ಪುರಂದರದಾಸರ 459 ನೇ ಆರಾಧನೆ ಅಂತರಂಗವನ್ನು ಎಚ್ಚರಿಸಿದ ದಾಸಶ್ರೇಷ್ಠ
Team Udayavani, Feb 9, 2024, 6:53 AM IST
ಶ್ರೀಮಧ್ವಾಚಾರ್ಯರ (ಕ್ರಿ.ಶ. 1238-1318 ) ದ್ವೆ„ತ ಸಿದ್ಧಾಂತವನ್ನು ಕರ್ನಾಟಕದಲ್ಲಿ, ಅದೇ ಸಮ ಯದಲ್ಲಿ ಆರಂಭಗೊಂಡ ದಾಸಕೂಟವು ನಾಡಿನ ಲ್ಲೆಲ್ಲ ಪ್ರಚುರಪಡಿಸಿ ಹರಿದಾಸ ಪರಂಪರೆಯನ್ನು ಹುಟ್ಟುಹಾಕಿತು. ಅದರಲ್ಲಿ ಸರ್ವಶ್ರೇಷ್ಠರು ಶ್ರೀ ಪುರಂ ದರದಾಸರು. ಅವರು ಉಡುಪಿ ಸೋದೆ ಮಠದ ಶ್ರೀ ವಾದಿರಾಜ ತೀರ್ಥರ (ಕ್ರಿ.ಶ. 1480-1600) ಸಮ ಕಾಲೀನರು. ಉಡುಪಿಗೂ ಭೇಟಿ ನೀಡಿ, ಸ್ವಲ್ಪಕಾಲ ತಂಗಿದ್ದರು. ಕಿ.ಶ.1480ರಲ್ಲಿ ಪುರಂದರರ ಜನನ. ಕ್ರಿ.ಶ. 1565ರಲ್ಲಿ ವಿಷ್ಣುಸಾಯುಜ್ಯವನ್ನು ಹೊಂದಿದರು.
ಪುರಂದರದಾಸರ ಹುಟ್ಟೂರು ಮಹಾರಾಷ್ಟ್ರದ ಪಂಡರಾಪುರ ಬಳಿಯ ಪುರಂದರಗಢವೇ ಅಥವಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆರಗ ಎಂಬ ಸ್ಥಳವೇ ಎಂಬ ಬಗ್ಗೆ ಸಂದೇಹವಿದೆ. ಕರ್ನಾಟಕ ಸರಕಾರ ನೇಮಿಸಿದ್ದ ಒಂದು ಸಮಿತಿಯ ವರದಿ ಯಂತೆ ಪುರಂದರಗಢದಲ್ಲಿ ಕೇವಲ ಹೆಸರನ್ನೊಂದು ಬಿಟ್ಟರೆ ಬೇರಾವ ಪುರಾವೆಯು ಲಭ್ಯವಿಲ್ಲ. ಆದರೆ ಆರಗದಲ್ಲಿ ಪುಷ್ಟಿ ನೀಡುವ ಅನೇಕ ಪುರಾವೆಗಳು ಸಿಕ್ಕಿವೆ ಎಂದಿದೆ ವರದಿ. ಕ್ರಿ.ಶ. 8ನೇ ಶತಮಾನದಲ್ಲೇ ಆರಗದ ಹೆಸರು ಇತಿಹಾಸದಲ್ಲಿ ದಾಖಲೆಗೊಂಡಿದೆ. 10-17ನೇ ಶತಮಾನದ ಅವಧಿಯಲ್ಲಿ ಆರಗ ಮಲೆ ರಾಜ್ಯದ ರಾಜಧಾನಿಯಾಗಿತ್ತು. ಆರಗದ ವೈಷ್ಣವರ ಹೆಸರಲ್ಲಿ ನಾಯಕ ಎಂಬ ಉಪನಾಮವಿದೆ. ಆದು ದರಿಂದ ವರದಪ್ಪನಾಯಕನ ಮಗ ಶ್ರೀನಿವಾಸ ನಾಯಕ -ಪುರಂದರ ದಾಸ. ಕೇಶವಾಪುರದ ವರ್ತ ಕೇರಿ ಅಥವಾ ವರ್ತಕರಕೇರಿಯಲ್ಲಿ ಶ್ರೀನಿವಾಸ ನಾಯಕ ತನ್ನ ವ್ಯಾಪಾರವನ್ನು ನಡೆಸುತ್ತಿದ್ದನು. ಇಂದಿ ಗೂ ಆರಗ ಹೋಬಳಿಯಲ್ಲಿ ನಾಯಕ ಸಮುದಾಯ ನೆಲೆಸಿದೆ.
