ತೇರದಾಳ: ಗ್ರಾಪಂಗೆ ಬೀಗ ಹಾಕಿ ಸದಸ್ಯರ ಪ್ರತಿಭಟನೆ
Team Udayavani, Feb 9, 2024, 5:30 PM IST
ಉದಯವಾಣಿ ಸಮಾಚಾರ
ತೇರದಾಳ: ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳಿಂದಲೇ ವಿಳಂಬ ಆಗುತ್ತಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿಯ
ಬಿಜೆಪಿ-ಕಾಂಗ್ರೆಸ್ ಸದಸ್ಯರು ಹನಗಂಡಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟಿಸಿದರು.
ಕಳೆದ ಆರು ತಿಂಗಳಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸಗಳಿಗೆ ಅನುಮತಿ ನೀಡುತ್ತಿಲ್ಲ. ಶಾಲೆಗಳಿಗೆ ಕಂಪೌಂಡ್, ಶೆಡ್, ಕೃಷಿ ಹೊಂಡ, ಕೆರೆ ಅಭಿವೃದ್ಧಿ, ಬಾಂದಾರ ಸೇರಿದಂತೆ ಹಲವು ಕೆಲಸಗಳಿಗೆ ತಡೆ ಹಿಡಿಯಲಾಗಿದೆ. ಹೀಗಾದರೆ ಗ್ರಾಮಸ್ಥರಿಗೆ ಏನು ಉತ್ತರ ನೀಡಬೇಕೆಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಲ್ಪ ಸಮಯದ ನಂತರ ತಾಪಂ ಎಡಿ ಮುನ್ನೊಳಿ ಹಾಗೂ ಪಿಡಿಒ ರಾವಳ ಆಗಮಿಸಿ, ಕಚೇರಿ ಬೀಗ ತೆಗೆಯಿರಿ. ಒಳಗೆ ಕುಳಿತು ಮಾತನಾಡೋಣ ಎಂದು ಹೇಳಿದರು. ಅದಕ್ಕೆ ಒಪ್ಪದ ಸದಸ್ಯರು, ಎಡಿ ಹಾಗೂ ಪಿಡಿಒ ಅವರನ್ನು ತರಾಟೆಗೆ ತಗೆದುಕೊಂಡು ನಿಮ್ಮಿಂದಲೇ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಂತಿವೆ. ಸದಸ್ಯರುಗಳ ಕುರಿತು ಹಗುರವಾಗಿ ಮಾತನಾಡಿದ್ದಿರಿ. ಸ್ಥಳಕ್ಕೆ
ತಾಪಂ ಇಒ ಬರುವವರೆಗೆ ಬೀಗ ತಗೆಯುವುದಿಲ್ಲ ಎಂದು ಹಠ ಹಿಡಿದು ಕುಳಿತರು.
ಹನಗಂಡಿ ಗ್ರಾಮ ಪಂಚಾಯಿತಿಗೆ ಆಗಮಿಸಿದ ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ನೆಲದ ಮೇಲೆ ಕುಳಿತಿದ್ದ ಸದಸ್ಯರ ಕೈ ಹಿಡಿದು ಒಳಗೆ ಕುಳಿತು ಮಾತನಾಡೋಣ ಬನ್ನಿ ಎಂದು ವಿನಂತಿಸಿದರು. ಆದರೆ ಸದಸ್ಯರು ಅದಕ್ಕೆ ಒಪ್ಪದೆ ಇಲ್ಲಿಯೇ ಮಾತನಾಡಿ ಎಂದು ಹಠ ಹಿಡಿದರು. ಕೊನೆಗೆ ಇಒ ಅವರೇ ಸದಸ್ಯರುಗಳ ಜತೆಗೆ ಕುಳಿತರು.
ಯಾವ ಕಾರಣಕ್ಕೆ ಕಾಮಗಾರಿ ತಡೆ ಹಿಡಿಯಲಾಗಿದೆ ಎಂದು ಸದಸ್ಯರು, ಇಒ ಅವರನ್ನು ಪ್ರಶ್ನಿಸಿದರು. ಇಒ ಪಟ್ಟಿಹಾಳ
ಮಾತನಾಡಿ, ಕಾಮಗಾರಿ ಶೀಘ್ರ ಆರಂಭಿಸುವುದರ ಜತೆಗೆ ಪಿಡಿಒ ಅವರನ್ನು ಬದಲಾಯಿಸುವುದಾಗಿ ಭರವಸೆ ನೀಡಿದರು. ಸದಸ್ಯರಾದ ಚಂದ್ರಶೇಖರ ಗುಬಚಿ, ಪ್ರಕಾಶ ನಾರವ್ವಗೋಳ, ಕುಮಾರ ಕಾಂಬಳೆ, ನಬೀಸಾಬ ಶಿಲ್ಲೇದಾರ, ಹಸನ್ ಮೌಲಾನಾ ಪಕಾಲಿ, ಮಹಾವೀರ ಬಿದರಿ ಕಮಾಲ್ ರಾಮದುರ್ಗ, ಅನಿಲ ಗುಬಚಿ, ಕರೆಪ್ಪ ದಳವಾಯಿ, ಅಲ್ಲಾಬಕ್ಷ ಅಲಾಸ, ಸಿದ್ದಪ್ಪ ಸೋರಗಾಂವಿ, ಮಂಜುನಾಥ ಕೊಡಗನೂರ, ಪರುಶರಾಮ ಮಾದರ, ರಸೂಲ ಬಾಗಿ, ವಿಠಲ ಮತ್ತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು
Formula E race; ಫಾರ್ಮುಲಾ-ಇ ರೇಸ್ ಪ್ರಕರಣ: ಕೆಟಿಆರ್ ಮೇಲೆ ಎಸಿಬಿ ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.