Pak Election Results: ಜೈಲಿನಲ್ಲಿರುವ ಇಮ್ರಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳ ಮೇಲುಗೈ!
ನಿಖರ ಫಲಿತಾಂಶ ಇನ್ನಷ್ಟೇ ತಿಳಿದು ಬರಬೇಕಾಗಿದೆ.
Team Udayavani, Feb 9, 2024, 11:55 AM IST
ಇಸ್ಲಾಮಾಬಾದ್: ಮತದಾನದ ವೇಳೆ ಮೋಸ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ವಿಳಂಬವಾಗಿರುವ ನಡುವೆಯೇ ಪಾಕಿಸ್ತಾನದ ಚುನಾವಣೆಯಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ. ಆದರೆ ನಿಖರ ಫಲಿತಾಂಶ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಗುರುವಾರ ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೇಹ್ರಿಕ್ ಇನ್ಸಾಫ್ (ಪಿಟಿಐ0 ಪಕ್ಷ ಸ್ಪರ್ಧಿಸಲು ನಿಷೇಧ ಹೇರಿತ್ತು. ಆದರೆ ಸ್ಥಳೀಯ ಟಿವಿ ಚಾನೆಲ್ ಗಳ ಅನಧಿಕೃತ ವರದಿಯ ಪ್ರಕಾರ, ಬಹುತೇಕ ಕ್ಷೇತ್ರಗಳಲ್ಲಿ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವುದಾಗಿ ಹೇಳಿದೆ.
ಚುನಾವಣೆ ಮುಗಿದು 16 ಗಂಟೆಗಳ ಕಾಲ ಮುಗಿದ ನಂತರವೂ ಪಾಕಿಸ್ತಾನದ ಚುನಾವಣಾ ಆಯೋಗ ಕೇವಲ 13 ಸ್ಥಾನಗಳ ಫಲಿತಾಂಶವನ್ನು ಮಾತ್ರ ಘೋಷಿಸಿದೆ. ಐವರು ಪಕ್ಷೇತರ ಅಭ್ಯರ್ಥಿಗಳು, ಪಿಎಂಎಲ್ (ಎನ್) ಪಕ್ಷದ ನಾಲ್ವರು ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ನಾಲ್ವರು ಅಭ್ಯರ್ಥಿಗಳು ಜಯಗಳಿಸಿರುವುದಾಗಿ ತಿಳಿಸಿದೆ.
ಅಸೆಂಬ್ಲಿ ಚುನಾವಣೆಯಲ್ಲಿ ಪಿಟಿಐ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮೇಲುಗೈ ಸಾಧಿಸಿರುವುದಾಗಿ ಇಂಗ್ಲಿಷ್ ದೈನಿಕ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಶುಕ್ರವಾರ (ಫೆ.09) ವರದಿ ಮಾಡಿದೆ. ನಿಖರ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಾಗಿದೆ ಎಂದು ಯಾಲೆ ಯೂನಿರ್ವಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಸಾರಾ ಖಾನ್ ಎಎಫ್ ಪಿಗೆ ತಿಳಿಸಿದ್ದಾರೆ.
ಪಾಕಿಸ್ತಾನ್ ತೇಹ್ರಿಕ್ ಇ ಇನ್ಸಾಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಪಾಕ್ ನಲ್ಲಿ ಮುಂದಿನ ಸರ್ಕಾರ ರಚನೆ ಮಾಡುವ 3/2ರಷ್ಟು ಬಹುಮತ ಪಡೆಯುವುದು ಸ್ಪಷ್ಟ ಎಂದು ಪಿಟಿಐ ಮುಖ್ಯ ಸಂಘಟಕ ಓಮರ್ ಅಯೂಬ್ ಖಾನ್ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಿಎಂಎಲ್ ಎನ್ ಪಕ್ಷ ಬಹುತೇಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ನವಾಜ್ ಮತ್ತು ಇಮ್ರಾನ್ ಖಾನ್ ಪಕ್ಷಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿರುವುದಾಗಿ ವರದಿ ವಿವರಿಸಿದೆ.
ನಮ್ಮ ನಿರೀಕ್ಷೆ ಮೀರಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಗೆಲುವು ಸಾಧಿಸುತ್ತಿದೆ ಎಂದು ಪಕ್ಷದ ಮುಖಂಡ ಬಿಲಾವಲ್ ಭುಟ್ಟೋ ಝರ್ದಾರಿ ತಿಳಿಸಿರುವುದಾಗಿ ವರದಿ ಹೇಳಿದೆ.
ಚುನಾವಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದಾದ್ಯಂತ ಸೇನೆ, ಮಿಲಿಟರಿ ಹಾಗೂ ಪೊಲೀಸ್ ಸೇರಿದಂತೆ 6,50,000 ಅಧಿಕ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ. ಬಿಗಿ ಭದ್ರತೆಯ ನಡುವೆಯೇ ದೇಶಾದ್ಯಂತ ಒಟ್ಟು 51 ದಾಳಿ ನಡೆದಿದ್ದು, 10 ಭದ್ರತಾ ಸಿಬಂದಿಗಳು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.