ಕಿನ್ನಿಗೋಳಿ: ಸದ್ಯದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣ
Team Udayavani, Feb 8, 2024, 2:35 PM IST
ಕಿನ್ನಿಗೋಳಿ: ಕಿನ್ನಿಗೋಳಿ ಜನತೆಯ ಬಹುದಿನ ಗಳ ಬೇಡಿಕೆಯಾದ ಇಂದಿರಾ ಕ್ಯಾಂಟೀನ್ ಸದ್ಯ ದಲ್ಲೇ ನಿರ್ಮಾಣವಾಗಲಿದೆ. ಪಟ್ಟಣವಾಗಿ ಬೆಳೆ ಯುತ್ತಿರುವ ಕಿನ್ನಿಗೋಳಿಯಲ್ಲಿ ಬಡ ಮತ್ತು ಶ್ರಮಿಕ ವರ್ಗ ಹೆಚ್ಚಾಗಿದ್ದು, ಇಂದಿರಾ ಕಾಂಟೀನ್ ನಿರ್ಮಾಣವಾದರೆ ಸಹಕಾರಿ ಯಾಗ ಲಿದೆ. ಮಾರ್ಚ್ ಅಂತ್ಯದೊಳಗೆ ಆರಂಭವಾಗಲಿದೆ.
ಸ್ಥಳ ಹುಡುಕಾಟ
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಟುಕಾಟದಲ್ಲಿದ್ದಾರೆ ಅಧಿಕಾರಿಗಳು. ಈಗಾಗಲೇ ಅಧಿಕಾರಿಗಳು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆವರಣದೊಳಗೆ ಇದಕ್ಕಾಗಿ ಜಾಗ ಸೂಚಿಸಿದ್ದು, ಆದರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಸಾರ್ವಜನಿಕರ ಅಪೇಕ್ಷೆಯಂತೆ ಇದನ್ನು ಬೇರೆಡೆ ಆರಂಭಿಸಲು ಸ್ಥಳ ಗುರುತಿಸಲಾಗಿದೆ.
ಪಂಚಾಯತ್ ಆವರಣದೊಳಗೆ ಕ್ಯಾಂಟಿನ್ ಆರಂಭಿಸಿದರೆ ಸಾರ್ವಜನಿಕರಿಗೆ ಇದರ ಉಪಯೋಗ ಸಿಗದು ಎಂಬ ಕಾರಣಕ್ಕಾಗಿ ಕಿನ್ನಿಗೋಳಿ ಪೇಟೆ ಅಥವಾ ಜನಸಂದಣಿ ಇರುವ ಜಾಗದಲ್ಲಿ ಆರಂಭಿಸಲು ಒಂದೆರಡು ಜಾಗವನ್ನು ಸೂಚಿಸಿದ್ದು, ಕೊನ್ಸೆಟಾ ಆಸ್ಪತ್ರೆಯ ಬಳಿ ಅಂದರೆ ಪ್ರಸ್ತುತ ಸಂತೆ ನಡೆಯುವ ಮುಂಭಾಗದಲ್ಲಿರುವ ಸರಕಾರಿ ಜಾಗದಲ್ಲಿ ಕ್ಯಾಂಟಿನ್ ಆರಂಭವಾಗಲಿದೆ. ಸದ್ಯಕ್ಕೆ ಗ್ರಾಮಕರಣಿಕ ಸುಜಿತ್ ಮತ್ತು ಸರ್ವೆ ಅಧಿಕಾರಿಗಳು ಸರ್ವೇ ಕಾರ್ಯ ಮುಗಿಸಿದ್ದು, ಒಂದೆರಡು ತಿಂಗಳಲ್ಲಿ ಕಿನ್ನಿಗೋಳಿಯ ಜನತೆಗೆ ಇಂದಿರಾ ಕ್ಯಾಂಟೀನ್‌ನ ಸೇವೆ ದೊರೆಯಲಿದೆ.
ಇಂದಿರಾ ಕ್ಯಾಂಟೀನ್ ಸೇವೆಯ ಜತೆಗೆ ಕಿನ್ನಿಗೋಳಿ ಪೇಟೆಗೆ ಸರಕಾರಿ ಆಸ್ಪತ್ರೆ, ರೈತಸಂಪರ್ಕ ಕೇಂದ್ರ, ಕೇಂದ್ರ ವಾಚನಾಲಯ, ಹೋಬಳಿ ಮಟ್ಟದ ಸರಕಾರಿ ಕಚೇರಿಗಳು, ಪೊಲೀಸ್ ಉಪಠಾಣೆ, ಖಾಯಂ ಸಂಚಾರಿ ಉಪಠಾಣೆಯ ಈ ಭಾಗಕ್ಕೆ ಅಗತ್ಯವಿದೆ.
ಪಟ್ಟಣ ಪಂಚಾಯತ್ ನಿಂದ ಉಸ್ತುವಾರಿ
ಕಿನ್ನಿಗೋಳಿಯಲ್ಲೂ ಇಂದಿರಾ ಕ್ಯಾಂಟಿನ್ ಆರಂಭವಾಗಲಿದ್ದು, ಈಗಾಗಲೇ ಸರ್ವೇ ಕಾರ್ಯ ಮುಗಿದಿದೆ. ಕಿನ್ನಿಗೋಳಿ – ಮೂರು ಕಾವೇರಿ ಮುಖ್ಯ ರಸ್ತೆಯ ಬದಿಯಲ್ಲಿ ಆರಂಭವಾಗಲಿದೆ. ಟೆಂಡರ್ ಪಡೆದುಕೊಂಡವರು ಕ್ಯಾಂಟೀನ್ ನಡೆಸಿದರೂ ಅದರ ಉಸ್ತುವಾರಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನೋಡಿಕೊಳ್ಳಲಿದೆ. ನಾಗರಾಜ್ ಎಂ. ಎಲ್., ಮುಖ್ಯಾಧಿಕಾರಿ ಪಟ್ಟಣ
ಪಂಚಾಯತ್ ಕಿನ್ನಿಗೋಳಿ
ಪ್ರಯೋಜನಕಾರಿ
ಕಿನ್ನಿಗೋಳಿ ಪೇಟೆಯ 100 ಮೀಟರ್ ಒಳಗಡೆ ಇಂದಿರಾ ಕ್ಯಾಂಟಿನ್ ಮಾಡಬೇಕಾಗಿದೆ. ಮುಖ್ಯ ರಸ್ತೆಯಲ್ಲಿರುವ ಕೇಂದ್ರ ಮಾರುಕಟ್ಟೆಯ ತೆರವುಗೊಳಿಸಿದ ಎಪಿಎಂಸಿ ಕಟ್ಟಡದಲ್ಲಿ ಅಥ ವಾ ಕೆಲವು ಅಂಗಡಿ ಮುಂಗಟ್ಟು ಗಳು ಖಾಲಿ ಇದ್ದು ಇಲ್ಲಿ ಇಂದಿರಾ ಕ್ಯಾಂಟೀನ್ ಮಾಡಿದರೆ ಜನರಿಗೆ ಪ್ರಯೋಜನಕಾರಿಯಾಗಲಿದೆ. ದೂರದ ಪಟ್ಟಣ ಪಂಚಾಯತ್ ಹತ್ತಿರ ಮಾಡಿದರೇ ಜನರಿಗೆ ಅಷ್ಟು ಅನುಕೂಲವಾಗುವುದಿಲ್ಲ.
ಗಿರೀಶ್ ಮಡಿವಾಳ ಉಲ್ಲಂಜೆ, ಸಮಾಜ ಸೇವಕ
*ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.