. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ 18,005 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವ ಪ್ರಸ್ತಾವ ಮಾಡಿದೆ. ಇದಲ್ಲದೆ 10 ವರ್ಷದಲ್ಲಿ ಎನ್‌ಡಿಎ ಸರಕಾರ ಕೊಟ್ಟ ಸಹಾಯಾನುದಾನದ ಮೊತ್ತವೇ 2,26,837 ಕೋಟಿ ರೂ. ಆಗಿದೆ ಎಂದು ಬಿಜೆಪಿ ಹೇಳಿದೆ.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.