ಪ್ರೇಮಿಗಳ ದಿನಕ್ಕೆ ರೀ ರಿಲೀಸ್ ಆಗಲಿದೆ ಈ ಸೂಪರ್ ಹಿಟ್ ಲವ್ ಸ್ಟೋರಿ ಸಿನಿಮಾಗಳು
Team Udayavani, Feb 10, 2024, 2:58 PM IST
ಚೆನ್ನೈ: 2018 ರಲ್ಲಿ ವಿಜಯ್ ಸೇತುಪತಿ – ತ್ರಿಷಾ ಕೃಷ್ಣನ್ ಲವ್ ಬರ್ಡ್ಸ್ ಆಗಿ ಕಾಣಿಸಿಕೊಂಡಿದ್ದ, ರೊಮ್ಯಾಂಟಿಕ್ ಡ್ರಾಮಾ ʼ96ʼ ಸಿನಿಮಾ ಪ್ರೇಮಿಗಳ ದಿನಕ್ಕೆ ಮತ್ತೆ ಥಿಯೇಟರ್ ಗೆ ಲಗ್ಗೆ ಇಡಲಿದೆ.
ಪ್ರೇಮ್ ಕುಮಾರ್ ನಿರ್ದೇಶನದಲ್ಲಿ ಬಂದಿದ್ದ, ʼ96ʼ ಸಿನಿಮಾಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. 1996 ರ ಬ್ಯಾಚ್‌ನ ಇಬ್ಬರು ವಿದ್ಯಾರ್ಥಿಗಳ ನಡುವಿನ ಲವ್ ಸ್ಟೋರಿ ಹಾಗೂ ಆ ಬಳಿಕದ ರೀ ಯೂನಿಯನ್ ಕಥೆಯನ್ನು ಸೊಗಸಾಗಿ ಕಟ್ಟಿಕೊಡಲಾಗಿತ್ತು.
ಈ ಸಿನಿಮಾ ಕಾಲಿವುಡ್ ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಸೇತುಪತಿ ಹಾಗೂ ತ್ರಿಷಾ ಮೊದಲ ಬಾರಿ ಆನ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಓಟಿಟಿಯಲ್ಲಿ ಬಂದ ಬಳಿಕ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತ್ತು. ಕನ್ನಡದಲ್ಲಿ ಪ್ರೀತಂ ಗುಬ್ಬಿ ಅವರು ʼ99ʼ ಎಂದು ಸಿನಿಮಾವನ್ನು ರಿಮೇಕ್ ಮಾಡಿದ್ದರು. ಇದರಲ್ಲಿ ಗಣೇಶ್ – ಭಾವನಾ ಅವರು ಕಾಣಿಸಿಕೊಂಡಿದ್ದರು. ಪ್ರೇಮ್ ಕುಮಾರ್ ಅವರೇ ತೆಲುಗಿನಲ್ಲಿ ʼ96ʼ ಸಿನಿಮಾವನ್ನು ʼಜಾನುʼ ಎಂದು ರಿಮೇಕ್ ಮಾಡಿದ್ದರು.
ಪ್ರೇಮಿಗಳ ದಿನದಂದು(ಫೆ.14 ರಂದು) ʼ96ʼ ಸಿನಿಮಾ ರೀ ರಿಲೀಸ್ ಆಗಲಿದೆ. ಚೆನ್ನೈನ ಕಮಲಾ ಥಿಯೇಟರ್ ನಲ್ಲಿ ಸಿನಿಮಾ ಮತ್ತೆ ರಿಲೀಸ್ ಆಗಲಿದೆ. ಒಂದು ಟಿಕೆಟ್ ಗೆ 96 ರೂಪಾಯಿಯನ್ನು ನಿಗದಿಪಡಿಸಲಾಗಿದೆ.
ಟಾಲಿವುಡ್ ನಲ್ಲಿ 2022 ರಲ್ಲಿ ತೆರೆಕಂಡ ಸೂಪರ್ ಹಿಟ್ ಲವ್ ಸ್ಟೋರಿ ʼಸೀತಾ ರಾಮಂʼ ಸಿನಿಮಾ ಕೂಡ ಪ್ರೇಮಿಗಳ ದಿನದಂದು ರೀ – ರಿಲೀಸ್ ಆಗಲಿದೆ. ದುಲ್ಕರ್ ಸಲ್ಮಾನ್ – ಮೃಣಾಲ್ ಠಾಕೂರ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ರೀ – ರಿಲೀಸ್ ಆಗಲಿರುವ ಕುರಿತು ವೈಜಯಂತಿ ಮೂವೀಸ್ ಪೋಸ್ಟರ್ ಮೂಲಕ ಹೇಳಿದೆ.
ಇದಲ್ಲದೇ ಇತ್ತೀಚೆಗೆ ಮಾಲಿವುಡ್ ನ ಸೂಪರ್ ಹಿಟ್ ಸಿನಿಮಾ ʼಪ್ರೇಮಂʼ ಕೂಡ ಚೆನ್ನೈನ ಕೆಲ ಥಿಯೇಟರ್ ನಲ್ಲಿ ರೀ ರಿಲೀಸ್ ಆಗಲಿದೆ ಎನ್ನಲಾಗಿದೆ. ಈ ಸಿನಿಮಾಕ್ಕೆ ತಮಿಳುನಾಡಿನಲ್ಲಿ ಬೇಡಿಕೆ ಹೆಚ್ಚಾದ ಕಾರಣ ಸಿನಿಮಾವನ್ನು ರೀ – ರಿಲೀಸ್ ಮಾಡಲಾಗುತ್ತಿದೆ ಎನ್ನಲಾಗಿದೆ.
Big #ValentineDay Re-Release on
Feb 14 all over #TamilNadu – the @VijaySethuOffl – @trishtrashers– @MadrasEnterpriz #Prem
Evergreen Romantic Classic -96!#TN Re-Release via K M SUNDARAM PICTURES” @kmspictures_At #KamalaCinemas 96 for ₹96 per ticket! pic.twitter.com/VyFrMLsDw0
— Done Channel (@DoneChannel1) February 9, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.