ವಿಠಲನಗುಂಡಿ, ದಾಸನಗದ್ದೆಯು ಇನ್ನಷ್ಟು ಪುರಾವೆಯನ್ನು ಒದಗಿಸಿದ್ದು ಕೇಶವಪುರವೇ ಪುರಂದರರ ಹುಟ್ಟೂರು ಎಂದು ಸೂಚಿಸಿದೆ. ಪುರಂ ದರರು ಬಳಸಿದ ಭಾಷೆಗೂ ಇಲ್ಲಿನ ಭಾಷೆಗೂ ಹೊಂದಾಣಿಕೆಯಿದೆ. ಆರಗ ಸಂಸ್ಥಾನದ ಐದು ಗ್ರಾಮಗಳನ್ನು ಶಿವಮೊಗ್ಗ ಕೂಡಲೀಪುರದ ನಾರಾ ಯಣ ಯತಿಗಳಿಗೆ ವಿಜಯನಗರ ಸಾಮ್ರಾಟ ಶ್ರೀ ಕೃಷ್ಣದೇವರಾಯನು ದತ್ತು ನೀಡಿದ್ದನು. ಪುರಂದರರ ಗುರು ಶ್ರೀವ್ಯಾಸತೀರ್ಥರು ಕೃಷ್ಣ ದೇವರಾಯನ ರಾಜಗುರು ಆಗಿದ್ದರು. ಆ ಕಾಲದಲ್ಲಿ ಆರಗ, ಕಲೆ ಮತ್ತು ಸಂಗೀತ ಕೇಂದ್ರವಾಗಿ ಮೆರೆದಿತ್ತು ಎಂದು ಸಂಶೋಧಕರು ದಾಖಲಿಸಿದ್ದಾರೆ.
ದಾಸರೆಂದರೆ ಪುರಂದರದಾಸರಯ್ಯ!
ಶ್ರೀಪಾದರಾಜರಿಂದ ಆರಂಭಗೊಂಡ ಹರಿದಾಸ ಪಂಥವು ವ್ಯಾಸರಾಯರು, ಪುರಂದರದಾಸರು, ವಿಜಯದಾಸರು ಮುಂತಾದ ವ್ಯಾಸಕೂಟ ದಾಸ ಕೂಟದ ಪರಂಪರೆಯಿಂದ ಮುಂದುವರಿಯಿತು.
ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ ನಮಃ ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮಃ || – ಎಂದು ಸಮಸ್ತ ಹರಿದಾಸ ಪರಂಪರೆಯ ಮಂಗಲಾಚರಣೆಯ ಶ್ಲೋಕ. ಗುರು ವ್ಯಾಸರಾಯರ ಬಳಿಗೆ ಬಂದ ವಿರಕ್ತ ವರ್ತಕ ಶ್ರೀನಿವಾಸ ನಾಯಕ ಪುರಂದರ ದಾಸರಾಗಿ ಹರಿಸರ್ವೋತ್ತಮತ್ವವನ್ನು ಕೀರ್ತನೆಗಳ ಮೂಲಕ ಜಗತ್ತಿಗೆ ಸಾರಿದ ಮಹಾನ್ ಸಂತ. ದಾಸರೆಂದರೆ ಪುರಂದರದಾಸರಯ್ಯ – ಎಂದು ಗುರು ಶ್ರೀವ್ಯಾಸತೀರ್ಥರು ಶಿಷ್ಯ ಪುರಂದರರನ್ನು ವರ್ಣಿ ಸಿದ್ದಾರೆ. ತಮ್ಮ ಸಂಪತ್ತನ್ನೆಲ್ಲ ದಾನ ಮಾಡಿದ್ದಕ್ಕೆ ದುಃಖೀ ತರಾಗಲಿಲ್ಲ. ಆದದ್ದೆಲ್ಲ ಒಳಿತೇ ಆಯಿತು. ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು… ಎಂದು ಹಾಡಿ, ಕೃತಾರ್ಥರಾದರು. ಗುರು ವ್ಯಾಸರಾಯರೇ ಪರಮ ಗುರುಗಳು. ಪುರಂದರ ವಿಠಲನೇ ಪರದೈವ ಎಂದು ಸ್ತುತಿಸಿದ್ದರು. ಹರಿಭಕ್ತಿ, ಮಧ್ವಮತ – ಪಂಚಭೇದ, ತಾರತಮ್ಯ ಇತ್ಯಾದಿ ತತ್ತ್ವವಾದದ ತಿರುಳನ್ನು ತಮ್ಮ ಲಕ್ಷಾಂತರ ಹಾಡುಗಳ ಮೂಲಕ ಪ್ರಚಾರ ಮಾಡಿ ದ್ದರು. ಗುರುಮಧ್ವ ಶಾಸ್ತ್ರವನು ಓದುವುದೇ ಮಾಂಗಲ್ಯ. ವೈರಾಗ್ಯವೆಂಬ ಒಪ್ಪುವ ಮೂಗುತಿ ತಾರ ತಮ್ಯ ಜ್ಞಾನ ತಾಯಿತ್ತು… ಎಂದು ಆಚಾರ್ಯ ಮಧ್ವರ ವಾದವನ್ನು ಹೊಗಳಿದ್ದಾರೆ. ಪುರಂದರ ದಾಸರು ಹಾಡುಗಳನ್ನು ಸಂಗೀತ ಪದ್ಧತಿಗೆ ಅಳವಡಿಸಿ ರಾಗ ಸಂಯೋಜಿಸಿ, ಕರ್ನಾಟಕೀ ಸಂಗೀತ ಪದ್ಧತಿ ಎಂಬ ಹೊಸ ಸಂಪ್ರದಾಯವನ್ನೇ ಹುಟ್ಟುಹಾಕಿದರು. ಸುಮಾರು ನಾಲ್ಕು ಕಾಲು ಲಕ್ಷ ಕೀರ್ತನೆಗಳನ್ನು ರಚಿಸಿ ದ್ದರೆಂದು ಪ್ರತೀತಿ. ಅದರಲ್ಲಿ ಸುಮಾರು ಒಂದು ಸಾವಿರದಷ್ಟು ಕೀರ್ತನೆಗಳು ಮಾತ್ರ ಲಭ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದು ಅವರು ಪ್ರಸಿದ್ಧರಾದರು.
ಮಾಯಾಮಾಳವಗೌಳ ರಾಗದಿಂದಲೇ ಆರಂಭ
ಮಾಯಾಮಾಳವಗೌಳ ರಾಗವೇ ಸಂಗೀತ ಕಲಿಕೆಗೆ ಆರಂಭದ ಹಾಡಾಗಬೇಕು ಎಂದು ಗಣ ಪತಿಯ ಸ್ತೋತ್ರವನ್ನು… ಲಂಬೋದರ ಲಕುಮಿಕರ.. ರಚಿಸಿದರು. ಅದು ಇಂದಿಗೂ ಪ್ರಸಿದ್ಧ ಕೀರ್ತನೆ ಯಾಗಿದೆ. ಹರಿಗುಣಮುಲು ಪಾಡು ಚುನೆ ಪ್ಪುಡುನ್ ಪರವಶುಡೈ ವೆಲಗು ಪುರಂದರ ದಾಸುನಿ… ಎಂದು ಸಂತ ತ್ಯಾಗರಾಜರು ಪುರಂದರ ದಾಸರ ಹರಿಭಕ್ತಿಯನ್ನು ಕೊಂಡಾಡಿದ್ದಾರೆ. ಗುರು ಪುರಂದರದಾಸರೇ ನಿಮ್ಮ ಚರಣಸರಸಿಜ ನಂಬಿದೆ ಗುರುವರಹಿತನ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ ಎಂದು ವಿಜಯದಾಸರ ಸ್ತುತಿ. ದಾಸರಾಯಾ ಪುರಂದರ ದಾಸಾಯಾ ಪ್ರತಿವಾಸರದಲ್ಲಿ ಶ್ರೀನಿವಾಸನ್ನ ತೋರೋ… ಜಗನ್ನಾಥದಾಸರು.
