US; ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಹಿಂದಿದೆಯೇ ದ್ವೇಷ?
40 ದಿನಗಳಲ್ಲಿ 5ನೇ ವಿದ್ಯಾರ್ಥಿ ಸಾವು... ನಿಗೂಢ ಸಾವಿನ ಬಗ್ಗೆ ಹಲವು ಪ್ರಶ್ನೆ
Team Udayavani, Feb 8, 2024, 6:35 AM IST
ಜಗತ್ತಿನ ದೊಡ್ಡಣ್ಣನೆಂದೇ ಖ್ಯಾತವೆತ್ತ ಅಮೆರಿಕಕ್ಕೆ ಉನ್ನತ ವಿದ್ಯಾಭ್ಯಾಸದ ಕನಸನ್ನು ಹೊತ್ತು ಕಾಲಿಟ್ಟ ಭಾರತೀಯ ವಿದ್ಯಾರ್ಥಿಗಳ ಪೈಕಿ ಹಲವಾರು ವಿದ್ಯಾರ್ಥಿಗಳು ಶವವಾಗುತ್ತಿದ್ದಾರೆ. 2024ರ ಹೊಸ ವರ್ಷ ಆರಂಭವಾಗಿ ತಿಂಗಳು ತುಂಬಿದ ವೇಳೆಗಾಗಲೇ ಭಾರತೀಯ ಮೂಲದ ಐವರು ವಿದ್ಯಾರ್ಥಿಗಳು ನಿಗೂಢವಾಗಿ ಮೃತಪಟ್ಟಿದ್ದಾರೆ. ಇದು ಅಮೆರಿಕದಲ್ಲಿ ಭಾರತ ದ್ವೇಷಿ ಅಪರಾಧಗಳು ಹೆಚ್ಚುತ್ತಿರುವುದಕ್ಕೆ ಸಾಕ್ಷಿ ಎಂಬ ಆತಂಕ ಸೃಷ್ಟಿಸಿದೆ.
5ನೇ ಪ್ರಕರಣ ವರದಿ
ನಾಲ್ವರು ಭಾರತೀಯ ವಿದ್ಯಾರ್ಥಿಗಳ ಸಾವಿನ ಬೆನ್ನಲ್ಲೇ ಸೋಮವಾರ ಸಂಜೆ ಮತ್ತೋರ್ವ ಭಾರತೀಯ ವಿದ್ಯಾರ್ಥಿ ನಿಗೂಢವಾಗಿ ಮೃತಪಟ್ಟಿದ್ದಾನೆ. ಇಂಡಿಯಾನಾದ ಪಡ್ನೂ ವಿವಿಯಲ್ಲಿ ಡಾಕ್ಟರೇಟ್ ಪದವಿ ವ್ಯಾಸಂಗ ದಲ್ಲಿದ್ದ ಭಾರತೀಯ ಮೂಲದ ಸಮೀರ್ ಕಾಮತ್ (23) ಮೃತ ದುರ್ದೈವಿ. ಸೋಮವಾರ ಸಂಜೆ ಅರಣ್ಯ ಪ್ರದೇಶವೊಂದರಲ್ಲಿ ಶವ ಪತ್ತೆಯಾಗಿದೆ.
ಈ ವರ್ಷದಲ್ಲಿ ಐವರ ಬಲಿ
ಅಕುಲ್ ಧವನ್: ಹೈಪೋಥ ರ್ಮಿಯಾ ಕಾಯಿಲೆಗೆ ಬಲಿ ಎನ್ನ ಲಾಗಿದೆ, ನಿಖರ ಕಾರಣ ತಿಳಿದಿಲ್ಲ
ನೀಲ್ ಆಚಾರ್ಯ: ಇದಕ್ಕಿದ್ದಂತೆ ನಾಪತ್ತೆ, ಆತನ ತಾಯಿ ದೂರು ನೀಡಿದ ಬಳಿಕ ಶವ ಪತ್ತೆ
ವಿವೇಕ್ ಸೈನಿ: ನಿರ್ವಸಿತ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದ್ದು, ಕಾರಣ ತಿಳಿದಿಲ್ಲ
ಶ್ರೇಯಸ್ ರೆಡ್ಡಿ: ನಿಗೂಢ ಹತ್ಯೆ, ದ್ವೇಷ ಕಾರಣ ಅಲ್ಲವೆಂದು ಪೊಲೀಸರ ಸಬೂಬು.
ಸಯ್ಯದ್ ಮೇಲೆ ಮಾರಣಾಂತಿಕ ದಾಳಿ
ಹೈದರಾಬಾದ್ ಮೂಲದ ವಿದ್ಯಾರ್ಥಿ ಸಯ್ಯದ್ ಮಜಹೀರ್ ಅಲಿ ಮೇಲೆ ಶಿಕಾಗೋದಲ್ಲಿ ಮಾರಣಾಂತಿಕ ದಾಳಿ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿ, ರಕ್ತ ಬರುವಂತೆ ಥಳಿಸಿ, ಮೊಬೈಲ್ ಕಿತ್ತುಕೊಂಡಿದ್ದಾರೆ.
ದ್ವೇಷಕ್ಕೇನು ಕಾರಣ?
ಭಾರತೀಯರಿಗೆ ಅಮೆರಿಕದಲ್ಲಿ ಸಿಗುತ್ತಿ ರುವ ಮಾನ್ಯತೆ, ಆಡಳಿತದ ಪ್ರಮುಖ ಸ್ಥಾನಗಳಿಗೆ ಭಾರತೀಯ ಮೂಲದವರ ನೇಮಕ, ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಭಾರತೀಯರ ಪ್ರಾಬಲ್ಯ, ಆರ್ಥಿಕತೆಗೆ ಭಾರತದ ವಿದ್ಯಾರ್ಥಿ ಗಳು, ವೃತ್ತಿಪರರ ಕೊಡುಗೆಗಳೇ ಭಾರತೀಯರ ವಿರುದ್ಧ ದ್ವೇಷಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ನೆರವಿಗಿದ್ದೇವೆ: ರೆಡ್ಡಿ
ಮಜರ್ ಅಲಿ ಮೇಲಿನ ದಾಳಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ಸಚಿವಾಲಯ ಈ ಕುರಿತು ಗಂಭೀರ ಚರ್ಚೆ ನಡೆಸಬೇಕು ಎಂದಿದ್ದಾರೆ. ತೆಲಂಗಾಣ ಮೂಲದ ಯುವಜನರು ವಿಶ್ವದ ಯಾವ ಮೂಲೆಯಲ್ಲಿದ್ದರೂ ಅವರಿಗಾಗಿ ನಮ್ಮ ಸರಕಾರ ಸಹಾಯ ಕೇಂದ್ರ ಸ್ಥಾಪಿಸಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.