Udupi: ನಾಳೆ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ
Team Udayavani, Feb 8, 2024, 12:11 AM IST
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಫೆ. 9ರಂದು ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಮಧ್ವಮಂಟಪದಲ್ಲಿ ಕಾತ್ಯಾಯಿನಿ ವಿಪ್ರ ಭಜನ ಮಂಡಳಿಯ ಸದಸ್ಯರಿಂದ ಭಜನೆ, ಅಪರಾಹ್ನ 3ಕ್ಕೆ ರಾಜಾಂಗಣದಲ್ಲಿ ಮಣಿಪಾಲ ಸುಗುಣಶ್ರೀ ಭಜನ ಮಂಡಳಿಯಿಂದ “ಶ್ರೀ ಪುರಂದರ ವಿಟ್ಠಲ” ಶತಕಂಠ ಗಾಯನ, ಸಂಜೆ 4.30ಕ್ಕೆ ರಥಬೀದಿ ಯಲ್ಲಿ ಪುರಂದರದಾಸರ ಕೃತಿಗಳ ಶೋಭಾಯಾತ್ರೆ, 5.30ಕ್ಕೆ ರಾಜಾಂಗಣದಲ್ಲಿ ವಿ| ವೆಂಕಟ ನರಸಿಂಹಾಚಾರ್ ಜೋಷಿ ಹುಬ್ಬಳ್ಳಿ ಅವರಿಂದ “ಪುರಂದರೋಪನಿಷತ್’ ವಿಶೇಷ ಪ್ರವಚನ ನೆರವೇರಲಿದೆ.
ಸಂಜೆ 6.30 ಗಂಟೆಗೆ ನಡೆಯುವ ಪುರಂದರದಾಸರ ಕೀರ್ತನೆಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು, ಶ್ರೀ ಸುಶ್ರೀಂದ್ರತೀರ್ಥ ಶ್ರೀ ಪಾದರು ಅನುಗ್ರಹ ಸಂದೇಶ ನೀಡು ವರು. 7ಕ್ಕೆ ಹಿಂದೂಸ್ತಾನಿ ಗಾಯಕ ಪ್ರದೀಪ್ ಸಪ್ತಸ್ವರ ಕುಕ್ಕುಡೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಜರಗ ಲಿದೆ ಎಂದು ಶ್ರೀ ಪುತ್ತಿಗೆ ಮಠದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.