Dispute: ಮಳಲಿ ಮಂದಿರ-ಮಸೀದಿ ವಿವಾದ: ವಿಚಾರಣೆ ಫೆ. 17ಕ್ಕೆ
Team Udayavani, Feb 9, 2024, 8:35 AM IST
![3-malali](https://www.udayavani.com/wp-content/uploads/2024/02/3-malali-620x372.jpg)
![3-malali](https://www.udayavani.com/wp-content/uploads/2024/02/3-malali-620x372.jpg)
ಮಂಗಳೂರು: ಮಳಲಿ ಮಂದಿರ – ಮಸೀದಿ ವಿವಾದದಲ್ಲಿ ಮಸೀದಿಯ ಉತ್ಖನನ ಮಾಡಿ ಸರ್ವೇಗೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಗುರುವಾರ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ನಲ್ಲಿ ನಡೆಯಿತು.
ವಿಹಿಂಪ ಪರ ವಕೀಲ ಚಿದಾನಂದ ಕೆದಿಲಾಯ ವಾದ ಮಂಡಿಸಿದರು. ಮಸೀದಿ ಪರ ವಕೀಲರು ಹೈಕೋರ್ಟ್ ತೀರ್ಪು ಪ್ರತಿ ತಲುಪಿದ ಬಳಿಕ ವಾದ ಮಂಡನೆ ಮಾಡುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಫೆ. 17ಕ್ಕೆ ನ್ಯಾಯಾಲಯ ಮುಂದೂಡಿದೆ.