ಪುರಂದರರ ಕೀರ್ತನೆಗಳಲ್ಲಿ ನಾರದರ ಭಕ್ತಿ ರೂಪಗಳು
ನಾರದ ಭಕ್ತಿಯನ್ನು ಹನ್ನೊಂದು ವಿಧ ಎಂದು ಬಣ್ಣಿಸಲಾಗಿದೆ. ನಾರದರ ಅವತಾರ ಎಂದೇ ವರ್ಣಿ ಸಲಾಗುವ ಪುರಂದರರ ಭಕ್ತಿಮಾರ್ಗದಲ್ಲೂ ಈ ಎಲ್ಲ ಸೂತ್ರಗಳು ಅಡಕವಾಗಿವೆ. ಅವರ ಕೀರ್ತ ನೆಗಳು ನಿರೂಪಿಸಿವೆ. ಭಗವಂತನ ಗುಣಗಳಲ್ಲಿ ಆಸಕ್ತಿ. ಗುಣಮಹಾತ್ಮಾéಸಕ್ತಿ. ಅವನ ರೂಪಗಳಲ್ಲಿ ಆಸಕ್ತಿ. ರೂಪಾಸಕ್ತಿ. ಅವನ ಪೂಜೆಯಲ್ಲಿ ಆಸಕ್ತಿ. ಪೂಜಾಸಕ್ತಿ. ನಾಮಸ್ಮರಣೆಯಲ್ಲಿ ಆಸಕ್ತಿ. ಸ್ಮರಣಾಸಕ್ತಿ. ಅವನ ದಾಸನೆಂದು ತಿಳಿಯುವುದು ದಾಸ್ಯಾಸಕ್ತಿ. ಪರಮಾತ್ಮ ತನ್ನ ಒಬ್ಬ ಗೆಳೆಯ, ಸಮಾನ, ಸಂಗಾತಿ ಎಂದು ತಿಳಿಯುವುದು ಸಖ್ಯಾಸಕ್ತಿ. ದೇವರು ದಾಸರಲ್ಲಿ ತಾಯಿ ಮಗುವಿನ ವಾತ್ಸಲ್ಯವನ್ನು ಕಾಣುವುದು. ವಾತ್ಸಲಾಸಕ್ತಿ. ಸತಿಪತಿಯ ಭಾವನೆ ಯಿಂದ ಕಾಣುವುದು ಕಾಂತಾಸಕ್ತಿ. ತನ್ನ ಸರ್ವ ಸ್ವವನ್ನೂ ಭಗವಂತನಿಗೆ ಅರ್ಪಿಸುವ ಆತ್ಮನಿವೇ ದನಾಸಕ್ತಿ. ಪರಮಾತ್ಮನಲ್ಲಿ ವಿಲೀನವಾಗುವ ಭಾವ. ತನ್ಮಯಾಸಕ್ತಿ. ಮಗುವನ್ನು ಕಳೆದುಕೊಂಡ ತಾಯಿಯ ವೇದನೆಯಂತೆ ಭಕ್ತನಿಗೆ ಪರಮಾತ್ಮನ ವಿರಹ ವೇದನೆ, ಅದು ಪರಮ ವಿರಹಾಸಕ್ತಿ. ಹೀಗೆ ಪುರಂದರದಾಸರು ಏಕಾದಶ ಭಕ್ತಿಯನ್ನು ತನ್ನ ಸಾವಿರಾರು ಕೀರ್ತನೆಗಳಲ್ಲಿ ಪ್ರಚುರಪಡಿಸಿದ್ದಾರೆ.
