U-19 World Cup; ಭಾರತ vs ಆಸ್ಟ್ರೇಲಿಯ ಫೈನಲ್: ನಿರೀಕ್ಷೆ ಹುಟ್ಟಿಸಿರುವ ಟಾಪ್ ಆಟಗಾರರು
Team Udayavani, Feb 10, 2024, 3:55 PM IST
ಬೆನೋನಿ(ದಕ್ಷಿಣ ಆಫ್ರಿಕಾ): ಇಲ್ಲಿನ ವಿಲೋಮೂರ್ ಪಾರ್ಕ್‌ನಲ್ಲಿ ಭಾನುವಾರ (ಫೆ.11) ಐದು ಬಾರಿಯ ಚಾಂಪಿಯನ್ ಭಾರತ ಅಂಡರ್ 19 ತಂಡವು ಆಸ್ಟ್ರೇಲಿಯ ಯುವ ತಂಡದ ವಿರುದ್ಧ ವಿಶ್ವಕಪ್ ಫೈನಲ್ ಹಣಾಹಣಿ ನಡೆಯಲಿದೆ.
ಇದು ಅಂಡರ್ 19 ವಿಶ್ವಕಪ್‌ನಲ್ಲಿ ಭಾರತದ ಒಂಬತ್ತನೇ ಫೈನಲ್ ಆಗಿದ್ದರೆ, ಮೂರು ಬಾರಿ ಗೆದ್ದಿರುವ ಆಸ್ಟ್ರೇಲಿಯ ತನ್ನ ಆರನೇ ಫೈನಲ್‌ನಲ್ಲಿ ಕಣಕ್ಕಿಳಿಯಲಿದೆ.
ಉದಯ್ ಸಹರನ್ ನಾಯಕತ್ವದ ಭಾರತ ಯುವ ಪಡೆ ಈ ಟೂರ್ನಿಯಲ್ಲಿ ಇದುವರೆಗೆ ಅಜೇಯಯಾತ್ರೆ ನಡೆಸಿದೆ. ಹಗ್ ವೀಬ್‌ಗೆನ್ ನಾಯಕತ್ವದ ಆಸೀಸ್ ತಂಡವೂ ಇಲ್ಲಿಯವರೆಗೆ ವಿಜಯದ ಓಟವನ್ನು ದಾಖಲಿಸಿಕೊಂಡು ಬಂದಿದ್ದು, ಸೆಮಿಫೈನಲ್ ನಲ್ಲಿ ಪಾಕಿಸ್ಥಾನ ವಿರುದ್ಧ ಒಂದು ವಿಕೆಟ್ ರೋಚಕ ಜಯ ಸಾಧಿಸಿತ್ತು.
ಉಭಯ ತಂಡಗಳಲ್ಲಿ ನಿರೀಕ್ಷೆ ಹುಟ್ಟಿಸಿರುವ ಯುವ ಆಟಗಾರರು
ಉದಯ್ ಸಹರಾನ್
ಭಾರತ ಯುವ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವ ನಾಯಕ ಉದಯ್ ಸಹರಾನ್ ಅವರು 64.83ರ ಸರಾಸರಿಯಲ್ಲಿ 389 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಅಗ್ರ ಸ್ಕೋರರ್ ಆಗಿ ಸಾಮರ್ಥ್ಯ ತೋರಿದ್ದಾರೆ. ಉದಯ್ ಭಾರತದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದು, ಇಲ್ಲಿಯವರೆಗೆ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿ ತಂಡದ ಫೈನಲ್ ಪ್ರವೇಶದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಮುಶೀರ್ ಖಾನ್
ಭಾರತದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ ಗೋಚರಿಸಿರುವ ಇನ್ನೋರ್ವ ಭರವಸೆಯ ಆಟಗಾರ ಮುಶೀರ್ ಖಾನ್ ಅವರು ಸರಣಿಯಲ್ಲಿ, ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ 338 ರನ್‌ಗಳು 67.60 ಸರಾಸರಿಯಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ 101.19 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಮುಶೀರ್ ಎರಡು ಆಕರ್ಷಕ ಶತಕಗಳನ್ನು ಬಾರಿಸಿದ್ದು, ಅವರ ಗರಿಷ್ಠ ಸ್ಕೋರ್ 131 ರನ್.
ಸೌಮಿ ಪಾಂಡೆ
ಎಡಗೈ ಸ್ಪಿನ್ನರ್ ಸೌಮಿ ಪಾಂಡೆ ಬಹುತೇಕ ರವೀಂದ್ರ ಜಡೇಜಾ ಅವರ ಪ್ರತಿಬಿಂಬ ಎಂದು ಪರಿಗಣಿಸಲ್ ಪಟ್ಟಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ 2.44 ರ ಎಕಾನಮಿಯೊಂದಿಗೆ ಸೌಮಿ ಅವರು ಈ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಹ್ಯಾರಿ ಡಿಕ್ಸನ್
ಆಸ್ಟ್ರೇಲಿಯದ ಆರಂಭಿಕ ಆಟಗಾರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, ಡಿಕ್ಸನ್ ಆರು ಇನ್ನಿಂಗ್ಸ್‌ಗಳಲ್ಲಿ 44.50 ಸರಾಸರಿ ಮತ್ತು 82.40 ಸ್ಟ್ರೈಕ್ ರೇಟ್ ನೊಂದಿಗೆ 267 ರನ್ ಗಳಿಸಿದ್ದಾರೆ. ಎಡಗೈ ಆಟಗಾರ ಡೇವಿಡ್ ವಾರ್ನರ್ ಅವರ ಆಟದ ವಿಧಾನ ಮತ್ತು ಹೊಡೆತಗಳನ್ನು ಕಾಣಿಸಿಕೊಡುವ ಸಾಮರ್ಥ್ಯ ಉಳ್ಳವರು.
ಟಾಮ್ ಸ್ಟ್ರೇಕರ್
ಆಸ್ಟ್ರೇಲಿಯದ ಬೌಲಿಂಗ್ ಬಲವಾಗಿರುವ ಟಾಮ್ ಸ್ಟ್ರೇಕರ್ ವೇಗದ ಬೌಲರ್ ಆಗಿ ವಿಶೇಷವಾಗಿ ಬೆನೋನಿ ಪಿಚ್ ಬೌನ್ಸ್‌ಗೆ ಸಹಕಾರಿಯಾಗುವ, ಬ್ಯಾಟ್ಸ್ ಮ್ಯಾನ್ ಗಳಿಗೆ ಸವಾಲೆಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಬಲಗೈ ವೇಗಿ ಪಾಕಿಸ್ಥಾನ ವಿರುದ್ಧದ ಸೆಮಿಫೈನಲ್‌ನಲ್ಲಿಆರು ವಿಕೆಟ್‌ಗಳನ್ನು ಪಡೆದು ಘಾತಕ ಬೌಲಿಂಗ್ ದಾಳಿ ನಡೆಸಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ 12 ವಿಕೆಟ್ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
Intra-Squad Match: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸ… ಅಭ್ಯಾಸ ಪಂದ್ಯ ಕೈಬಿಟ್ಟ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.