Udupi: ವೈಫಲ್ಯ ಮರೆಮಾಚಲು ವಿಭಿನ್ನ ನಾಟಕ!; ರಾಜ್ಯ ಸರಕಾರದ ನಡೆಗೆ ಕೋಟ ಆಕ್ರೋಶ
Team Udayavani, Feb 9, 2024, 10:03 AM IST
ಉಡುಪಿ: ತಾಲೂಕು, ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದ ವೈಫಲ್ಯ ಮೆರೆಮಾಚರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ. ದಿಲ್ಲಿಯ ನಾಟಕ ವಿಫಲವಾದ ಮೇಲೆ ಬೆಂಗಳೂರಿನಲ್ಲಿ ಜನಸ್ಪಂದನ ನಾಟಕ ಮಾಡಿದ್ದಾರೆ. ಪ್ರಧಾನಿ ಮೋದಿಯವರು ದೇಶ ಕಟ್ಟುವ ವಿಚಾರ ಮಾತನಾಡಿದರೆ, ಕಾಂಗ್ರೆಸ್ ದೇಶ ವಿಭಜನೆಯ ಮಾತುಗಳನ್ನಾಡುತ್ತಿದೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ನಿಭಾಯಿಸುವ ಶಕ್ತಿ ರಾಜ್ಯ ಸರಕಾರಕ್ಕೆ ಇಲ್ಲ. ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿಟ್ಟ 11 ಸಾವಿರ ಕೋ.ರೂ.ಗಳನ್ನು ಗ್ಯಾರಂಟಿಗೆ ದುರ್ಬಳಕೆ ಮಾಡಲಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ದಿಲ್ಲಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ನಾಟಕವಾಡಿದ್ದಾರೆ. ಕಾಂಗ್ರೆಸ್ ಸಂಪೂರ್ಣ ಅಸಹಾಯಕ ಸ್ಥಿತಿಗೆ ತಲುಪಿದೆ ಎಂದರು.
2004ರಿಂದ 2014ರ ಅವಧಿಗೆ ಕೇಂದ್ರದಿಂದ 81,795 ಕೋ. ರೂ. ಕರ್ನಾಟಕಕ್ಕೆ ಬಂದಿದ್ದರೆ, 2014ರಿಂದ 2024ರ ಅವಧಿಯಲ್ಲಿ 2.87 ಲಕ್ಷ ಕೋ.ರೂ. ಬಂದಿದೆ. ಮೂರು ಪಟ್ಟು ಹೆಚ್ಚು ದುಡ್ಡು ಬಂದಿದೆ. ರಾಜ್ಯದ ಕಾಂಗ್ರೆಸ್ ಸರಕಾರ ವಿನಾ ಕಾರಣ ಕೇಂದ್ರದ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಗ್ಯಾರಂಟಿಯನ್ನು ಪೂರೈಸಲಾಗದೆ ರಾಜ್ಯ ಸರಕಾರ ದಿವಾಳಿಯಾಗಿದ್ದು, ಗೃಹಲಕ್ಷ್ಮೀಯಲ್ಲಿ ಎಲ್ಲರಿಗೂ ಹಣ ಬರುತ್ತಿಲ್ಲ. ಯುವನಿಧಿ ವಿಫಲವಾಗಿದೆ. ಹೊಸ ಬಸ್ ಬಿಡದೆ ವಿದ್ಯಾರ್ಥಿಗಳು ಬಸ್‌ಗಾಗಿ ಪ್ರತಿಭಟಿಸುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿ, ಗ್ಯಾರಂಟಿ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ ಎಂದರು.
ರಾಜ್ಯದ 17,000 ಹಾಲುತ್ಪಾದಕರ ಸಂಘಕ್ಕೆ ಒಂದೇ ಒಂದು ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿಲ್ಲ. ಇನ್ನು ಬರವನ್ನು ಹೇಗೆ ನಿರ್ವಹಣೆ ಮಾಡುತ್ತಾರೆ? ಮೇಕೆದಾಟು ಯೋಜನೆಗೆ ಕಾಲ್ನಡಿಗೆ ಮಾಡಿ ಈಗ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಇದೊಂದು ದುರಂತಮಯ ಬೆಳವಣಿಗೆಯಾಗಿದೆ. ಕೇಂದ್ರ ಸರಕಾರವನ್ನು ದೂರುವುದು ಬಿಟ್ಟು ಕಾಂಗ್ರೆಸ್ ಬಳಿ ಯಾವ ಯೋಜನೆಗಳೂ ಇಲ್ಲ. ಹಣಕಾಸಿನ ಪೂರ್ಣ ಅಂಕಿ ಅಂಶ ಕೊಟ್ಟಿದ್ದೇವೆ. ನಿಮ್ಮ ನಾಟಕವನ್ನು ನಿಲ್ಲಿಸಿ, ಮುಂದಿನ ಅಧಿವೇಶನದಲ್ಲಿ ಅಂಕಿ ಅಂಶವನ್ನು ಇಡಿ. ವಿಫಲವಾದರೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.