ದಾಸಕೂಟದ ಕೀರ್ತನೆಗಳನ್ನು ಕರ್ನಾಟಕದ ವೇದಗಳು ಎಂದು ಬಗೆದರೆ ಅದರಲ್ಲಿ ಪುರಂದರರ ಕೀರ್ತನೆಗಳು ರತ್ನಪ್ರಾಯವಾಗಿರುವ ಸೂಕ್ತಗಳು ಎಂದು ಬಣ್ಣಿಸಬಹುದು. ಭಕ್ತಿ ಮಾರ್ಗಕ್ಕೆ ಪುರಂದರ ದಾಸರು ನಾಂದಿ ಹಾಡಿದ್ದಾರೆ. ಇಂದಿಗೂ ಅದು ಅವರ ಕೀರ್ತನೆಗಳ ಮೂಲಕ ಜೀವಂತ ವಾಗಿದೆ. ನೈಜ ಭಕ್ತಿಯನ್ನು ಅವರು ಕೀರ್ತನೆ, ಹಾಡು ಗಳ ಮೂಲಕ ತೋರಿಸಿದ್ದಾರೆ. ಅದಕ್ಕೆಂದೇ ಶ್ರೀವ್ಯಾಸ ತೀರ್ಥರು ಪುರಂದರರ ಭಕ್ತಿಯನ್ನು ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ.. ಎಂದು ವರ್ಣಿಸಿದ್ದಾರೆ.
ನಾನು ವೈಕುಂಠದಲ್ಲೂ ಅಲ್ಲ, ಯೋಗಿಗಳ ಹೃದಯದಲ್ಲೂ ಅಲ್ಲ, ಸೂರ್ಯ ಮಂಡಲದಲ್ಲೂ ಅಲ್ಲ. ನನ್ನ ಭಕ್ತರು ಎಲ್ಲಿ ನನ್ನನ್ನು ಕುರಿತು ಹಾಡುತ್ತಾರೋ ಅಲ್ಲಿ ನಾನಿರುವೆ ಎಂಬ ನಾರದರ ನುಡಿಯಂತೆ, ರಾಗ, ತಾಳ, ಲಯ ಬದ್ಧವಾದ ಕೀರ್ತನೆಗಳು ಎಲ್ಲಿ ಹಾಡಲ್ಪ ಡುವುದೋ ಅಲ್ಲಿ ಪರಮಾತ್ಮನ ಸಾನ್ನಿಧ್ಯವಿದೆ ಎಂದು ಪುರಂ ದರರು ಸರಳ ಸುಂದರ ಕೀರ್ತನೆ ಗಳನ್ನು ರಚಿಸಿ ಜನ ಸಾಮಾನ್ಯರೂ ತಿಳಿಯುವಂತೆ ಮಾಡಿದ್ದಾರೆ. ಕಲಿ ಯುಗದಿ ಗಾನದಿ ಕೇಶವನೆಂದರೆ ಕೈಗೊಡುವನು ರಂಗವಿಠಲ ಎಂದು ಶ್ರೀಪಾದ ರಾಯರು ಸಮರ್ಥಿ ಸಿದ್ದಾರೆ. ಕಲಿಯುಗದಲ್ಲಿ ಭಕ್ತಿಗಾನ, ಕೇಶವನನ್ನು ಒಲಿಸುವ ಮಾರ್ಗ. ಭಗವಂ ತನಲ್ಲಿ ಅನನ್ಯ ಪ್ರೇಮವೇ ಭಕ್ತಿ. ಪರಮಾತ್ಮನನ್ನು ಒಲಿಸಿಕೊಳ್ಳಲು ಮುಖ್ಯವಾಗಿ ಎರಡು ಮಾರ್ಗ ಗಳಿವೆ. ಜ್ಞಾನಮಾರ್ಗ ಮತ್ತು ಭಕ್ತಿ ಮಾರ್ಗ. ಜ್ಞಾನ ಮಾರ್ಗ ತುಸು ಕಷ್ಟ. ಭಕ್ತಿ ಮಾರ್ಗ ಸರಳ ಮತ್ತು ತುಸು ಸುಲಭ. ಮನಸ್ಸು ಬುದ್ಧಿಯನ್ನು ಭಗವಂತನಲ್ಲಿ ನೆಲೆಗೊಳಿಸಬೇಕು ಅಷ್ಟೆ.
ಜಲಂಚಾರು ರಘುಪತಿ ತಂತ್ರಿ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.