Udupi: ಭಗವದ್ಗೀತೆ ಪಾರಾಯಣಕ್ಕೆ ಅವಕಾಶ
Team Udayavani, Feb 9, 2024, 12:45 PM IST
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ “ವಿಶ್ವ ಗೀತಾ ಪರ್ಯಾಯ’ದ ಸಂದರ್ಭ “ಅಖಂಡ ಉದಯಾಸ್ತಮಾನ ಗೀತಾ ಪಾರಾಯಣ’ ಯೋಜನೆಯಡಿ ಗೀತೆಯನ್ನು ಸ್ಪುಟವಾಗಿ ಓದಲು ಬರುವ ಎಲ್ಲರಿಗೂ ಭಗವದ್ಗೀತೆ ಪಾರಾಯಣ ಮಾಡಲು ಉಡುಪಿಯ ಗೀತಾ ಮಂದಿರದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪಾರಾಯಣ ಸೇವಾ ದಿನವನ್ನು ಕಾದಿರಿಸಲು https://sriputhige.org/ ಗೆ ಭೇಟಿ ನೀಡಿ ಅಥವಾ ಉಡುಪಿ ಗೀತಾ ಮಂದಿರದಲ್ಲಿ ವಿಚಾರಿಸಬಹುದು.
ದಿನವೂ ನಾಲ್ಕು ಬಾರಿ (ಬೆಳಗ್ಗೆ 7, 10, ಮಧ್ಯಾಹ್ನ 1, ಸಂಜೆ 4 ಗಂಟೆಗೆ) ಪಾರಾಯಣ ನಡೆಯುತ್ತದೆ. ಯಾವುದೇ ಒಂದು ಸಮಯ ಆಯ್ಕೆ ಮಾಡಬಹುದು. ಒಂದು ತಂಡದಲ್ಲಿ 3ರಿಂದ 10 ಜನರಿಗೆ ಅವಕಾಶವಿದೆ. ಪಾರಾಯಣದಲ್ಲಿ ಭಾಗ ವಹಿಸುವವರು ಭಾರತೀಯ ಉಡುಗೆಯಲ್ಲಿ ಬರಬೇಕು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.