Pranayam Movie Review; ಪ್ರೀತಿಯ ನೋಟ ಮತ್ತು ಆತ್ಮದ ಕಾಟ
Team Udayavani, Feb 10, 2024, 3:53 PM IST
ಒಂದು ಕಡೆ ರೊಮ್ಯಾಂಟಿಕ್, ಮತ್ತೂಂದು ಕಡೆ ಫ್ಯಾಮಿಲಿ ಡ್ರಾಮಾ, ಇನ್ನೊಂದು ಕಡೆ ಹಾರರ್ ಛಾಯೆ… ಇವೆಲ್ಲವನ್ನು ಹೊತ್ತುಬಂದಿರುವ ಸಿನಿಮಾ “ಪ್ರಣಯಂ’. ಸಿನಿಮಾ ಶೀರ್ಷಿಕೆಗೆ ತಕ್ಕಂತೆ ನವಜೋಡಿಯ ಪ್ರೀತಿ, ಪ್ರಣಯಕ್ಕೆ ಹೆಚ್ಚು ಒತ್ತುಕೊಟ್ಟಿರುವ ಸಿನಿಮಾವಿದು.
ನಿಶ್ಚಿತಾರ್ಥ, ಮದುವೆ, ತುಂಬು ಕುಟುಂಬ… ಇಂತಹ ಅಂಶಗಳೊಂದಿಗೆ ತೆರೆದುಕೊಳ್ಳುವ ಸಿನಿಮಾ ಮುಂದೆ ಸಾಗುತ್ತಾ ತನ್ನ ಮಗ್ಗುಲು ಬದಲಿಸುತ್ತದೆ. ನಿರ್ದೇಶಕರು ಪ್ರತಿಯೊಂದು ದೃಶ್ಯವನ್ನು ಸುಂದರವಾಗಿ, ಅದ್ಧೂರಿಯಾಗಿ ತೋರಿಸಬೇಕೆಂದು ಪ್ರಯತ್ನಿಸಿರುವುದು ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಇದೇ ಕಾರಣದಿಂದ ಆಗಾಗ ಕಥೆಗಿಂತ, ಸನ್ನಿವೇಶಗಳೇ ಹೆಚ್ಚು ಮಹತ್ವ ಪಡೆದುಕೊಳ್ಳುವುದು.
ಆರಂಭದಿಂದ ಜಾಲಿರೈಡ್ ಮಾಡಿಕೊಂಡು ಬಂದ ನಿರ್ದೇಶಕರು ಸಿನಿಮಾದ ಟ್ವಿಸ್ಟ್‌ಗಳನ್ನು ಕಡೆಯ 20 ನಿಮಿಷದಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಕಾರಣದಿಂದ ರೊಮ್ಯಾನ್ಸ್ ಮೂಡ್ ನಿಂದ ಪ್ರೇಕ್ಷಕರು ಕೂಡಾ ಹಾರರ್ ಫೀಲ್‌ಗೆ ಬರಬೇಕಾಗುತ್ತದೆ. ಅಷ್ಟಕ್ಕೂ ರೊಮ್ಯಾಂಟಿಕ್ ಸಿನಿಮಾ ಹಾರರ್ ಹೇಗಾಯಿತು ಎಂದು ನೀವು ಕೇಳಬಹುದು. ಅದೇ ಸಿನಿಮಾದ ಹೈಲೈಟ್.
ಇಲ್ಲೊಂದಿಷ್ಟು ರೋಚಕ ಅಂಶಗಳು ಸಾಗುವ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತದೆ. ಇಡೀ ಸಿನಿಮಾವನ್ನು ಸುಂದರವಾಗಿಸುವಲ್ಲಿ ಛಾಯಾಗ್ರಹಣದ ಪಾತ್ರ ಮಹತ್ವದ್ದು. ಕಥೆಗೆ ಪೂರಕವಾದ ಪರಿಸರವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಅದ್ಭುತವಾದ ಲೈಟಿಂಗ್ ಪರಿಸರ ಹಾಗೂ ಕಥೆಯ ಆಶಯವನ್ನು ಚೆಂದಗಾಣಿಸಿದೆ.
ನಾಯಕ ರಾಜವರ್ಧನ್ ಆ್ಯಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆದರೆ, ಇತರ ದೃಶ್ಯಗಳಲ್ಲಿ ಇನ್ನೊಂದಿಷ್ಟು ಪಳಗಬೇಕಿದೆ. ನಾಯಕಿ ನೈನಾ ಗಂಗೂಲಿ ಮೈ ಚಳಿ ಬಿಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ರೊಮ್ಯಾಂಟಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆನ್ನುವವರಿಗೆ “ಪ್ರಣಯಂ’ ಒಳ್ಳೆಯ ಆಯ್ಕೆಯಾಗಬಹುದು.
ಆರ್‌ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.